ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯಗೆ ತಕ್ಕಪಾಠ: ಜಿ.ಟಿ. ದೇವೇಗೌಡ ವಿಶ್ವಾಸ

By Nayana
|
Google Oneindia Kannada News

ಮೈಸೂರು, ಮೇ 15: ರಾಜ್ಯದ ಗಮನ ಸೆಳೆದಿದ್ದ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಮತಕ್ಷೇತ್ರ ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಾಭವದತ್ತ ಸಾಗಿದ್ದು, ಜೆಡಿಎಸ್‌ನ ಜಿಟಿ ದೇವೇಗೌಡ ಗೆಲುವಿನ ಸಮೀಪ ದಾಪುಗಾಲಿಟ್ಟಿದ್ದಾರೆ.

LIVE: ಕರ್ನಾಟಕ ಚುನಾವಣೆ 2018, ಮತಎಣಿಕೆ ಅಪ್ಡೇಟ್ಸ್ LIVE: ಕರ್ನಾಟಕ ಚುನಾವಣೆ 2018, ಮತಎಣಿಕೆ ಅಪ್ಡೇಟ್ಸ್

ಇದೀಗ ಜಿಟಿ ದೇವೇಗೌಡ 15 ಸಾವಿರ ಮತಗಳಿಂದ ಮುಂದಿದ್ದಾರೆ. ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಜೆಡಿಎಸ್‌ ಜಿಟಿ ದೇವೇಗೌಡ ನನ್ನ ನಿರೀಕ್ಷೆಯಂತೆ ಮತದಾರರು ನನಗೆ ಆಶೀರ್ವಾದ ಮಾಡುವ ಲಕ್ಷಣ ತೋರಿದ್ದಾರೆ. ಖಂಡಿತವಾಗಿ ಈ ಬಾರಿ ನಾನೇ ಗೆಲ್ಲುತ್ತೇನೆ.

ಮುಂಜಾನೆಯೇ ದೇವರ ಮೊರೆ ಹೋದ ಕುಮಾರಸ್ವಾಮಿ, ಜಿಟಿಡಿ ಮುಂಜಾನೆಯೇ ದೇವರ ಮೊರೆ ಹೋದ ಕುಮಾರಸ್ವಾಮಿ, ಜಿಟಿಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುರಾಡಳಿತ ಹಾಗೂ ಸಿದ್ದರಾಮಯ್ಯ ಅವರ ಜನ ವಿರೋಧಿ ನೀತಿಯಿಂದಾಗಿ ಜನರು ಬೇಸತತ್ಇದ್ದರು. ಆ ಕಾರಣದಿಂದಾಗಿ ನಾನು ಜನರೊಂದಿಗೆ ಹೊಂದಿರುವ ಒಡನಾಟ ಮತ್ತು ನನ್ನ ಜನಪರ ಕೆಲಸಗಳಿಂದಾಗಿ ಈ ಬಾರಿ ಚಾಮುಂಡೇಶ್ವರಿ ನನಗೆ ಒಲಿಯುತ್ತಿದ್ದಾಳೆ. ಕೊನೆಯ ಸುತ್ತಿನವರೆಗೂ ಇದೇ ರೀತಿಯ ಮುನ್ನಡೆಯನ್ನು ಸಾಧಿಸುತ್ತೇನೆ ಎಂಬ ನಿರೀಕ್ಷೆ ಇದೆ. ಚಾಮುಂಡೇಶ್ವರಿ ಜನತೆ ನನಗೆ ಆಶೀರ್ವಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

I am confident i will win: GT Devegowda

ಈ ಮೊದಲು ನಾನು ಸಿದ್ದರಾಮಯ್ಯ ಅವರ ವಿರುದ್ಧ ನಿಂತಿದ್ದರೆ ನಾನು ಯಾವಾಗಲೋ ಗೆಲ್ಲುತ್ತಿದ್ದೆ, ಆದರೆ ನನ್ನ ಜತೆಗೆ ಅವರು ಕೆಲಸ ಮಾಡಿದ್ದರು, ಆದರೆ ನಾಣು 23 ವರ್ಷಗಳಿಂದ ನಾನು ಜನರ ಬಳಿ ಸಂಪರ್ಕ ಇಟ್ಟುಕೊಂಡಿದ್ದೆ ಅದು ನನಗೆ ಸಹಾಯವಾಗಿದೆ. ಜನರಿಗೆ ನಾನು ಪ್ರೀತಿ ಕೊಟ್ಟಿದೆ ಅದು ಈಗ ನನ್ನ ಗೆಲುವಿನತ್ತ ಕೊಂಡೊಯ್ಯುತ್ತಿದೆ ಎಂದರು.

English summary
JDS candidate in Chamundeshwari constituency GT Devegowda expressed confidence that he will defeate chief minister Siddaramaiah his margin as people where stead up with bad administration of Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X