ಮಾವುತರು ಕಾವಾಡಿ ಟೀಂಗಳಿಗೆ ಬಾಡಿ ಮಸಾಜ್ ಭಾಗ್ಯ!

Posted By:
Subscribe to Oneindia Kannada

ಮೈಸೂರು, ಆಗಸ್ಟ್ 28 : ದಸರಾ ಆನೆಗಳ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬಗಳಿಗಾಗಿ ಅರಮನೆ ಆವರಣದಲ್ಲಿ ಆಯೋಜಿಸಿರುವ ಉಚಿತ ಆರೋಗ್ಯ ಶಿಬಿರದಲ್ಲಿ ಬಾಡಿ ಮಸಾಜ್ ಸ್ಟೀಮ್ ಬಾಕ್ಸ್ ಲಭ್ಯವಾಗಿದೆ. ಹೌದು, ಇದೇ ಪ್ರಪ್ರಥಮ ಬಾರಿಗೆ ಈ ಯೋಜನೆ ಸಿಕ್ಕಿದ್ದು ಮಾವುತರು - ಕಾವಾಡಿಗರು ಸಂತಸದಿಂದಿದ್ದಾರೆ.

ಅರ್ಜುನ ಆಯ್ತು, ಈಗ ಕಾವೇರಿ ಮಾವುತ -ಕಾವಡಿ ಮುಸುಕಿನ ಗುದ್ದಾಟ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಯುಷ್ ಇಲಾಖೆಗಳು ಜಂಟಿಯಾಗಿ ದಸರಾ ಗಜಪಡೆ ಜೊತೆಗೆ ಆಗಮಿಸಿರುವ ಮಾವುತರು ಮತ್ತು ಕಾವಾಡಿಗಳ ಕುಟುಂಬಗಳಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಅರಮನೆ ಆವರಣದಲ್ಲಿ ನಡೆಯುತ್ತಿದ್ದು, ಇದು , ಅಕ್ಟೋಬರ್ 2ರವರೆಗೂ ಮುಂದುವರೆಯಲಿದೆ.

High tech touch for Mavutha - kawadi teams - this time everyone is getting body massage

ಇದ್ದು ಇಲ್ಲದಂತಾಯ್ತು ಈ ಸೌಲಭ್ಯ?
ಆಯುಷ್ ಇಲಾಖೆಯು ಇದೇ ಮೊದಲ ಬಾರಿಗೆ ಇಡೀ ದೇಹಕ್ಕೆ ಮಸಾಜ್ ಚಿಕಿತ್ಸೆ ನೀಡಲು ಅಗತ್ಯವಾದ ಬಾಡಿ ಮಸಾಜ್ ಸ್ಟೀಮ್ (ಸರ್ವಾಂಗ ಸ್ವೇದ) ಬಾಕ್ಸ್ ಅನ್ನು ತಂದಿದೆ. ಆದರೆ, ವಿದ್ಯುತ್ ಸಂಪರ್ಕ ಇಲ್ಲದೆ ಆ ಉಪಕರಣ ವನ್ನು ಬಳಸುವುದು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅದು ಸುಸ್ಥಿತಿಯಲ್ಲಿದ್ದರೂ ಶಿಬಿರ ನಡೆಯುತ್ತಿರುವ ಶೆಡ್‍ನ ಮೂಲೆಗೆ ಸೇರಿದೆ. ಅದಕ್ಕೆ ವಿದ್ಯುತ್ ಸಂಪರ್ಕ ದೊರೆತರೆ ಮಾವುತರ ಶರೀರದ ಮಸಾಜ್‍ಗೆ ಬಳಕೆಯಾಗುತ್ತದೆ.

ಮಾವುತ - ಕಾವಾಡಿ ಕಾದಾಟದಲ್ಲಿ ಬಡವಾದ ಗಜಪಡೆ ಕ್ಯಾಪ್ಟನ್ ಅರ್ಜುನ

ಕೀಲುನೋವಿನಿಂದ ಹರಬರಲು ಈ ಸೌಲಭ್ಯ
ಸಾಮಾನ್ಯವಾಗಿ ಮಾವುತರು, ಕಾವಾಡಿಗಳಿಗೆ ಕೀಲುನೋವು ಬಿಟ್ಟರೆ ಬೇರೆ ಸಮಸ್ಯೆಗಳು ಇರುವುದಿಲ್ಲ. ಹಾಗಾಗಿ ಅವರಿಗೆ ಸಣ್ಣ ಪಮಾಣದ ಸ್ಟೀಮ್ ಚಿಕಿತ್ಸೆಯೇ ಸಾಕು. ಅದಕ್ಕೆ ವಿದ್ಯುತ್ ಅಗತ್ಯವಿಲ್ಲ. ಉಳಿದಂತೆ ಕೆಮ್ಮು, ನೆಗಡಿ, ಜ್ವರದಂತಹ ಸಣ್ಣಪುಟ್ಟ ಸಮಸ್ಯೆಗಳಿಗೆ ಅವರು ಚಿಕಿತ್ಸೆ ಪಡೆಯುತ್ತಾರೆ.
ಮಾವುತರು, ಅವರ ಕುಟುಂಬಸ್ಥರೂ ಶಿಬಿರದ ಪ್ರಯೋಜನ ಪಡೆಯುತ್ತಿದ್ದಾರೆ. ನಾಲ್ಕು ದಿನಗಳಿಂದ ಸುಮಾರು 50ಕ್ಕೂ ಹೆಚ್ಚು ಮಂದಿ ಕೀಲುನೋವು ಚಿಕಿತ್ಸೆಗೊಳಗಾಗಿದ್ದಾರೆ ಎನ್ನಲಾಗಿದೆ.

ದಿನಕ್ಕೊಬ್ಬ ವೈದ್ಯರು
ಈ ಶಿಬಿರದಲ್ಲಿ ಜಿಲ್ಲೆಯಿಂದ ಒಟ್ಟು 8 ವೈದ್ಯರನ್ನು ದಿನಕ್ಕೊಬ್ಬರಂತೆ ನಿಯೋಜಿಸಲಾಗಿದೆ. ಭಾನುವಾರದ ಪಾಳಿಗೆ ಇಬ್ಬರು ವೈದ್ಯರಿದ್ದು, ಒಂದು ಭಾನುವಾರ ಒಬ್ಬರು, ಅದರ ಮುಂದಿನ ಭಾನುವಾರ ಇನ್ನೊಬ್ಬರು ವೈದ್ಯರು ಕರ್ತವ್ಯ ನಿರ್ವಹಿಸುತ್ತಾರೆ. ಅದು ರಜಾದಿನವಾದ್ದರಿಂದ ಈ ವ್ಯವಸ್ಥೆಯನ್ನು ಇಲಾಖೆಯೇ ಮಾಡಿದೆ. ಇನ್ನು ಸೋಮವಾರ ಬರುವ ವೈದ್ಯರು ಮುಂದಿನ ಸೋಮವಾರ ಮತ್ತೆ ಕರ್ತವ್ಯಕ್ಕೆ ಆಗಮಿಸುವುದು. ಭಾನುವಾರ ಹೊರತಾಗಿ ಉಳಿದೆಲ್ಲ ದಿನಗಳಿಗೆ ಈ ವ್ಯವಸ್ಥೆ ಅನ್ವಯವಾಗುತ್ತದೆ. ಅಲ್ಲದೆ, ಒಬ್ಬರು ಸಹಾಯಕರು, ನಾಲ್ವರು ಸಿಬ್ಬಂದಿಯೂ ಶಿಬಿರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ದಸರಾದ ತ್ರಿಡಿ ಪ್ರದರ್ಶನ
407 ವರ್ಷಗಳ ಇತಿಹಾಸವನ್ನು ಹೊಂದಿರುವ ದಸರಾ ಹಬ್ಬವನ್ನು ಈ ವರ್ಷ ಮೈಸೂರಿನ 133 ವರ್ಷಗಳ ಇತಿಹಾಸ ಹೊಂದಿರುವ ಟೌನ್ ಹಾಲ್ ಕಟ್ಟಡದಲ್ಲಿ ತ್ರಿಡಿ ತಂತ್ರಜ್ಞಾನ ಮೂಲಕ ಪರದೆ ಮೇಲೆ ಪ್ರದರ್ಶನ ಮಾಡಲು ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Free Health Camp and Body Massage organized by the Dasara elephant mahouts, kawadi and their families at the palace premises.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ