ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜದಿಂದ ಜೆಡಿಎಸ್ ಟಿಕೆಟ್ ಸಿಗದಿದ್ದರೆ ನನ್ನ ದಾರಿ ನನಗೆ: ಹರೀಶ್ ಗೌಡ

By Yashaswini
|
Google Oneindia Kannada News

ಮೈಸೂರು, ಜನವರಿ 20 : "ನನಗೆ ಟಿಕೆಟ್ ಸಿಕ್ಕರೆ ಸಾಕು. ಆ ಪಕ್ಷ- ಈ ಪಕ್ಷ ಅಂತ ನೋಡದೆ ಸ್ಪರ್ಧಿಸಿ, ಗೆಲ್ಲುತ್ತೇನೆ. ಅಕಸ್ಮಾತ್ ಯಾರೂ ಟಿಕೆಟ್ ನೀಡದಿದ್ದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ "ಎಂದು ಜೆಡಿಎಸ್ ಟಿಕೆಟ್ ಅಕಾಂಕ್ಷಿ ಆಗಿರುವ ಕೆ.ಹರೀಶ್ ಗೌಡ ಹೇಳಿದರು.

ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ತಮ್ಮ ಜೀವನಗಾಥೆಯ 'ನಿಮ್ಮೊಳಗೊಬ್ಬ' ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿ, ನನಗೆ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಅವರ ಕಾರ್ಯವೈಖರಿ ಇಷ್ಟವಾಗಿ ಉದ್ಯೋಗವನ್ನು ತ್ಯಜಿಸಿ, ಜೆಡಿಎಸ್ ಪಕ್ಷ ಸೇರಿದ್ದೆ. ಕಳೆದ ಬಾರಿ ವರಿಷ್ಠರ ಆಸೆಯಂತೆ ಶಂಕರಲಿಂಗೇಗೌಡರಿಗೆ ಅಭ್ಯರ್ಥಿ ಸ್ಥಾನವನ್ನು ಬಿಟ್ಟಿದ್ದೆ ಎಂದರು.

ಹುಣಸೂರು ನಗರಸಭೆಯಲ್ಲಿ 'ಕೈ' ಮುರಿದ ಪ್ರತಾಪ್-ವಿಶ್ವನಾಥ್ ಜೋಡಿಹುಣಸೂರು ನಗರಸಭೆಯಲ್ಲಿ 'ಕೈ' ಮುರಿದ ಪ್ರತಾಪ್-ವಿಶ್ವನಾಥ್ ಜೋಡಿ

ಆದರೆ, ಏನೋ ವ್ಯತ್ಯಾಸವಾಗಿ ಅವರು ಸೋತಿದ್ದರು. ಅದಾದ ಬಳಿಕ ನಿರಂತರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ರಂಗಪ್ಪ ಅವರು ನನಗೆ ತುಂಬಾ ಆತ್ಮೀಯರು. ವೈಯಕ್ತಿಕವಾಗಿ ಅವರ ಮೇಲೆ ಗೌರವವಿದೆ. 2013ರಲ್ಲಿಯೇ ಚಾಮರಾಜ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ವರಿಷ್ಠರ ಮಾತಿನಂತೆ ಶಂಕರಲಿಂಗೇಗೌಡರಿಗೆ ಸಂಪೂರ್ಣ ಸಹಕಾರ ನೀಡಿದೆ ಎಂದರು.

Harish Gowda

"ಮುಂದಿನ ದಿನಗಳಲ್ಲಿ ನಿನಗೆ ಒಳ್ಳೆಯದಾಗುತ್ತೆ ಎಂದು ಪಕ್ಷದ ಹಿರಿಯರು ಹೇಳಿದರು. ಅವರ ಮಾತಿಗೆ ಸಮ್ಮತಿಸಿದೆ. ಆದರೆ ನನಗೆ ಬೇಸರ ಮೂಡಿದೆ. ರಂಗಪ್ಪ ಅವರು ಅಭ್ಯರ್ಥಿಯಾಗುತ್ತಾರೆ ಎಂದು ತಿಳಿದಾಗ ಎರಡು - ಮೂರು ಬಾರಿ ಅವರನ್ನು ಕೇಳಿದೆ. ಆದರೆ ಅವರು ಅದನ್ನು ನಿರಾಕರಿಸಿದ್ದರು. ನನಗೂ ರಾಜಕಾರಣಕ್ಕೂ ಆಗಿ ಬರುವುದಿಲ್ಲ ಎಂದರು. ಪಕ್ಷದ ನಗರ ಅಧ್ಯಕ್ಷನನ್ನಾಗಿ ಮಾಡಿದಾಗ ಎಚ್ಡಿಕೆ ಮತ್ತು ಎಚ್ಡಿಡಿ ಅವರನ್ನು ಕೇಳಿದೆ. ಅವರು ಸಂಪೂರ್ಣ ಭರವಸೆ ನೀಡಿದ್ದರು" ಎಂದರು.

ಕುಮಾರ ಪರ್ವ ಸಮಾವೇಶದಲ್ಲಿ ರಂಗಪ್ಪ ಅವರೇ ಅಭ್ಯರ್ಥಿ ಎಂದು ವಿಶ್ವನಾಥ್ ಹೇಳಿದ್ದರು. ಅಷ್ಟೇ ಅಲ್ಲದೇ ಸಮಾವೇಶಕ್ಕೆ ನನ್ನನ್ನು ಕರೆದಿರಲಿಲ್ಲ. ರಂಗಪ್ಪ ಪಕ್ಷ ಸೇರ್ಪಡೆ ಬಗ್ಗೆ ಕೂಡ ನನ್ನ ಗಮನಕ್ಕೆ ತರಲಿಲ್ಲ. ಆ ವೇಳೆ ರಂಗಪ್ಪನವರು ಚಾಮರಾಜ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿದ್ದರು. ಅದು ನನಗೆ ಬೇಸರ ತರಿಸಿತು ಎಂದರು.

ಪಕ್ಷೇತರ ಸ್ಪರ್ಧೆಗೆ ಬೆಂಬಲಿಗರ ಒತ್ತಾಯ
ಇತ್ತ ನನ್ನ ಬೆಂಬಲಿಗರು ಪಕ್ಷೇತರವಾಗಿ ಚುನಾವಣೆ ಎದುರಿಸಿ ಎಂದು ಧೈರ್ಯ ತುಂಬಿದ್ದಾರೆ. ಚಾಮರಾಜ ಕ್ಷೇತ್ರದ ಎಲ್ಲಾ ವಾರ್ಡ್ ಗಳಲ್ಲೂ ಸಭೆ ನಡೆಸಿದ್ದೇನೆ. ಹೀಗಾಗಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಕ್ಷೇತ್ರದ ಎಲ್ಲ ಭಾಗದಲ್ಲೂ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದರು.

ನನಗೆ ಜೆಡಿಎಸ್ ನಲ್ಲಿ ಟಿಕೆಟ್ ಕೈ ತಪ್ಪಲು ಕಾರಣರಾದವರ ಹೆಸರುಗಳನ್ನು ಹೇಳಲು ಇಷ್ಟ ಇಲ್ಲ. ನಾನಾಗಿಯೇ ಪಕ್ಷದಿಂದ ಹೊರಬಂದಿಲ್ಲ. ಪಕ್ಷದಿಂದಲೇ ನನ್ನನ್ನು ಹೊರ ಹಾಕಿದ್ದಾರೆ. ನನಗೆ ಈಗಲೂ ದೇವೇಗೌಡರು, ಕುಮಾರಸ್ವಾಮಿ ಮೇಲೆ ಅಪಾರ ಗೌರವವಿದೆ ಎಂದು ಹೇಳಿದರು.

ಬಿಜೆಪಿ ಸೇರ್ಪಡೆ ಸುಳ್ಳು ವದಂತಿ
ನಾನು ಬಿಜೆಪಿ ಸೇರ್ಪಡೆಗೊಳ್ಳುತ್ತೇನೆ ಎಂಬ ವದಂತಿ ಹಬ್ಬಿತ್ತು. ಆದರೆ ಅದೆಲ್ಲ ಸುಳ್ಳು. ನಾನು ಯಾವುದೇ ಪಕ್ಷಕ್ಕೆ ಹೋಗಿಲ್ಲ. ಹಾಗಂತ ಕೈಕಟ್ಟಿ ಕೂರುವುದಿಲ್ಲ. ಒಳ್ಳೆಯ ಅವಕಾಶಗಳು ಸಿಕ್ಕರೆ, ಬೆಂಬಲಿಗರ ಬಳಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹರೀಶ್ ಗೌಡ ಹೇಳಿದರು.

ಹರೀಶ್ ಗೌಡ ನಮ್ಮ ಹುಡುಗ ಎಂದಿರುವ ರಂಗಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಯಾರ ಹುಡುಗನೂ ಅಲ್ಲ. ನಾನು ಚಾಮರಾಜ ಕ್ಷೇತ್ರದ ಹುಡುಗ. ಹನ್ನೆರಡು ವರ್ಷದಿಂದ ಜನರ ಸೇವೆ ಮಾಡುತ್ತಾ ಬಂದಿದ್ದೇನೆ. ಒಟ್ಟಾರೆಯಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ. ನಾಳೆಯಿಂದ ಚಾಮರಾಜ ಕ್ಷೇತ್ರದಲ್ಲಿ ಪಾದಯಾತ್ರೆ ಕೈಗೊಳ್ಳಲಿದ್ದೇನೆ. ಮನೆ ಮನೆಗೆ ತೆರಳಿ ಜನರ ಬೆಂಬಲ ಕೇಳಲಿದ್ದೇನೆ ಎಂದರು.

English summary
If I won't get JDS ticket for Chamaraja constituency, will contest independently, says JDS ticket aspirant Harish Gowda in Mysuru at book release function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X