ಮೈಸೂರಿನಲ್ಲಿ ಅಕ್ರಮ ಸಂಬಂಧಕ್ಕೆ ಡಬಲ್ ಮರ್ಡರ್

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಡಿಸೆಂಬರ್ 14: ಅಕ್ರಮ ಸಂಬಂಧ ಹೊಂದಿದ್ದ ಪೂಜಾರಿಯೊಬ್ಬ ಹಣಕಾಸಿನ ವಿಚಾರವಾಗಿ ಆಕೆ ಮತ್ತು ಮಗಳನ್ನು ಕೊಂದು ಬಾವಿಗೆ ಎಸೆದ ಘಟನೆ ಮೈಸೂರು ಸಮೀಪದ ಉತ್ತನಹಳ್ಳಿಯಲ್ಲಿ ನಡೆದಿದೆ.

ಕೊಲೆಯಾದವರನ್ನು ಸವಿತಾ ಹಾಗೂ ಆಕೆಯ ಮಗಳು ಕೀರ್ತನ ಎಂದು ಗುರುತಿಸಲಾಗಿದ್ದು, ಉತ್ತನಹಳ್ಳಿಯ ಶನಿದೇವರಗುಡ್ಡಪ್ಪ ಮಹೇಶ ಕೊಲೆಗೈದ ಆರೋಪಿ. ಈ ಹಿಂದೆ ಆರೋಪಿ ಮಹೇಶ್, ಸವಿತಾ ಬಳಿ ಚಿನ್ನ ಹಾಗೂ ಹಣವನ್ನು ಸಾಲ ಪಡೆದಿದ್ದ, ಈ ಹಣ ಮತ್ತು ಚಿನ್ನವನ್ನು ವಾಪಸ್ ಕೇಳಿದ್ದಕ್ಕೆ ತಾಯಿಮಗಳನ್ನು ಕೊಲೆಗೈದಿದ್ದಾನೆ ಎಂದು ತಿಳಿದು ಬಂದಿದೆ.[ಮೈಸೂರಿನಲ್ಲಿ ವೇಶ್ಯಾವಾಟಿಕೆ: ಯುವತಿಯರ ರಕ್ಷಣೆ]

mother and dauther

ಮೈಸೂರು ತಾಲೂಕು ಉತ್ತನಹಳ್ಳಿಯ ಸವಿತಾಳನ್ನು ಕೀಳನಪುರಕ್ಕೆ ಕೊಟ್ಟು ವಿವಾಹ ಮಾಡಲಾಗಿತ್ತು. ಆದರೆ ಅಕ್ರಮ ಸಂಬಂಧವಿದ್ದ ಕಾರಣ ಮತ್ತೆ ಉತ್ತನಹಳ್ಳಿಗೆ ಪೂಜಾರಿ ರಮೇಶ ಸವಿತಾಳನ್ನು ಕರೆತಂದಿದ್ದ. ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ಜಗಳ ತೆಗೆದಿತ್ತು. ಬಳಿಕ ಪೂಜಾರಿ ಮಹೇಶ ಉತ್ತನಹಳ್ಳಿ ತೋಟವೊಂದರಲ್ಲಿ ತಾಯಿ ಮಗಳನ್ನು ಹೊಡೆದು ಬಾವಿಗೆ ಎಸೆದಿದ್ದಾನೆ ಎಂದು ತಿಳಿದುಬಂದಿದೆ.[ಪೊಲೀಸ್ ಪೇದೆಯಿಂದ ಮಹಿಳೆಗೆ ಲೈಂಗಿಕ ಕಿರುಕುಳ]

priest

ಮೈಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ರಮ ಸಂಬಂಧ ಹೊಂದಿದ್ದ ಆರೋಪಿ ಮಹೇಶನನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆಗೊಳಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Illicit relationship accuse; priest murdered the mother-daughter in mysuru, priest arrested.
Please Wait while comments are loading...