ಆಡಳಿತ ನಡೆಸೋದು ಹೇಗೆ ಅಂತ ಕುಮಾರಸ್ವಾಮಿಯಿಂದ ಕಲಿಯಬೇಕಿಲ್ಲ: ಸಿದ್ದು

Posted By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಮಾರ್ಚ್ 10 : ನನಗೇನೂ ಆಡಳಿತ ನಡೆಸೋಕೆ ಬರಲ್ವೇನ್ರಿ? ಕುಮಾರಸ್ವಾಮಿ ಅವರ ಮಾತು ಕೇಳಿ ನಾನು ಆಡಳಿತ ನಡೆಸಬೇಕಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಕ್ಕಲಿಗ ಅಧಿಕಾರಿಗಳನ್ನು ಸಿದ್ದರಾಮಯ್ಯ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಕಿಡಿ ಕಾರಿ, ಅವರು ರಾಜಕೀಯಕ್ಕೆ ಬರುವ ಮುಂಚೆಯೇ ನಾನು ಮಂತ್ರಿಯಾಗಿದ್ದೆ. ಅವರ ಮಾತು ಕೇಳಿ ಆಡಳಿತ ನಡೆಸಬೇಕೆ? ಅವರಿಂದ ರಾಜಕೀಯ ಪಾಠ ಕಲಿಯುವ ಅಗತ್ಯವಿಲ್ಲ. ಚುನಾವಣೆ ಸಂದರ್ಭದಲ್ಲಿ ಏನೇನೋ ಸುಳ್ಳು ಹೇಳುತ್ತಾರೆ ಎಂದರು.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಇನ್ನು ವಿವಾದಿತ ಸ್ಥಳದಲ್ಲಿ ಕಮಿಷನರ್ ಕಚೇರಿ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಜಾಗ ವಿವಾದದಲ್ಲಿರುವುದು ಗೊತ್ತಿಲ್ಲ. ಅಧಿಕಾರಿಗಳನ್ನು ವಿಚಾರಿಸುತ್ತೇನೆ ಎಂದರು. ಇನ್ನು ಲೋಕಾಯುಕ್ತರ ಕೊಲೆ ಯತ್ನ ಪ್ರಕರಣದಲ್ಲಿ ನಾನು ಕ್ರಮ ಕೈಗೊಂಡಿಲ್ಲ. ಗೃಹ ಸಚಿವರೇ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಅವರ ಜೊತೆ ಚರ್ಚಿಸಿ, ಏನಾಗಿದೆ ಎಂದು ತಿಳಿದುದುಕೊಳ್ಳುತ್ತೇನೆ ಎಂದು ಉತ್ತರಿಸಿದರು.

I need not to learn about administration by Kumaraswamy: Siddaramaiah

ರಾಹುಲ್ ಪ್ರವಾಸದ ಬಗ್ಗೆ ಮಾಹಿತಿ
ಮಾರ್ಚ್ 24 ಮತ್ತು 25 ರಾಹುಲ್ ಗಾಂಧಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಮಾರ್ಚ್ 24 ಮತ್ತು 25ರಂದು ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ. 25ರಂದು ಸಂಜೆ 4.30ಕ್ಕೆ ಮೈಸೂರಿನ ಮಹರಾಜ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಐಎಫ್ ಎಸ್ ಅಧಿಕಾರಿ ಮಣಿಕಂದನ್ ಕುಟುಂಬಕ್ಕೆ ಪರಿಹಾರ
ಆನೆ ದಾಳಿಯಿಂದ ಸಾವನ್ನಪ್ಪಿದ ಐ.ಎಫ್.ಎಸ್ ಅಧಿಕಾರಿ ಮಣಿಕಂದನ್ ಕುಟುಂಬಕ್ಕೆ ಪರಿಹಾರ ನೀಡುವ ವಿಚಾರ ಕುರಿತು ಮಾತನಾಡಿದ ಸಿದ್ದರಾಮಯ್ಯ, ಯಾವ ರೀತಿಯ ಪರಿಹಾರ ಕೊಡಬೇಕೆಂದು ಚಿಂತನೆ ನಡೆದಿದೆ. ಅವರ ಮನೆಯವರನ್ನೂ ಸಂಪರ್ಕ ಮಾಡಲಾಗುತ್ತಿದೆ. ಕುಟುಂಬಸ್ಥರಲ್ಲಿ ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗ ನೀಡುವ ಬಗ್ಗೆಯೂ ಚಿಂತಿಸಲಾಗುತ್ತಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
I need not to learn about administration by Kumaraswamy, says Karnataka chief minister Siddaramaiah in Mysuru on Saturday. He reacted to media an allegation of caste politics made by HDK against CM.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ