ಮೈಸೂರು: ದಲ್ಲಾಳಿಗಳ ಪಾಲಾಗುತ್ತಿರುವ ಕಾರ್ಮಿಕರ ಗುರುತಿನ ಚೀಟಿ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ 2 : ಕಾರ್ಮಿಕ ಇಲಾಖೆಯಿಂದ ನೀಡಲಾಗುತ್ತಿರುವ ಕಾರ್ಮಿಕರ ಗುರುತಿನ ಚೀಟಿಗಳು ದುರುಪಯೋಗವಾಗುತ್ತಿದ್ದು ಸರ್ಕಾರದಿಂದ ದೊರೆಯುತ್ತಿರುವ ಸೌಲಭ್ಯಗಳು ದಲ್ಲಾಳಿಗಳ ಪಾಲಾಗುತ್ತಿವೆ. ರಾಜ್ಯ ಸರ್ಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಎಂದು ಕರ್ನಾಟಕ ರಾಜ್ಯ ಭಾರತಮತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಜಿ.ಸಿದ್ದರಾಜು ಆಗ್ರಹಿಸಿದರು.

ಭಾನುವಾರ ಪತ್ರಕರ್ತರ ಸಂಘದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಸಂಘಟಿತ ಶ್ರಮಜೀವಿ ಕಟ್ಟಡ ಕಾರ್ಮಿಕರು ಸೇರಿದಂತೆ ಮನೆ ನಿರ್ಮಾಣದಲ್ಲಿರುವ ಎಲ್ಲ ಕಾರ್ಮಿಕರಿಗೆ ಎಂಜಿನಿಯರ್ ಗಳ ಮನವಿ ಸಹಿ ಆಧರಿಸಿ ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿ ನೀಡಲಾಗುತ್ತಿದೆ. ಗುರುತಿನ ಪತ್ರ ಪಡೆದವರಿಗೆ ಸರ್ಕಾರದಿಂದ ಮಕ್ಕಳ(2) ಮದುವೆಗೆ ಹಾಗೂ ಮೃತಪಟ್ಟಾಗ ರು.50 ಸಾವಿರ ಗಳ ಸಹಾಯ ಧನವನ್ನು ಸರ್ಕಾರದಿಂದ ನೀಡಲಾಗುತ್ತಿದೆ. ಇವು ದಲ್ಲಾಳಿಗಳು, ಬಡ್ಡಿ ವ್ಯಾಪಾರಿಗಳು ಹಾಗೂ ಏಜೆಂಟ್'ಗಳ ಪಾಲಾಗುತ್ತಿವೆ ಎಂದು ಆರೋಪಿಸಿದರು.[ಕಾರ್ಮಿಕರ ಕಷ್ಟಕ್ಕೆ ಕಣ್ಣೀರು ಹಾಕದ ಬೆಂಗಳೂರು]

ID of labor abuse The brokers are getting benefits

ಕೇವಲ 90 ದಿನಗಳಲ್ಲಿ ಬರುವ ಗುರುತಿನ ಚೀಟಿ 9 ತಿಂಗಳಾದರು ದೊರೆಯದೇ ನಿಜವಾದ ಕಾರ್ಮಿಕರು ಪರದಾಡುವಂತಾಗಿದೆ. ಅಲ್ಲದೇ, ಗುರುತಿನ ಚೀಟಿ ಹೊಂದಿದವರಿಗೆ ಉಚಿತ ನಿವೇಶನ ನೀಡಲಾಗುವುದೆಂದು ಸುಳ್ಳು ವದಂತಿಯನ್ನು ಹಬ್ಬಿಸುತ್ತಿರುವ ಕೆಲ ಕಿಡಿಗೇಡಿಗಳು ಚೀಟಿ ಹೆಚ್ಚು ದಲ್ಲಾಳಿಗಳ ಪಾಲಾಗುವಂತೆ ಮಾಡಿದ್ದಾರೆ. ಇದರಿಂದಾಗಿ ನಿಜವಾದ ಫಲಾನುಭವಿಗಳು ಸವಲತ್ತುಗಳಿಂದ ವಂಚಿತರಾಗುತ್ತಿದ್ದು 10 ಜನ ಕಾರ್ಮಿಕರಿಗೆ 5 ಜನ ದಲ್ಲಾಳಿಗಳಿದ್ದಾರೆ ಎಂದು ಕಿಡಿಕಾರಿದರು.[ಕಾರ್ಮಿಕನ ಕಾಡಿಸಿ ಬಸ್ ಕಳೆದುಕೊಂಡ ಕೆಎಸ್ಆರ್‌ಟಿಸಿ!]

ಸರ್ಕಾರ ಹಾಗೂ ಕಾರ್ಮಿಕ ಇಲಾಖೆಯು ನಕಲಿ ಗುರುತಿನ ಚೀಟಿದಾರರಿಗೆ ಕಡಿವಾಣ ಹಾಕುವುದು ಅತಿ ಅವಶ್ಯವಿದ್ದು ಈ ನಿಟ್ಟಿನಲ್ಲಿ ಸಮಗ್ರ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Identification of labor get the brokars. ID of labor abuse The brokers are getting benefits.Workers are demands action in mysuru.
Please Wait while comments are loading...