ರಾಜಕೀಯ ಸೇರಲು ಒತ್ತಡ ಇರುವುದು ನಿಜ: ಯತೀಂದ್ರ ಸಿದ್ದರಾಮಯ್ಯ

Posted By:
Subscribe to Oneindia Kannada

ಮೈಸೂರು, ಆಗಸ್ಟ್ 22: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿರಿಯ ಮಗ ರಾಕೇಶ್ ಸಿದ್ದರಾಮಯ್ಯ ಅವರ ಅಕಾಲಿಕ ಮರಣದ ನೋವು ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಕ್ಷೇತ್ರದ ಜನತೆಯನ್ನು ಸಂತೈಸಲು ಬಂದ ರಾಕೇಶ್ ಅವರ ತಮ್ಮ ಡಾ. ಯತೀಂದ್ರ ಅವರನ್ನು ರಾಜಕೀಯಕ್ಕೆ ಬರುವಂತೆ ರಾಕೇಶ್ ಅವರ ಆಪ್ತರು ಆಗ್ರಹಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಎರಡನೇ ಪುತ್ರ ಯತೀಂದ್ರ ಸಿದ್ದರಾಮಯ್ಯ ರಾಜಕೀಯಕ್ಕೆ ಬರುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ. ಈ ಬಗ್ಗೆ ಮೈಸೂರಿನಲ್ಲಿ ಚರ್ಚೆ ಆರಂಭವಾಗಿದೆ ಎಂಬ ಸುದ್ದಿ ಖಾಸಗಿ ಮಾಧ್ಯಮಗಳಲ್ಲಿ ಸೋಮವಾರ ಪ್ರಸಾರವಾಗಿತ್ತು.[ರಾಕೇಶ್ ಗ್ರೂಪ್ ಫೋಟೋ ಬಗ್ಗೆ ಗೆಳೆಯ ಹೇಳಿದ್ದೇನು?]

I can't jump into Politics now: Dr Yatinda Siddaramaiah

ಈ ಬಗ್ಗೆ ಖಾಸಗಿ ಟಿವಿಯೊಂದಿಗೆ ಮಾತನಾಡಿದ ಡಾ.ಯತೀಂದ್ರ, ಸದ್ಯಕ್ಕೆ ರಾಜಕೀಯ ಪ್ರವೇಶದ ಬಗ್ಗೆ ಯಾವುದೇ ಆಲೋಚನೆ ಇಲ್ಲ. ನಿನ್ನೆ ಕ್ಷೇತ್ರದ ಕಾರ್ಯಕರ್ತರು, ಬೆಂಬಲಿಗರೊಂದಿಗೆ ಮಾತುಕತೆ ನಡೆಸಿದೆ. ನನ್ನ ಕುಟುಂಬದಿಂದಲೂ ಒತ್ತಾಯ ಬಂದಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಉತ್ತರಾಧಿಕಾರಿಯಾಗಿ ಬೆಳೆಯುತ್ತಿದ್ದ ರಾಕೇಶ್ ಸಿದ್ದರಾಮಯ್ಯ ಅವರು ಅಕಾಲಿಕ ಮರಣಕ್ಕೀಡಾಗಿದ್ದರಿಂದ ಕಾರ್ಯಕರ್ತರು ಚಿಂತಿತರಾಗಿದ್ದಾರೆ ಇವರೆಲ್ಲರನ್ನು ಹುರಿದುಂಬಿಸಲು ಡಾ.ಯತೀಂದ್ರ ಯತ್ನಿಸುತ್ತಿದ್ದಾರೆ. ಹೀಗಾಗಿ ಯತೀಂದ್ರ ಸಿದ್ದರಾಮಯ್ಯ ಅವರನ್ನ ರಾಜಕೀಯ ಕರೆತರುವ ಪ್ರಯತ್ನ ನಡೆಯುತ್ತಿದೆ.

ಯತೀಂದ್ರ ವಾರಕ್ಕೊಮ್ಮೆ ಕ್ಷೇತ್ರದಲ್ಲಿ ಓಡಾಡಲು ನಿರ್ಧಾರ ಮಾಡಿದ್ದು, ಅದರಂತೆ ಕಳೆದ 2 ದಿನಗಳಿಂದ ಯತೀಂದ್ರ ಅವರು ಮೈಸೂರಿನಲ್ಲಿದ್ದಾರೆ. ಜೊತೆಗೆ ಸಿಎಂ ಆಪ್ತರು, ಬೆಂಬಲಿಗ ನಾಯಕರೊಂದಿಗೆ, .ರಾಕೇಶ್ ಸ್ನೇಹಿತರು ಪಕ್ಷದ ಕೆಲ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Dr Yathindra Siddaramaiah, second son of CM Siddaramaiah today(Aug 22) refused reports on him getting entry into active politics. But, he agreed there is a pressure from family, friends to join politics.
Please Wait while comments are loading...