ಮೈಸೂರಿನ ಸಂಪೂರ್ಣ ಮಾಹಿತಿ ಈಗ ಅಂಗೈಯಲ್ಲಿ!

Written By: Ramesh
Subscribe to Oneindia Kannada

ಮೈಸೂರು, ಅಕ್ಟೋಬರ್. 04 : ಅರಮನೆ ನಗರಿ ಮೈಸೂರಿನ ಎಲ್ಲಾ ಮಾಹಿತಿ ಈಗ ಅಂಗೈಯಲ್ಲಿ ತಿಳಿದುಕೊಳ್ಳಬಹುದು. 'ಐ ಲವ್ ಮೈಸೂರು' ಎಂಬ ಅಪ್ಲಿಕೇಶನ್ ಮೂಲಕ ಬರುವ ಪ್ರವಾಸಿಗರಿಗೆ ನಗರದ ಸಮಗ್ರ ಮಾಹಿತಿ ಒದಗಿಸಲು ಮೈಸೂರು ಜಿಲ್ಲಾಡಳಿತ ವಿನೂತನ ಕಾರ್ಯಕ್ಕೆ ಮುಂದಾಗಿದೆ.

ಮೈಸೂರು ನಗರದ ಸಮಗ್ರ ಮಾಹಿತಿ ಒದಗಿಸುವ 'ILUMYSURU'ಎಂಬ ಮೊಬೈಲ್ ಅಪ್ಲಿಕೇಶನನ್ನು ಮೈಸೂರು ಜಿಲ್ಲಾಧಿಕಾರಿ ಡಿ.ರನ್ದೀಪ್ ಅವರು ಬಿಡುಗಡೆ ಮಾಡಿದರು. ಥೀಯೋರಂ ಸಂಸ್ಥೆ ನಿರ್ಮಿಸಿರುವ ಈ ಅಪ್ಲಿಕೇಶನ್ ಸಂಪೂರ್ಣ ಉಚಿತವಾಗಿದ್ದು, ಇದರಲ್ಲಿ ಮೈಸೂರಿನ ಸ್ಟಾರ್ ಹೋಟೆಲ್ ಗಳು, ಪ್ರವಾಸಿ ತಾಣಗಳು ಮೊದಲಾದ ಮಾಹಿತಿಗಳು ಈ ಅಪ್ಲಿಕೇಶನ್ ನಲ್ಲಿ ಲಭ್ಯವಿದೆ.

Mysuru

ಸದ್ಯಕ್ಕೆ ಇಂಗ್ಲಿಷ್‌ ಭಾಷೆಯಲ್ಲಿ ಮಾತ್ರ ಮಾಹಿತಿ ಲಭ್ಯವಿದ್ದು. ಶೀಘ್ರದಲ್ಲೇ 'ಐ ಲವ್ ಮೈಸೂರು' ಅಪ್ಲಿಕೇಶನ್ ನಲ್ಲಿ ಕನ್ನಡ ಭಾಷೆ ಅಳವಡಿಸಲಾಗುವುದು ಎಂದು ಕಂಪೆನಿಯ ಉಪಾಧ್ಯಕ್ಷ ಭಾಸ್ಕರ್ ಕಳಲೆ ತಿಳಿಸಿದರು.

ಈ "ಐ ಲವ್ ಮೈಸೂರು ಮೊಬೈಲ್ ಅಪ್ಲಿಕೇಶನ್ ಮೂಲಕ ಮೈಸೂರಿಗೆ ಬರುವ ಪ್ರವಾಸಿಗರು ನಗರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದಾಗಿದೆ.ಇನ್ನೇಕೆ ತಡ ILUMYSURU ಎಂಬ ಅಪ್ಲಿಕೇಶನ್ ಹೋಗಿ ನಿಮಗೆ ಬೇಕಾದ ಮೈಸೂರು ನಗರದ ಬಗ್ಗೆ ತಿಳಿಯಿರಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Developed by Theorem Pvt ltd the new mobile app ILUMYSURU aims at providing complete information on the Mysuru city. The app which was released by Mysuru DC D Randeep, hotel, tourist locations, institutions and other useful information about the Mysuru city.
Please Wait while comments are loading...