ನಾನು ನಾಸ್ತಿಕ ಹಾಗಾಗಿ ದೇವಾಲಯಕ್ಕೆ ಭೇಟಿ ಕೊಟ್ಟಿಲ್ಲ : ಚಂಪಾ ಸ್ಪಷ್ಟನೆ

Posted By:
Subscribe to Oneindia Kannada

ಮೈಸೂರು, ನವೆಂಬರ್ 25 : ಭುವನೇಶ್ವರಿ ದೇವಾಲಯಕ್ಕೆ ಪ್ರವೇಶ ನಿರಾಕರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಚಂದ್ರಶೇಖರ್ ಪಾಟೀಲ್, "ನಾನು ಒಬ್ಬ ನಾಸ್ತಿಕ. ಈ ಕಾರಣಕ್ಕೆ ನಿನ್ನೆ (ಶುಕ್ರವಾರ) ಭುವನೇಶ್ವರಿ ದೇವಾಲಯ ಪ್ರವೇಶ ಮಾಡಲಿಲ್ಲ," ಎಂದು ತಿಳಿಸಿದರು.

ಚಂಪಾ ಅವರೇ, ಅದೇನು ಸಾಹಿತ್ಯ ಸಮ್ಮೇಳನವೋ, ಕಾಂಗ್ರೆಸ್ ಸಮಾವೇಶವೋ?

ಮೈಸೂರಿನಲ್ಲಿ ಇಂದು ಮಾತನಾಡಿದ ಚಂದ್ರಶೇಖರ್ ಪಾಟೀಲ್, "ನಮ್ಮ ಊರಿನ ಮಾರಿಗೂಡಿಗೂ ನಾನು ಹೋಗಿಲ್ಲ. ನಾನು ದೇವರು, ಗುಡಿ, ಗೋಪುರಗಳನ್ನು ನಂಬೋದಿಲ್ಲ. ನಾನು ನಾಸ್ತಿಕನಾಗಿದ್ದೀನಿ. ಹಾಗೇಯೆ ಇರುತ್ತೇನೆ. ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳೋದಿಲ್ಲ. ಇದು ನನ್ನ ವೈಯಕ್ತಿಕ ಸ್ವಾತಂತ್ರ್ಯ. ನನ್ನ ಸ್ವಾತಂತ್ರ್ಯ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ," ಎಂದು ಕಟುವಾಗಿ ಹೇಳಿದರು.

ಚಿತ್ರಗಳು : ಮೈಸೂರಲ್ಲಿ 83ನೇ ಸಾಹಿತ್ಯ ಸಮ್ಮೇಳನ ಸಂಭ್ರಮ

 I'm an atheist so I have not visited the temple: Chandrashekhar Patil

ಇನ್ನು, "ನರೇಂದ್ರ ಮೋದಿ ಅವರನ್ನು ವೈಯಕ್ತಿಕವಾಗಿ ನಾನು ಟೀಕೆ ಮಾಡಿಲ್ಲ. ದೇಶದ ಪ್ರಧಾನಿಯಾಗಿ ಪ್ರಾದೇಶಿಕ ಸಮತೋಲನ ಕಾಪಾಡಬೇಕು ಅಂತ ಮನವಿ ಮಾಡಿದ್ದೆ. ಇದು ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮ ಅಲ್ಲ. ರಾಜ್ಯ ಸಾಹಿತ್ಯ ಪರಿಷತ್ ಕಾರ್ಯಕ್ರಮ. ಇದಕ್ಕೆ ಸರ್ಕಾರ ಅನುದಾನ ನೀಡಿದೆ ಅಷ್ಟೇ," ಎಂದು ಚಂಪಾ ತಿಳಿಸಿದರು.

ಕನ್ನಡದ ಸಂಕಟಗಳಿಗೆಲ್ಲ ಕುಲಕಂಟಕರೇ ಕಾರಣ : ಚಂಪಾ

ಇತ್ತ ಚಂಪಾ ವಿರುದ್ದ ಘೋಷಣೆಯ ಕೂಗು:

ಜಾತ್ಯಾತೀತ ಪಕ್ಷಕ್ಕೆ ಮತ ನೀಡಿ ಎಂದು ಚಂಪಾ ಹೇಳಿಕೆ ನೀಡಿದ್ದನ್ನು ಖಂಡಿಸಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು.

ನಗರದ ಕುವೆಂಪು ಪಾರ್ಕ್ ನಲ್ಲಿ ಜಮಾಯಿಸಿದ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಧರಣಿ ನಡೆಸಿ, "ಇದು ಕನ್ನಡ ಜಾತ್ರೆಯಲ್ಲ ರಾಜಕೀಯ ಸಮಾವೇಶವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ ಚಂಪಾ ಅವರನ್ನ ಗಡಿಪಾರು ಮಾಡಿ," ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಕನ್ನಡ ಜಾತ್ರೆಯಲ್ಲಿ ರಾಜವಂಶಸ್ಥರ ನಿರ್ಲಕ್ಷಕ್ಕೆ ಖಂಡನೆ ವ್ಯಕ್ತಪಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada Sahitya Parishat president Chandrashekhar Patil, who clarified on the issue of refusing to enter Bhuvaneshwari Temple, said, "I am an atheist and did not enter Bhuvaneshwari Temple yesterday (Friday).”

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ