ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ: ಪಾರಂಪರಿಕ ನಡಿಗೆಗೆ ಚಾಲನೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 23: ಪಾರಂಪರಿಕ ರಾಜಧಾನಿ ಎಂದೇ ಹೆಸರುವಾಸಿಯಾಗಿರುವ ಮೈಸೂರಿನಲ್ಲಿ 200 ಕ್ಕೂ ಹೆಚ್ಚಿನ ಪಾರಂಪರಿಕ ಕಟ್ಟಡಗಳಿವೆ. ಈ ಹಿನ್ನೆಲೆ ಮೈಸೂರಿನ ಕಟ್ಟಡಗಳ ಪರಿಚಯಕ್ಕಾಗಿ ಇಂದು ಪಾರಂಪರಿಕ ನಡಿಗೆ ಏರ್ಪಡಿಸಲಾಗಿತ್ತು.

ವೈಭವದ ದಸರಾ ವಿಶೇಷ ಪುಟ

ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ದಸರಾ ಮಹೋತ್ಸವದ ಅಂಗವಾಗಿ ಪ್ರಮುಖವಾದ 10 ಪಾರಂಪರಿಕ ಸ್ಥಳಗಳನ್ನು ಮೊದಲ ಮಾರ್ಗದಲ್ಲಿ ಸಂದರ್ಶಿಸಲಾಯಿತು.

Heritage walk: a special programme starts today in Mysuru Dasara

ನಡಿಗೆಯು ಪುರಭವನ, ಸಿಲ್ವರ್ ಜುಬಿಲಿ ಕ್ಲಾರ್ಕ್ ಟವರ್, ಫ್ರಿ ಮೇಸನ್ಸ್ ಕ್ಲಬ್, ಚಾಮರಾಜೇಂದ್ರ ವೃತ್ತ, ಅಂಬಾವಿಲಾಸ ಅರಮನೆ, ಕೃಷ್ಣರಾಜೇಂದ್ರ ವೃತ್ತ, ದೇವರಾಜ ಮಾರುಕಟ್ಟೆ ಕೃಷ್ಣ ರಾಜೇಂದ್ರ ಆಸ್ಪತ್ರೆ, ಮೈಸೂರು ಮೆಡಿಕಲ್ ಕಾಲೇಜು ಮತ್ತು ಆಯುರ್ವೆದಿಕ್ ಆಸ್ಪತ್ರೆಯಿಂದ ಸಾಗಿ ಬಂತು. ಸಂಕ್ಷಿಪ್ತ ಇತಿಹಾಸದ ಮೆಲುಕು ಹಾಕಿ ಪ್ರತಿ‌ಸ್ಥಳದ ಮಾಹಿತಿಯನ್ನು ತಜ್ಞರು ಎಳೆ ಎಳೆಯಾಗಿ ಬಿಚ್ಚಿಟ್ಟರು.

ದಸರಾ ವೈಭವ 2017: ಸರಳ ದಸರಾದ ಅಪರೂಪದ ಚಿತ್ರಗಳು

Heritage walk: a special programme starts today in Mysuru Dasara

ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ಅವರು ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು, ನಂತರ ಮಾತನಾಡಿದ ಅವರು ಕೇವಲ ಪಾರಂಪರಿಕ ಸ್ಥಳ ವೀಕ್ಷಣೆ ಅಷ್ಟೆ ಅಲ್ಲದೆ ಮಾಹಿತಿ ತಿಳಿದುಕೊಳ್ಳುವ ವಿಶೇಷ ಕಾರ್ಯಕ್ರಮ ಇದಾಗಿದ್ದು,ಎಲ್ಲರೂ ಭಾಗವಹಿಸಿ‌ ನಗರದ ಪರಂಪರೆಯನ್ನು ವಾಸ್ತು ಶಿಲ್ಪವನ್ನು ಅರಿತುಕೊಂಡು ನಡೆಯಬೇಕು ಎಂದು ತಿಳಿಸಿದರು.

Heritage walk: a special programme starts today in Mysuru Dasara

ಇದೇ ಬಗ್ಗೆ ಇತಿಹಾಸ ತಜ್ಞರಾದ ಎನ್.ಎಸ್. ರಂಗರಾಜು ಹಾಗೂ ಈಚನೂರು ಕುಮಾರ್ ಅವರು ಪಾರಂಪರಿಕ ಕಟ್ಟಡಗಳ ಬಗ್ಗೆ ವಿವರಿಸಿದರು. ಪಾರಂಪರಿಕ ಕಾರ್ಯಕ್ರಮ ಭಾನುವಾರ ನಡೆಯಲಿದ್ದು 50 ಜಾವಾ ಬೈಕ್ ಗಳಲ್ಲಿ ಹಾಗೂ ಸೋಮವಾರ ಟ್ರಿಣ್ ಟ್ರಿಣ್ ಸೈಕಲ್ ಬಳಸಿಕೊಂಡು ಪಾರಂಪರಿಕ‌ ಸ್ಥಳಗಳನ್ನು ಸಂದರ್ಶಿಸಲಿದ್ದಾರೆ.

English summary
To introduce the importance and history of Mysuru's more than 200 heritage buildings, a special programme called, Heritage walk takes place today in Mysuru. This is one of the special programmes of Mysuru Dasara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X