ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೌಡರು ನಂಬುವ ಮಂಗಳವಾರ, ಅಮಾವಾಸ್ಯೆ ಮುಹೂರ್ತ ನಂಬದ ಜಿಟಿಡಿ

By ಯಶಸ್ವಿನಿ ಎಂ.ಕೆ
|
Google Oneindia Kannada News

Recommended Video

ಜಿ ಟಿ ದೇವೇಗೌಡ್ರಿಗೆ ಅಮಾವಾಸ್ಯೆ, ಆಷಾಢ ಹಾಗು ಮಂಗಳವಾರ ಯಾವುದರಲ್ಲೂ ನಂಬಿಕೆಯಿಲ್ಲ

ಮೈಸೂರು, ಜುಲೈ 24 : "ನನಗೆ ಅಮಾವಾಸ್ಯೆ, ಪೂರ್ಣಿಮೆ, ಆಷಾಢ ಎಲ್ಲವೂ ಒಂದೇ. ನಾನು ಯಾವಾಗ ಬೇಕಾದರೂ ನೂತನ ಕಚೇರಿಗೆ ಹೋಗಲು ಸಿದ್ಧವಿದ್ದೇನೆ" ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಆಷಾಢ, ಅಮಾವಾಸ್ಯೆ, ಪೌರ್ಣಮಿ ಎಲ್ಲವೂ ಒಳ್ಳೆ ದಿನವೇ. ನಾನು ಯಾವಾಗ ಬೇಕಾದರೂ ಅಧಿಕೃತ ನಿವಾಸಕ್ಕೆ ಹೋಗುತ್ತೇನೆ. ಶುಭ ಕಾರ್ಯಕ್ಕೆ ಎಲ್ಲವೂ ಒಳ್ಳೆ ದಿನ. ಆದರೆ ನನಗೆ ಇನ್ನೂ ಮನೆಯನ್ನು ಕೊಟ್ಟಿಲ್ಲ. ಸರಕಾರ ನನಗೆ ಮನೆ ಕೊಟ್ಟರೆ ಮಂಗಳವಾರವೇ ಮನೆಗೆ ಹೋಗಲು ಸಿದ್ಧನಿದ್ದೇನೆ ಎಂದರು.

ಜಿ.ಟಿ.ದೇವೇಗೌಡಗೆ ಕೊಟ್ಟ ಮಾತು ತಪ್ಪಿದ ಕುಮಾರಸ್ವಾಮಿಜಿ.ಟಿ.ದೇವೇಗೌಡಗೆ ಕೊಟ್ಟ ಮಾತು ತಪ್ಪಿದ ಕುಮಾರಸ್ವಾಮಿ

ಮಹಾರಾಣಿ ಕಾಲೇಜಿಗೆ ಸಚಿವರ ಭೇಟಿ
ಮೂರು ದಿನಗಳ ಹಿಂದಷ್ಟೇ ಮೈಸೂರು ಮಹಾರಾಣಿ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಸಮಸ್ಯೆ ಅಲಿಸಿದ್ದ ಸಚಿವ ಜಿ.ಟಿ.ದೇವೇಗೌಡ, ಅಧಿಕಾರಿಗಳ ಜತೆ ಮತ್ತೆ ಮಹಾರಾಣಿ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿದರು. ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಜೊತೆಯಲ್ಲೂ ಚರ್ಚೆ ನಡೆಸಿದ ಸಚಿವ ಜಿಟಿಡಿ, ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳು ಹಾಗೂ ಕಾಲೇಜು ಸಿಬ್ಬಂದಿ ಜೊತೆ ಸಮಾಲೋಚನೆ ನಡೆಸಿದರು.

I do not believe Amavasya, Tuesday, Ashadha- said GT Deve Gowda

ಇದೇ ವೇಳೆ ಮಾತನಾಡಿದ ಸಚಿವ ಜಿ.ಟಿ.ದೇವೇಗೌಡ, ಶಿಥಿಲಾವಸ್ಥೆ ತಲುಪಿರುವ ಕಟ್ಟಡದ ಪುನರ್ ನಿರ್ಮಾಣ ಸಾಧ್ಯವಿಲ್ಲ. ಪ್ರತಿಯೊಂದು ವಿಭಾಗಕ್ಕೂ ಕಾಂಪ್ಲೆಕ್ಸ್ ಮಾದರಿಯಲ್ಲಿ ಪ್ರತ್ಯೇಕ ಕಟ್ಟಡ ಬೇಕಿದೆ. ಶಿಕ್ಷಣ ಇಲಾಖೆಗೆ ಮುಖ್ಯಮಂತ್ರಿಗಳು ಹೆಚ್ಚಿನ ಅನುದಾನ ನೀಡಿದ್ದಾರೆ. ನಬಾರ್ಡ್, ವರ್ಲ್ಡ್ ಬ್ಯಾಂಕ್ ನಿಂದಲೂ ಅನುದಾನಕ್ಕೆ ಬೇಡಿಕೆ ಇಟ್ಟಿದ್ದೇವೆ. ಕಲಾ, ವಾಣಿಜ್ಯ, ವಿಜ್ಞಾನಕ್ಕೆ ಪ್ರತ್ಯೇಕ ಕಟ್ಟಡ ಹಾಸ್ಟೆಲ್ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು.

English summary
I do not believe in Amavasya, Tuesday, Ashadha. Once official residence allotted by state government, I will shift immediately, said higher education minister GT Deve Gowda in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X