ತ್ರಿವಳಿ ತಲಾಖ್ ತೀರ್ಪು ಸ್ವಾಗತಾರ್ಹ : ಪ್ರಮೋದ್ ಮುತಾಲಿಕ್

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು ,ಆಗಸ್ಟ್ 22: ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ವಿಚಾರವಾಗಿ ನೀಡಿರುವ ತೀರ್ಪು ಸ್ವಾಗತಾರ್ಹಗಿದ್ದು, ಇದನ್ನು ಶ್ರೀ ರಾಮ ಸೇನೆ ಸ್ವಾಗತಿಸುತ್ತದೆ ಎಂದು ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

ತ್ರಿವಳಿ ತಲಾಖ್ ಅಸಂವಿಧಾನಿಕ, ಸುಪ್ರಿಂ ಕೋರ್ಟ್ ಐತಿಹಾಸಿಕ ತೀರ್ಪು

ಸುದ್ದಿಗಾರರೊಂದಿಗೆ ಮಾತನಾಡಿದ ಅವರು . ಸುಪ್ರೀಂ ಕೋರ್ಟ್ ನ ಈ ಆದೇಶದಿಂದ ಅನ್ಯಾಯಕ್ಕೆ ಒಳಗಾಗಿದ್ದ ಮಹಿಳೆಯರಿಗೆ ನ್ಯಾಯ ಸಿಕ್ಕಿದಂತಾಗಿದೆ. ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಸೂಕ್ತ ಕಾನೂನು ರಚಿಸಬೇಕಿದೆ. ಕೇಂದ್ರ ಈ ವರೆಗೆ ಹಲವು ಒತ್ತಡಕ್ಕೆ ಮಣಿದು ಕಾನೂನು ತಂದಿರಲಿಲ್ಲ. ಆದರೆ ಈಗ ದೇಶದಲ್ಲಿ ಸಮಾನ ಕಾನೂನು ತರಲು ಇದು ಸೂಕ್ತ ಸಮಯ ಎಂದರು.

I welcome supreme court's decision on triple talaq: Pramod Muthalik in Mysuru

ರಾಜ್ಯದಲ್ಲಿ ಕೆಎಫ್.ಡಿ ಮತ್ತು ಪಿಎಫ್ಐ ಸಂಘಟನೆಗಳನ್ನ ನಿಷೇಧಿಸಬೇಕು. ರಾಜ್ಯದಲ್ಲಿ ೨ ವರ್ಷದಲ್ಲಿ ೨೧ ಮಂದಿ ಹಿಂದೂ ನಾಯಕರ ಹತ್ಯೆಯಲ್ಲಿ ಈ ಸಂಘಟನೆಗಳ ಪಾತ್ರ ಇರೋದು ಸ್ಪಷ್ಟವಾಗಿದೆ. ನಿಷೇಧಿತ ಉಗ್ರವಾದಿ ಸಂಘಟನೆ ಜೊತೆ ಈ ಸಂಘಟನೆಗಳಿಗೆ ಸಂಬಂಧ ಇರುವ ಬಗ್ಗೆ ಕೇರಳದ ಮಾಜಿ ಸಿಎಂ ಕೇಂದ್ರಕ್ಕೆ‌ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸರ್ಕಾರ ಸಂಘಟನೆಗಳ ನಿಷೇಧಕ್ಕೆ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
I welcome supreme court's decision in which it quotes triple talaq is an unconstitutional system, Shir Rama Sena chief Pramod Muthalik told to media in Mysuru on Aug 22nd.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ