• search

ಮೈಸೂರು ದಸರೆಗೆ ಸಜ್ಜಾಗಿ ನಿಂತ ಟೆಂಟ್ ಟೂರಿಸಂ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಮೈಸೂರು, ಸೆಪ್ಟೆಂಬರ್ 16 : ಮೈಸೂರು ಎಂದ ಕೂಡಲೇ ಎಲ್ಲರ ಮನಸ್ಸಿನಲ್ಲಿ ಮೂಡುವುದು ಜಗದ್ವಿಖ್ಯಾತ ದಸರಾ ಸಂಭ್ರಮಾಚರಣೆ. ಪ್ರತಿ ಬಾರಿಯೂ ಈ ನಾಡಹಬ್ಬಕ್ಕೆ ಇನ್ನೇನು ಕೆಲವೇ ದಿನ ಬಾಕಿ ಉಳಿದಿದೆ ಎನ್ನುವಾಗ ಸಿದ್ಧತೆ ಆರಂಭಿಸಲಾಗುತ್ತದೆ.

  ಕೊನೆಗೆ ಅರೆಬರೆ ಕಾಮಗಾರಿಯೊಂದಿಗೆ ಎಲ್ಲದಕ್ಕೂ ತೇಪೆ ಹಚ್ಚಲಾಗುತ್ತದೆ. ಆದರೆ ಈ ಬಾರಿ ಇನ್ನೂ 1 ತಿಂಗಳಿದೆ ಎನ್ನುವಾಗಲೇ ದಸರಾ ಆಚರಣೆಗೆ ಪ್ರವಾಸೋದ್ಯಮ ಇಲಾಖೆ ಸಿದ್ಧತೆ ಆರಂಭಿಸಿದ್ದು, ರೂಪುರೇಷೆಗಳನ್ನು ಸಿದ್ಧಪಡಿಸಿದೆ.

  ಮೈಸೂರು: ಈ ಬಾರಿ ದಸರಾ ಪ್ರಮುಖ ಆಕರ್ಷಣೆ ಟೆಂಟ್ ಟೂರಿಸಂ

  ದಸರಾ ಮಹೋತ್ಸವವನ್ನು ಪ್ರವಾಸೋದ್ಯಮದ ಚಿಮ್ಮುವ ಹಲಗೆ ಎಂದೇ ಪರಿಗಣಿಸಿರುವ ಪ್ರವಾಸೋದ್ಯಮ ಇಲಾಖೆ ಈ ಮೂಲಕ ಪ್ರವಾಸೋದ್ಯಮವನ್ನು ಲಾಭದಾಯಕವಾಗಿ ಮಾಡುವ ಹಾಗೂ ಶಾಶ್ವತವಾಗಿ ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಹತ್ತು ಹಲವು ಯೋಜನೆಗಳನ್ನು ಹಾಕಿಕೊಂಡಿದೆ.

  Highlights of Dasara celebration is tent tourism

  ಈ ಬಾರಿಯ ದಸರಾ ಆಚರಣೆಯ ಹೈಲೈಟ್ಸ್ ಎಂದರೆ ಟೆಂಟ್ ಟೂರಿಸಂ. ನಗರದ ಲಲಿತ ಮಹಲ್ ಮುಂಭಾಗದ ವಿಶಾಲವಾದ ಸುಮಾರು 50 ಎಕರೆ ಜಾಗವನ್ನು ಇದಕ್ಕೆ ನಿಗದಿಪಡಿಸಲಾಗಿದ್ದು, ಇಲ್ಲಿ ಟೆಂಟ್ ಗಳನ್ನು ನಿರ್ಮಿಸಿ, ಅಲ್ಲಿ ಪ್ರವಾಸಿಗರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡುವುದು ಈ ಟೂರಿಸಂ ಪ್ರಸ್ತಾವನೆಯ ಮುಖ್ಯ ಅಂಶವಾಗಿದೆ.

  ಕೋಟಿಗಟ್ಟಲೆ ವ್ಯಾಪಾರ, ಈ ಬಾರಿ ಮೈಸೂರು ದಸರಾದಲ್ಲಿ ಬಂಪರ್

  ಈ ಬಾರಿ ದಸರಾದಲ್ಲಿ ಮನೆಯ ಮಾದರಿಯಲ್ಲಿ 2-3 ಟೆಂಟ್ ಗಳನ್ನು ನಿರ್ಮಿಸಿ ಅದನ್ನು ಪರಿಚಯಿಸಲಾಗುವುದು. ಇದರ ಯಶಸ್ಸಿನ ಹಿನ್ನೆಲೆಯಲ್ಲಿ ಇದನ್ನು ವಿಸ್ತರಣೆ ಮಾಡಲಾಗುವುದು. ಇಲ್ಲಿ ದೇಶದ ಎಲ್ಲಾ ರಾಜ್ಯಗಳ ಆಹಾರ ಸಂಸ್ಕೃತಿಯನ್ನು ಪರಿಚಯಿಸಲಿದ್ದು, ಇಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು.

  ಜತೆಗೆ ಲಲಿತಮಹಲ್ ಪ್ಯಾಲೇಸ್ ಅನ್ನು ಕೇಂದ್ರವಾಗಿಟ್ಟುಕೊಂಡು ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಆಯೋಜಿಸಲಾಗುವುದು. 15 ನಿಮಿಷಗಳ ಈ ಕಾರ್ಯಕ್ರಮದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ, ಅವರ ವಂಶಾವಳಿಯನ್ನು ಪರಿಚಯಿಸುವ ಅಥವಾ ಕೃಷ್ಣರಾಜ ಸಾಗರ ಜಲಾಶಯ ನಿರ್ಮಾಣದ ಹಿನ್ನೆಲೆಯನ್ನು ಪರಿಚಯಿಸುವ ಯತ್ನ ಮಾಡಲಾಗುವುದು. ಇದಕ್ಕಾಗಿ ಸಿದ್ಧತೆಗಳು ನಡೆದಿವೆ.

  Highlights of Dasara celebration is tent tourism

  ಪ್ರವಾಸೋದ್ಯಮ ಇಲಾಖೆ ಈ ಸಂಬಂಧ ಪ್ರಸ್ತಾಪವನ್ನು ಸರ್ಕಾರಕ್ಕೆ ಕಳುಹಿಸಿದ್ದು ಇದಕ್ಕೆ ಒಪ್ಪಿಗೆಯೂ ದೊರೆತಿದೆ. ಇದರ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಗುಜರಾತಿನ ಕುಚ್ ಜಿಲ್ಲೆಯಲ್ಲಿ 'ರಣ್ ಉತ್ಸವ'ದ ಸಂದರ್ಭದಲ್ಲಿ ಟೆಂಟ್ ಟೂರಿಸಂ ಅಭಿವೃದ್ಧಿಗೊಂಡಿದೆ. ಅಲ್ಲಿನ ಮಾದರಿಯನ್ನು ಇಲ್ಲಿ ಅಳವಡಿಸಿಕೊಳ್ಳಲಾಗುವುದು.

  ಅ.11 ರಿಂದ ಮಹಿಳಾ ದಸರಾ: ರಂಜಿಸಲಿವೆ ಮನಸೂರೆಗೊಳ್ಳುವ ಕಾರ್ಯಕ್ರಮಗಳು

  ಈ ಬಾರಿ ಟೆಂಟ್ ನಲ್ಲಿ ನೆಲೆಸುವುದು ಪ್ರವಾಸಿಗರಿಗೆ ಹೊಸ ಅನುಭವ ನೀಡಲಿದೆ. ಮೈಸೂರಿಗೆ ಆಗಮಿಸುವ ಪ್ರವಾಸಿಗರು ರಾತ್ರಿ ಮೈಸೂರಿನಲ್ಲಿ ವಾಸ್ತವ್ಯ ಹೂಡುತ್ತಿಲ್ಲ. ಪ್ರವಾಸಿಗರು ಇಲ್ಲಿಯೇ ವಾಸ್ತವ್ಯ ಹೂಡಿದರೆ ಆದಾಯ ಹೆಚ್ಚುತ್ತದೆ. ಟೆಂಟ್ ಟೂರಿಸಂ ಪ್ರವಾಸಿಗರು ಒಂದೆರಡು ದಿನ ಮೈಸೂರಿನಲ್ಲಿಯೇ ಉಳಿಯುವಂತೆ ಆಕರ್ಷಿಸಲಿದೆ.

  ದಿನದ 24 ಗಂಟೆಯೂ ಇಲ್ಲಿ ಹೋಟೆಲ್ ಸೇವೆ ಇರಲಿದೆ. ಅಂದಹಾಗೆ ಟೆಂಟ್ ಟೂರಿಸಂ ಯೋಜನೆಯನ್ನು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಗೆ ವಹಿಸಲಾಗುವುದು. ಒಟ್ಟಾರೆ ಈ ಯೋಜನೆಯಿಂದ ಮತ್ತಷ್ಟು ಪ್ರವಾಸಿಗರನ್ನು ಈ ಬಾರಿಯ ದಸರಾ ಜನರನ್ನು ಸೆಳೆಯುವುದರಲ್ಲಿ ಸಂಶಯವಿಲ್ಲ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  This time the highlights of Dasara celebration is tent tourism. For this purpose, about 50 acres of land is allotted in front of the Lalitha Mahal.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more