ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರ್ ಪಾಕ್ ಜನ್ಮ ತಾಳಿದ ಸವಿಯಾದ ಕಥೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು ಮಹಾರಾಜ ವಂಶದ ಉತ್ತರಾಧಿಕಾರಿಯ ವಿವಾಹ ಎಂದ ಮೇಲೆ ಮೈಸೂರಿನ ಸಂಸ್ಕೃತಿ, ಸಂಪ್ರದಾಯ, ತಿಂಡಿ, ತಿನಿಸುಎಲ್ಲದಕ್ಕೂ ಮಹತ್ವ ನೀಡಲೇ ಬೇಕು.. ನೀಡಲಾಗುತ್ತಿದೆ.

ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ ಜತೆಗೆ ಮೈಸೂರ್ ಪಾಕ್ ಗೂ ಸ್ಥಾನ ಇದ್ದೇ ಇದೆ. ಸಿಹಿ ತಿನಿಸುಗಳಲ್ಲಿ ಮೈಸೂರನ್ನು ದೇಶ ವಿದೇಶಗಳಲ್ಲಿ ಪರಿಚಯಿಸುತ್ತಿರುವ ಏಕೈಕ ತಿನಿಸು ಮೈಸೂರ್ ಪಾಕ್. [ಸುರ್ರ್ರ್ ಸವಿಯಲು ಬೇಕಾ ಮೈಸೂರು ಪಾಕ]

ಇಂತಹ ವಿಶಿಷ್ಟ ಬಗೆಯ ಮೈಸೂರ್‍ ಪಾಕ್ ಜನ್ಮ ತಾಳಿದ್ದು ಮೈಸೂರಿನ ಅರಮನೆಯ ಪಾಕಶಾಲೆಯಲ್ಲಿ ಎಂದರೆ ಅಚ್ಚರಿಯಾಗಬಹುದು. ಅದು ಹೇಗೆ ಜನ್ಮ ತಾಳಿತು ಎಂಬುವುದು ಕೂಡ ಕುತೂಹಲಕಾರಿಯೇ..[ಮೈಸೂರ್ ಪಾಕ್ ಹೆಸರು ಬದಲಾಯಿಸಿಕೊಂಡಿದ್ದು ಯಾಕೆ?]

ಇಷ್ಟಕ್ಕೂ ಮೈಸೂರ್ ಪಾಕ್ ನಂತಹ ಸಿಹಿ ತಿನಿಸನ್ನು ತಯಾರು ಮಾಡಿದವರು ಮೈಸೂರು ಅರಮನೆಯ ಪಾಕಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಕಾಕಾಸುರ ಮಾದಪ್ಪನವರು. ಇವರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಅರಮನೆಯಲ್ಲಿ ಸಿಹಿ ತಿಂಡಿ ತಯಾರಿಸುವ ಕೆಲಸದ ಜವಾಬ್ದಾರಿ ವಹಿಸಿಕೊಂಡಿದ್ದರು.[ಎಂಟಿಆರ್ : ಆಹಾರ ಸಂಸ್ಕೃತಿಗೆ ಹೊಸರುಚಿ]

History behind the Royal Sweet the Mysore Pak Madappa

ರಾಜ ಕುಟುಂಬಕ್ಕೆ ಬೇಕಾದ ಸಿಹಿ ಮತ್ತು ಖಾರವನ್ನು ಇವರೇ ತಯಾರಿಸುತ್ತಿದ್ದರು. ಒಮ್ಮೆ ಮಹಾರಾಜರು ತಿಂಡಿ ತಯಾರಿಸುವುದರಲ್ಲಿ ಜಾಣ್ಮೆ ಹೊಂದಿದ್ದ ಕಾಕಾಸುರ ಮಾದಪ್ಪನವರಿಗೆ ಹೊಸದಾದ ಯಾವುದಾದರೊಂದು ತಿಂಡಿ ತಯಾರಿಸುವಂತೆ ಆಜ್ಞೆ ಮಾಡಿದರು.

ಮಹಾರಾಜರು ಹೇಳಿದ ಮೇಲೆ ಮುಗಿಯಿತು. ಮರು ಮಾತನಾಡುವ ಹಾಗಿಲ್ಲ. ಹೀಗಾಗಿ ಏನು ಹೊಸ ತಿಂಡಿ ತಯಾರಿಸುವುದು ಎಂದು ಅವರು ಆಲೋಚಿಸ ತೊಡಗಿದರು. ತಮಗೆ ತೋಚಿದ ತಿಂಡಿ ತಯಾರಿಸಲು 'ಕಾಕಾಸುರ ಮಾದಪ್ಪ' ಮುಂದಾದರು. [ಮಿಲ್ಕ್ ಮೈಸೂರ್ ಪಾಕ್ ಮಾಡುವುದು ಹೇಗೆ?]

ಕಡಲೆ ಹಿಟ್ಟು, ಸಕ್ಕರೆ, ತುಪ್ಪ, ಎಣ್ಣೆ ಸೇರಿಸಿ ತಿಂಡಿಯೊಂದನ್ನು ಮಾಡಿ ಅದನ್ನು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಕೊಟ್ಟರು. ಇದರ ರುಚಿ ನೋಡಿದ ಮಹಾರಾಜರಿಗೆ ತುಂಬಾ ಖುಷಿಯಾಗಿ ಕಾಕಾಸುರ ಮಾದಪ್ಪನವರನ್ನು ಬೆನ್ನು ತಟ್ಟಿ ಪ್ರಶಂಶಿಸಿದರು. [ಅಖಿಲೇಶ್ ಉ.ಪ್ರದೇಶದಲ್ಲಿ ಮೈಸೂರು ಪಾಕ್ ಕಲರವ]

ಆದರೆ, ಈ ಹೊಸ ತಿಂಡಿಗೆ ಏನಾದರೊಂದು ಹೆಸರಿಡಬೇಕಲ್ಲವೆ? ಏನು ಹೆಸರು ಇಡುವುದೆಂದು ಮಹಾರಾಜರು ಆಲೋಚಿಸಿದರು. ಆಗ ಅವರಿಗೊಂದು ಯೋಚನೆ ಬಂದಿತು. ರುಚಿ ಶುಚಿಯಾದ ಅಡುಗೆಗೆ 'ನಳಪಾಕ' ಎಂದು ಕರೆಯುತ್ತೇವೆ. ಇದು ಮೈಸೂರು ಅರಮನೆಯಲ್ಲಿ ತಯಾರಾಗಿದ್ದರಿಂದ 'ಮೈಸೂರು ಪಾಕ' ಎಂದು ಹೆಸರಿಡೋಣ ಎಂದು ನಿರ್ಧರಿಸಿದರು.

ಅವತ್ತಿನಿಂದಲೇ ಆ ತಿಂಡಿಯನ್ನು ಮೈಸೂರು ಪಾಕ ಎಂದು ಕರೆಯಲಾಯಿತು. ಮುಂದೆ ಅದು ಮೈಸೂರ್‍ಪಾಕ್ ಆಗಿ ಮೈಸೂರಿನ ಖ್ಯಾತಿಯನ್ನು ವಿಶ್ವಕ್ಕೆ ಸಾರಿತು. ಇದೀಗ ವಿವಾಹಕ್ಕೆ ಆಗಮಿಸುವ ಅತಿಥಿಗಳಿಗೆ ಮೈಸೂರ್ ಪಾಕ್ ಸವಿಯುವ ಅವಕಾಶವನ್ನು ಒದಗಿಸಿಕೊಡಲಾಗಿದೆ.

English summary
The history of royal sweet Mysore Pak dates back to 17th century. Madappa the royal cook who prepared the sweet nervously named it 'Mysore Paka'. (Paka in Kannada means a sweet concoction). Delighted with the taste Krishnaraja Wodeyar soon officially designated the royal sweet and is even today considered the 'king' of sweets
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X