• search

ಪಿರಿಯಾಪಟ್ಟಣದಲ್ಲಿ ಗೆಲುವಿನ ನಗೆ ಬೀರುವರ್ಯಾರು?

By ಯಶಸ್ವಿನಿ ಎಂ.ಕೆ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಮೈಸೂರು, ಏಪ್ರಿಲ್ 9 : ಉತ್ಕೃಷ್ಟ ವಿಶ್ವ ದರ್ಜೆಯ ತಂಬಾಕು ಬೆಳೆಗೆ ಪಿರಿಯಾಪಟ್ಟಣ ಜಗತ್ಪ್ರಸಿದ್ಧಿಯಾಗಿದ್ದು, ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಅಸ್ತಿತ್ವದಲ್ಲಿರುವ ಕ್ಷೇತ್ರವಾಗಿದೆ. ಈ ಕ್ಷೇತ್ರವನ್ನು ಇಲ್ಲಿಯವರೆಗೆ 7 ಮಂದಿ ಪ್ರತಿನಿಧಿಸಿದ್ದು, ಎಚ್.ಎಂ.ಚನ್ನಬಸಪ್ಪ ಹಾಗೂ ಕೆ.ವೆಂಕಟೇಶ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

  ಕುತೂಹಲದ ಕೇಂದ್ರಬಿಂದು 'ವರುಣಾ'ದಲ್ಲಿ ಗೆಲ್ಲುವವರ್ಯಾರು..?

  ಹಾಲಿ ಶಾಸಕ ಕೆ.ವೆಂಕಟೇಶ್ 7 ಬಾರಿ ಸ್ಪರ್ಧಿಸಿದ್ದು, 5 ಬಾರಿ ಗೆಲುವು ದಾಖಲಿಸಿದ್ದಾರೆ. ದಿ. ಕೆ.ಎಸ್. ಕಾಳಮರಿಗೌಡ 3 ಬಾರಿ ಜಯ ಗಳಿಸಿದ್ದು, ಎಚ್.ಎಂ. ಚನ್ನಬಸಪ್ಪ 2 ಬಾರಿ ವಿಜೇತರಾಗಿದ್ದಾರೆ. ಕ್ಷೇತದಲ್ಲಿ ಒಟ್ಟು ಮತದಾರು 1,77,023 ಇದ್ದು, ಅದರಲ್ಲಿ ಪುರುಷರು-89469 ಮಹಿಳೆಯರು-87554 ಮಂದಿ ಇದ್ದಾರೆ.

  ಚಾಮುಂಡೇಶ್ವರಿ ಚಕ್ರವ್ಯೂಹ: ಮಹತ್ವದ ಕ್ಷೇತ್ರದ ಹಿನ್ನೋಟ

  ಈ ಕ್ಷೇತ್ರದ ಜಾತಿ ಲೆಕ್ಕಚಾರದಲ್ಲಿ ಒಕ್ಕಲಿಗರು ಸುಮಾರು 45 ಸಾವಿರ ಇದ್ದು, 40 ಸಾವಿರ ಕುರುಬ ಸಮುದಾಯದ ಮತದಾರರಿದ್ದಾರೆ. 35 ಸಾವಿರಕ್ಕೂ ಹೆಚ್ಚು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತದಾರರಿದ್ದು, 15,000 ಲಿಂಗಾಯತರು, 15,000 ಮುಸ್ಲಿಂ ಮತದಾರರಿದ್ದರೆ ಇತರೆ ಸಮುದಾಯದ 30 ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ.

  ದಾಯಾದಿ ಕದನ

  ದಾಯಾದಿ ಕದನ

  ಪಿರಿಯಾಪಟ್ಟಣ ತಾಲ್ಲೂಕಿನ ಕಿತ್ತೂರು ಗಾಮದ ದಾಯಾದಿ ಕುಟುಂಬಗಳ ನಡುವೆ ಹತ್ತಾರು ವರ್ಷಗಳಿಂದ ರಾಜಕೀಯ ಕದನ ಏರ್ಪಟ್ಟಿತ್ತು. ಆದರೆ ಮಾಜಿ ಶಾಸಕ ದಿ.ಕೆ.ಎಸ್.ಕಾಳಮರೀಗೌಡರು ನಿಧನರಾದ ನಂತರ ಶಾಸಕ ಕೆ.ವೆಂಕಟೇಶ್ ಅವರೇ ತಾಲ್ಲೂಕಿನ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದಾರೆ.

  1999ರ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ಮಾಜಿ ಸಚಿವ ದಿ.ಎಚ್.ಎಂ.ಚನ್ನಬಸಪ್ಪನವರ ಪುತ್ರ ಎಚ್.ಸಿ.ಬಸವರಾಜು ಬಿಜೆಪಿಯಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಕೆ.ವೆಂಕಟೇಶ್ ಹಾಗೂ ಕೆ.ಎಸ್. ಕಾಳಮರೀಗೌಡ ಇಬ್ಬರೂ ಸೋತಿದ್ದರು. 2004 ಮತ್ತು 2008ರಲ್ಲಿ ನಡೆದ ಚುನಾವಣೆಯಲ್ಲಿ ಕುರುಬ ಸಮುದಾಯದ ಎಚ್.ಡಿ.ಗಣೇಶ್ ಬಿಜೆಪಿಯಿಂದ ಸ್ಪರ್ಧಿಸಿ 28 ಸಾವಿರಕ್ಕೂ ಹೆಚ್ಚು ಮತಗಳಿಸಿದ್ದರು. ಇವರು ಈ ಬಾರಿಯೂ ಬಿಜೆಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

  ಕಾಂಗ್ರೆಸ್-ಜೆಡಿಎಸ್ ನಡುವೆ ಪೈಪೋಟಿ

  ಕಾಂಗ್ರೆಸ್-ಜೆಡಿಎಸ್ ನಡುವೆ ಪೈಪೋಟಿ

  ಕ್ಷೇತದಲ್ಲಿ ಕಾಂಗ್ರೆಸ್ 7 ಬಾರಿ ಜಯಗಳಿಸಿದ್ದರೆ, 4 ಬಾರಿ ಜನತಾ ಪರಿವಾರದ ಅಭ್ಯರ್ಥಿಗಳು ಜಯಶೀಲರಾಗಿದ್ದಾರೆ. ಒಟ್ಟಾರೆಯಾಗಿ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜನತಾ ಪರಿವಾರದ ನಡುವೆ ಹೆಚ್ಚು ಪೈಪೋಟಿ ಕಂಡುಬಂದಿದೆ. ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಶಾಸಕರಲ್ಲಿ ಎಚ್.ಎಂ.ಚನ್ನಬಸಪ್ಪ ಹಾಗೂ ಕೆ.ವೆಂಕಟೇಶ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

  ತಾಲ್ಲೂಕಿನಲ್ಲಿ ಕಳೆದ 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಣ್ಣಮೊಗೇಗೌಡರ ಅಕಾಲಿಕ ನಿಧನದಿಂದ ಚುನಾವಣೆ ಒಂದು ತಿಂಗಳು ಮುಂದಕ್ಕೆ ಹೋಗಿತ್ತು. ಮುಖ್ಯಮಂತ್ರಿ ಸೇರಿದಂತೆ ಇಡೀ ಸಚಿವ ಸಂಪುಟ ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಬೀಡುಬಿಟ್ಟು ಪ್ರಚಾರ ಮಾಡಿ ಕೆ.ವೆಂಕಟೇಶ್ ಅವರನ್ನು ಗೆಲ್ಲಿಸಿಕೊಂಡಿದ್ದರು.

  ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ಕ್ಷೇತ್ರದಲ್ಲಿ 4-5 ದಿನಗಳ ಕಾಲ ವಾಸ್ತವ್ಯ ಹೂಡಿ ಹಳ್ಳಿಗಳಿಗೆ ತೆರಳಿ ಅಬ್ಬರದ ಪ್ರಚಾರ ಮಾಡಿ ತಮ್ಮ ಅಭ್ಯರ್ಥಿಯನ್ನು ಗೆಲುವಿನ ಸಮೀಪಕ್ಕೆ ತಂದಿದ್ದರು. ಅದರಲ್ಲಿ ಕೆಲವು ಅಭ್ಯರ್ಥಿಗಳ ಚುನಾವಣಾ ಕಣದಿಂದ ಹಿಂದೆ ಸರಿದು ಕೆಲವು ಅಭ್ಯರ್ಥಿಗಳ ತಟಸ್ಥ ಧೋರಣೆಯಿಂದಾಗಿ ಶಾಸಕ ಕೆ.ವೆಂಕಟೇಶ್ 2088 ಮತಗಳಿಂದ ಜಯಗಳಿಸಿದ್ದರು.

  ಯಾರ್ಯಾರು ಆಕಾಂಕ್ಷಿಗಳು?

  ಯಾರ್ಯಾರು ಆಕಾಂಕ್ಷಿಗಳು?

  ಹಾಲಿ ಶಾಸಕ ಮತ್ತು ಬಿಡಿಎ ಅಧ್ಯಕ್ಷರಾಗಿರುವ, ಮುಖ್ಯಮಂತ್ರಿಯವರ ಆಪ್ತರ ಬಳಗದಲ್ಲಿ ಗುರುತಿಸಿಕೊಂಡಿರುವ ಕೆ.ವೆಂಕಟೇಶ್ ಈ ಬಾರಿಯೂ ಕಾಂಗ್ರೆಸ್ ನಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕೆ.ವೆಂಕಟೇಶ್ ತಾಲ್ಲೂಕಿನಲ್ಲಿ 2013ರಿಂದ 2018ರವರೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದರಿಂದ ಈ ಬಾರಿಯೂ ಅವರಿಗೆ ಟಿಕೆಟ್ ಸಿಗಲಿದೆ ಎನ್ನಲಾಗುತ್ತಿದೆ.ಈ ಮಧ್ಯೆ ರಾಜ್ಯದ ವರಿಷ್ಠರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಸಹ ಕಾಂಗ್ರೆಸ್ ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದು ಅರ್ಜಿ ಸಲ್ಲಿಸಿದ್ದಾರೆ.

  2008 ಮತ್ತು 2013ರ ಚುನಾವಣೆಯಲ್ಲಿ ಕ್ರಮವಾಗಿ 757 ಮತ್ತು 2088 ಮತಗಳ ಕಡಿಮೆ ಅಂತರದಲ್ಲಿ ಪರಾಭವಗೊಂಡಿರುವ ಕೆ.ಮಹದೇವ್ ಅವರನ್ನು ಈ ಬಾರಿಯೂ ಜಾ.ದಳದ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು, ಕೆ.ಮಹದೇವ್ ಮತ್ತು ಅವರ ಪುತ್ರ ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ ಈಗಾಗಲೇ ಪ್ರಚಾರದಲ್ಲಿ ತೊಡಗಿದ್ದಾರೆ.

  ಬಿಜೆಪಿಯಲ್ಲಿ ಟಿಕೆಟ್ ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಎಚ್.ಡಿ.ಗಣೇಶ್, ಉದ್ಯಮಿ ಎಸ್.ಮಂಜುನಾಥ್, ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ.ಪ್ರಕಾಶ್ ಬಾಬುರಾವ್, ಎನ್.ಎನ್.ಶಂಭುಲಿಂಗಪ್ಪ, ಕೆ.ಎಸ್.ಶಶಿಕುಮಾರ್ ಬಿಜೆಪಿಯಿಂದ ಟಿಕೆಟ್ ಪಡೆಯಲು ತೀವ ಪೈಪೋಟಿ ನಡೆಸುತ್ತಿದ್ದಾರೆ.

  ಈ ಹಿಂದೆ ಗೆದ್ದವರು

  ಈ ಹಿಂದೆ ಗೆದ್ದವರು

  1952 - ಎಸ್.ಎಂ.ಮರಿಯಪ್ಪ - ಪಕ್ಷೇತರ - 12447
  1957 - ಎನ್.ಆರ್.¸ಸೋಮಣ್ಣ - ಕಾಂಗ್ರೆಸ್ - 19714
  1962- ಕೆ.ಎಂ.ದೇವಯ್ಯ - ಕಾಂಗ್ರೆಸ್ - 16359
  1967 - ಎಚ್.ಎಂ.ಚನ್ನಬಸಪ್ಪ - ಪಕ್ಷೇತರ - 31287
  1972 - ಎಚ್.ಎಂ. ಚನ್ನಬಸಪ್ಪ - ಕಾಂಗ್ರೆಸ್ - 26027
  1978- ಕೆ.ಎಸ್ ಕಾಳಮರೀಗೌಡ - ಜನತಾಪಕ್ಷ - 28152
  1983- ಕೆ.ಎಸ್.ಕಾಳಮರೀಗೌಡ - ಕಾಂಗ್ರೆಸ್ -23338
  1985 - ಕೆ. ವೆಂಕಟೇಶ್- ಜನತಾ ಪಕ್ಷ - 31764
  1989 - ಕೆ.ಎಸ್ ಕಾಳಮರೀಗೌಡ - ಕಾಂಗ್ರೆಸ್ - 46460
  1994 - ಕೆ.ವೆಂಕಟೇಶ್ - ಜಾ. ದಳ - 53111
  1999 - ಹೆಚ್. ಸಿ. ಬಸವರಾಜು - ಬಿಜೆಪಿ- 43399
  2004- ಕೆ.ವೆಂಕಟೇಶ್ - ಜಾ.ದಳ- 39357
  2008 - ಕೆ. ವೆಂಕಟೇಶ್ - ಕಾಂಗ್ರೆಸ್ - 38453
  2013 - ಕೆ.ವೆಂಕಟೇಶ್ - ಕಾಂಗ್ರೆಸ್ - 62045

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Karnataka Assembly elections 2018: Piriyapatna is one of the important constituencies of Mysuru district. Here is brief history and importance of Piriyapatna constituency.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more