ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಲ್ಲಿ ಮಹಿಳೆಯರಿಗೆ ಇಡ್ಲಿ ತಿನ್ನುವ ಸ್ಪರ್ಧೆ: ಗೆದ್ದೋರು ತಿಂದದ್ದೆಷ್ಟು?

|
Google Oneindia Kannada News

ಮೈಸೂರು, ಅಕ್ಟೋಬರ್. 11 : ಮಹಿಳೆಯರಿಗೆ ಇಡ್ಲಿ ತಿನ್ನುವ ಸ್ಪರ್ಧೆ ಹಾಗೂ ಗ್ಯಾಸ್ ರಹಿತ ಅಡುಗೆ ಮಾಡುವ ಸ್ಪರ್ಧೆಯನ್ನು ಇಂದು (ಅ.11) ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ 21 ಮಹಿಳೆಯರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ಪುಟಾಣಿಯೊಬ್ಬ ಲಾಟರಿ ಎತ್ತುವ ಮೂಲಕ ತಲಾ ಹತ್ತು ಮಂದಿಯನ್ನು ಆಯ್ಕೆ ಮಾಡಿದನು.

ಮೊದಲಿಗೆ ಮಹಿಳೆಯರಿಗೆ ಇಡ್ಲಿ ತಿನ್ನುವ ಸ್ಪರ್ಧೆ ಆರಂಭವಾಯಿತು. ಮಹಿಳೆಯರೂ ಕೂಡ ಸಾಕಷ್ಟು ಇಡ್ಲಿ ತಿಂದು ಗೆಲ್ಲುವ ಹುಮ್ಮಸ್ಸಿನಲ್ಲಿದ್ದರು. ಅದು ಸಾಧ್ಯವಾಗಲಿಲ್ಲ. ಆದರೆ ಸ್ಪರ್ಧೆ ಆರಂಭವಾದ ನಂತರ ಕೇವಲ 1.30 ನಿಮಿಷದಲ್ಲಿ 6 ಇಡ್ಲಿ ತಿಂದು ಲಲಿತಾ ಪ್ರಥಮ ಸ್ಥಾನ ಪಡೆದರು.

ಮೈಸೂರು ದಸರಾದಲ್ಲಿ 'ರಂಗೋಲಿ' ಬಗ್ಗೆ ಸಚಿವೆ ಜಯಮಾಲ ಆಡಿದ ಮಾತುಗಳಿವು..ಮೈಸೂರು ದಸರಾದಲ್ಲಿ 'ರಂಗೋಲಿ' ಬಗ್ಗೆ ಸಚಿವೆ ಜಯಮಾಲ ಆಡಿದ ಮಾತುಗಳಿವು..

ನಂತರ ಗ್ಯಾಸ್ ರಹಿತ ಅಡುಗೆ ಮಾಡುವ ಸ್ಫರ್ಧೆ ಕೂಡ ನೋಡುಗರ ಗಮನ ಸೆಳೆಯಿತು.

Idly eating competition for women was organized today.

ಅಕ್ಟೋಬರ್. 11 ರ ವಿವಿಧ ವೇದಿಕೆಗಳ ಮೈಸೂರು ದಸರಾ ಕಾರ್ಯಕ್ರಮಗಳ ವಿವರಅಕ್ಟೋಬರ್. 11 ರ ವಿವಿಧ ವೇದಿಕೆಗಳ ಮೈಸೂರು ದಸರಾ ಕಾರ್ಯಕ್ರಮಗಳ ವಿವರ

ಗಬ ಗಬನೆ ಇಡ್ಲಿ ತಿಂದ ಲಲಿತಾ ಮಾತನಾಡಿ, ನಾನು ಗೆಲ್ಲುತ್ತೇನೆ ಎಂದು ಭಾವಿಸಿರಲಿಲ್ಲ. ಮನೆಯಲ್ಲಿ ಕೆಲಸಕ್ಕೆ ಹೋಗುವ ವೇಳೆ ಬೇಗ ಬೇಗ ಊಟ ಮಾಡಿ ಹೊರಡುತ್ತಿದ್ದೆ. ಅದು ಸ್ಪರ್ಧೆಗೆ ಹೋಗುವ ಮಟ್ಟಕ್ಕೆ ನನ್ನನ್ನು ಕರೆದುಕೊಂಡು ಹೋಗುತ್ತದೆ ಎಂದು ಭಾವಿಸಿರಲಿಲ್ಲ. ನಾನು ಬೇಗ ತಿಂದು ಮುಗಿಸಿದ್ದು ಒಮ್ಮೆ ನನಗೆ ಆಶ್ಚರ್ಯ ತರಿಸುವಂತಿತ್ತು.

Idly eating competition for women was organized today.

ಬೊಂಬೆಗಳ ದರ್ಬಾರ್ ನೋಡಲು ಅರಮನೆ ನಗರಿಗೆ ಇಂದೇ ಬನ್ನಿ...ಬೊಂಬೆಗಳ ದರ್ಬಾರ್ ನೋಡಲು ಅರಮನೆ ನಗರಿಗೆ ಇಂದೇ ಬನ್ನಿ...

ಗೆಲ್ಲುತ್ತೇನೆ ಎಂದು ಅಂದುಕೊಂಡಿರಲಿಲ್ಲ ಎಂದು ಮುಗುಳ್ನಕ್ಕರು. ಒಟ್ಟಾರೆ ಗಂಡು ಮಕ್ಕಳಿಗೆ ಸೀಮಿತವಾಗಿದ್ದ ಇಂತಹ ಸ್ಫರ್ಧೆಗಳನ್ನು ದಸರಾ ಸಮಿತಿ ಹೆಣ್ಣು ಮಕ್ಕಳಿಗೂ ಆಯೋಜಿಸಿ ಅವರು ಸಹ ತಾವು ಯಾರಿಗಿಂತ ಕಡಿಮೆ ಇಲ್ಲ ಎಂದು ತೋರಿಸಿದ್ದು ಸಂತಸ ತರಿಸಿತು.

English summary
Idly eating contest and gas-free cooking competition for women today (Oct.11) was organized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X