ಬಿಸಿಲ ಧಗೆಯಲ್ಲೂ ಮೈಸೂರು ಮೃಗಾಲಯ ಪ್ರಾಣಿಗಳು ಕೂಲ್ ಕೂಲ್

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು,ಮಾರ್ಚ್,31: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೇಸಿಗೆ ಧಗೆ ನೆತ್ತಿ ಸುಡುತ್ತಿದೆ. ಬಿಸಿಲಿಗೆ ಓಡಾಡುವುದು ದುಸ್ತರವಾಗುತ್ತಿದೆ. ಉಷ್ಣಾಂಶ ಕನಿಷ್ಠ 32ರಿಂದ ಗರಿಷ್ಠ 40ಡಿಗ್ರಿ ತಲುಪಿದೆ. ಬೇರೆ ನಗರಗಳಿಗೆ ಹೋಲಿಸಿದರೆ ಒಂದಷ್ಟು ಉತ್ತಮ ವಾತಾವರಣ ಹೊಂದಿದ್ದ ಮೈಸೂರು ಇದೀಗ ಸೂರ್ಯನ ಸುಡುಸುಡು ಕಿರಣಗಳಿಂದ ಬೇಯುತ್ತಿದೆ. ಹೀಗಾಗಿ ಜನ ಬಿಸಿಲಿನ ತಾಪಕ್ಕೆ ಹಣ್ಣು, ತಂಪು ಪಾನೀಯಗಳ ಮೊರೆ ಹೋಗಿದ್ದಾರೆ.

ಈ ನಡುವೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿರುವ ಪ್ರಾಣಿಗಳು ಕೂಡ ಬಿಸಿಲಿನ ಧಗೆಗೆ ಸಿಲುಕಿ ಒದ್ದಾಡುತ್ತಿವೆ. ಇವುಗಳ ಮೈತಣಿಸಲು ಮೃಗಾಲಯದ ಅಧಿಕಾರಿಗಳು ಅವುಗಳ ಮೈಮೇಲೆ ನೀರು ಚಿಮುಕಿಸಿ ತಂಪು ಮಾಡುತ್ತಿದ್ದಾರೆ. ನೀರಿನ ಹಾಯುವಿಕೆಯಿಂದ ಪ್ರಾಣಿಗಳು ಕೊಂಚ ನಿರಾಳಭಾವ ಅನುಭವಿಸುತ್ತಿವೆ.[ಸುಡುತ್ತಿದೆ ಬೇಸಿಗೆ, ಉತ್ತರ ಕರ್ನಾಟಕ ಕೊತಕೊತ]

ಪ್ರಾಣಿಗಳಿಗೆ ನೀರು ಹಾಯಿಸಲು ಮೃಗಾಲಯಕ್ಕೆ ಕಾರಂಜಿ ಕೆರೆಯಿಂದ ಸರಬರಾಜು ಮಾಡುತಿದ್ದು ಅಲ್ಲಿ ಸ್ಪಿಂಕ್ಲರ್ ಮೂಲಕ ನೀರನ್ನು ಮಳೆ ಹನಿಯಂತೆ ಬೀಳಿಸಲಾಗುತ್ತಿದೆ. ಚಿರತೆ, ಹುಲಿ, ಸಿಂಹ, ಜಿರಾಫೆ ಸೇರಿದಂತೆ ಬಿಸಿಲನ್ನು ತಡೆದುಕೊಳ್ಳಲಾರದ ಪ್ರಾಣಿಗಳ ಮೇಲೆ ನೀರು ಹಾಯಿಸಲಾಗುತ್ತಿದೆ. ಇಡೀ ಮೃಗಾಲಯದಲ್ಲಿ ನೀರನ್ನು ಹಾಯಿಸುವ ಮೂಲಕ ಮೃಗಾಲಯದಲ್ಲಿ ತಂಪು ವಾತಾವರಣ ನಿರ್ಮಿಸಲಾಗಿದೆ.

ಮೃಗಾಲಯದಲ್ಲಿ ದೇಶವಿದೇಶಗಳ ಪ್ರಾಣಿ ಪಕ್ಷಿಗಳಿರುವುದರಿಂದ ಕೆಲವು ಹೆಚ್ಚಿನ ಉಷ್ಣತೆಯನ್ನು ಸಹಿಸಿಕೊಳ್ಳುವುದಿಲ್ಲ. ಹೀಗಾಗಿ ಪ್ರಾಣಿಗಳ ಹಿತದೃಷ್ಠಿಯಿಂದ ನೀರನ್ನು ಸ್ಪಿಂಕ್ಲರ್ ಮಾಡಿ ತಂಪಿನ ವಾತಾವರಣ ಸೃಷ್ಠಿ ಮಾಡಲಾಗಿದೆ.[ಹಗಲು ಬೀದಿಗಿಳಿಯಲಾಗುತ್ತಿಲ್ಲ, ರಾತ್ರಿ ತಣ್ಣಗೆ ಮಲಗಲಾಗುತ್ತಿಲ್ಲ]

ಜಿರಾಫೆಗೆ ಸ್ನಾನ

ಜಿರಾಫೆಗೆ ಸ್ನಾನ

ಮೃಗಾಲಯಲ್ಲಿ ಎಲ್ಲಾ ಪ್ರಾಣಿಗಳನ್ನು ಬೋನ್ ಗಳಲ್ಲಿ ಇರಿಸಲಾಗುವುದಿಲ್ಲ. ಅಂತಹ ಪ್ರಾಣಿಗಳು ಬಿಸಿಲ ಝಳಕ್ಕೆ ತತ್ತರಿಸುತ್ತವೆ. ಇದಕ್ಕೆ ಜಿರಾಫೆ ಉತ್ತಮ ನಿದರ್ಶನ. ಇದರ ದೇಹದ ಗಾತ್ರಕ್ಕೆ ಬೋನ್ ಎಲ್ಲಿಂದ ನಿರ್ಮಿಸಲು ಸಾಧ್ಯ. ಸದಾ ಬಿಸಿಲಿನಲ್ಲಿ ನಿಲ್ಲುವ ಇದಕ್ಕೆ ತಣ್ಣೀರ ಸ್ನಾನ

ನೀರು ಬಿದ್ದ ಖುಷಿಯಲ್ಲಿ ಆನೆ

ನೀರು ಬಿದ್ದ ಖುಷಿಯಲ್ಲಿ ಆನೆ

ಆನೆಯ ಚರ್ಮ ಇತರೆ ಎಲ್ಲಾ ಪ್ರಾಣಿಗಳ ಚರ್ಮಕ್ಕಿಂತ ದಪ್ಪ. ಇದಕ್ಕೂ ಸಹ ಬಿಸಿಲ ಧಗೆ ತಟ್ಟಿದೆ. ಮೃಗಾಲಯದ ಸಿಬ್ಬಂದಿಗಳು ಹರಿಸುತ್ತಿರುವ ನೀರಿಗೆ ಮೈಯೊಡ್ಡಿ ಖುಷಿ ಪಡುತ್ತಿರುವ ಆನೆ.

ನೀರಲ್ಲಿ ಮಲಗಿದ ಕರಡಿ

ನೀರಲ್ಲಿ ಮಲಗಿದ ಕರಡಿ

ಬಿಸಿಲ ಧಗೆ ಸಹಿಸಿಕೊಳ್ಳಲಾಗದೆ ಕರಡಿಯು ತನ್ನ ದೇಹವನ್ನು ತಂಪಿರಿಸುವ ಸಲುವಾಗಿ ನೀರಿನ ಕೊಳದಲ್ಲಿ ಮಲಗಿ ತನ್ನ ದೇಹದ ಶಾಖವನ್ನು ಕಡಿಮೆಗೊಳಿಸುತ್ತಿರುವುದು.

ದಾಹ ತೀರಿಸಿಕೊಳ್ಳುತ್ತಿರುವ ಪಾರಿವಾಳ

ದಾಹ ತೀರಿಸಿಕೊಳ್ಳುತ್ತಿರುವ ಪಾರಿವಾಳ

ಬೇಸಿಗೆಗೆ ದಾಹ ಹೆಚ್ಚು. ಏನೇ ಕುಡಿದರೂ ದಾಹ ನೀಗುವುದು ಕಡಿಮೆಯೇ. ಪಕ್ಷಿಗಳು ದಾಹ ನೀಗಿಸಿಕೊಳ್ಳಲೆಂದು ಮೃಗಾಲಯದ ಸಿಬ್ಬಂದಿ ಅವುಗಳಿಗೆಂದು ಒಂದು ಸಣ್ಣ ಕೊಳ ನಿರ್ಮಿಸಿದ್ದಾರೆ. ಅಲ್ಲಿನ ನೀರು ಕುಡಿಯಲು ವೃತ್ತಾಕಾರದಲ್ಲಿ ನಿಂತ ಪಾರಿವಾಳಗಳು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Horror summer, Mysuru Chamarajendra zoo laboures make animals be safe for spray water to bodies
Please Wait while comments are loading...