ಮೈಸೂರು ದಸರಾ: ಪ್ರವಾಸಿಗರಿಗೆ ಹೆಲಿಕಾಪ್ಟರ್ ಜಾಲಿ ರೈಡ್ ಅವಕಾಶ

By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಆಗಸ್ಟ್ 10: ಪಾರಂಪರಿಕ ನಗರ ಮೈಸೂರಿನ ಸೊಬಗನ್ನು ಆಗಸದಿಂದ ವೀಕ್ಷಿಸುವ 'ಆಗಸದಿಂದ ನಮ್ಮ ಮೈಸೂರು' ಹೆಲಿಕಾಪ್ಟರ್ ಜಾಲಿ ರೈಡ್ ಅವಕಾಶ ದಸರಾ ವೇಳೆಯೂ ಲಭ್ಯವಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆರಂಭಕ್ಕೆ ಕೇವಲ 45 ದಿನಗಳು ಬಾಕಿಯಿದ್ದು ಸಿದ್ಧತೆಗಳು ಆರಂಭವಾಗಿವೆ. ದೇಶ, ವಿದೇಶಗಳ ಪ್ರವಾಸಿಗರ ಆಕರ್ಷಣೆಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಇದರಲ್ಲಿ ಹೆಲಿಕಾಪ್ಟರ್ ಜಾಲಿ ರೈಡ್ ಕೂಡ ಸೇರಿದೆ. 2016ರಲ್ಲಿ ಮೊದಲ ಬಾರಿಗೆ ಜಿಲ್ಲಾಧಿಕಾರಿ ಡಿ.ರಂದೀಪ್ ಅವರ ವಿಶೇಷ ಆಸಕ್ತಿಯ ಫಲವಾಗಿ ಎರಡು ಹೆಲಿಕಾಪ್ಟರ್ ಗಳನ್ನು ಜಾಯ್ ರೈಡ್‍ಗೆ ಬಳಸಿಕೊಳ್ಳಲಾಗಿತ್ತು.

Helicopter jolly ride will be available during Mysuru Dasara

ಪವನ್ ಹನ್ಸ್ ಮತ್ತು ಚಿಪ್ಸನ್ ಏವಿಯೇಷನ್ ಹೆಲಿಕಾಪ್ಟರ್ರಗಳು ಹಾರಾಟ ನಡೆಸಿದ್ದವು. ಇದು ಭಾರೀ ಯಶಸ್ವಿಯಾಗಿತ್ತು. ಸಂಬಂಧ ಸಂಸ್ಥೆಗಳೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದೆ ಎಂದು ಹೇಳಿದರು. ಕಳೆದ ಬಾರಿ ಸ್ವಲ್ಪ ತಡವಾಗಿ ಆರಂಭವಾಗಿತ್ತು. ಜನರ ಒತ್ತಡವೂ ಹೆಚ್ಚಾಗಿತ್ತು. ದಸರಾ ವಿಶೇಷಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಿ.ರಂದೀಪ್ ಅವರು, ಈ ಬಾರಿಯೂ 'ಆಗಸದಿಂದ ನಮ್ಮ ಮೈಸೂರು' ಹೆಲಿಕಾಪ್ಟರ್ ಜಾಲಿ ರೈಡ್ ಇರಲಿದೆ.

ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಆನೆ, ಮಾವುತರಿಗೆ 1 ಕೋಟಿ ವಿಮೆ

ಈಗಾಗಲೇ ಈ ಹೀಗಾಗಿ ಈ ಬಾರಿ 3-4 ದಿನ ಮೊದಲೇ ಆರಂಭಿಸುವಂತೆ ಕೋರಲಾಗಿದೆ. ಜತೆಗೆ ಜನರಿಗೆ ತೊಂದರೆಯಾಗದಂತೆ 'ಬುಕ್ ಮೈ ಶೋ'ಮೂಲಕ ಟಿಕೆಟ್ ಅನ್ನು ಆನ್‍ಲೈನ್‍ನಲ್ಲಿ ಖರೀದಿಸುವ ವ್ಯವಸ್ಥೆ ಮಾಡಲಾಗುವುದು. ಅಲ್ಲೇ ಅವರಿಗೆ ಸಮಯ ಹಾಗೂ ದಿನಾಂಕವನ್ನು ನೀಡುವುದರಿಂದ ಅಲ್ಲಿ ಬಂದು ಕಾಯುವುದು ತಪ್ಪುತ್ತದೆ ಎಂದು ಹೇಳಿದರು.

ಕಳೆದ ವರ್ಷ 2499 ರೂ. ಟಿಕೆಟ್ ದರ ಇತ್ತು. ಇದು ಸ್ವಲ್ಪ ದುಬಾರಿ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಈ ಬಾರಿ ಇದನ್ನು ಕಡಿಮೆ ಮಾಡಿಸುವ ಪಯತ್ನ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಕಳೆದ ವರ್ಷ 'ಆಗಸದಿಂದ ಮೈಸೂರು' ಎಂಬ ಶೀರ್ಷಿಕೆಯಲ್ಲಿ ಜಾಯ್ ರೈಡ್ ಮೂಲಕ ನಗರದ ಸೌಂದರ್ಯವನ್ನು ಆಗಸದಿಂದ ಸುಮಾರು 3,000 ಮಂದಿ ವೀಕ್ಷಿಸಿದ್ದು ಹೆಲಿಕಾಪ್ಟರ್ ಗಳು ಸುಮಾರು 8715 ನಿಮಿಷಗಳ ಕಾಲ ಹಾರಾಟ ನಡೆಸಿದ್ದವು.

ಜಿಲ್ಲಾಡಳಿತದ ಮನವಿ ಮೇರೆಗೆ ಬೆಂಗಳೂರಿನ ಖಾಸಗಿ ಸಂಸ್ಥೆಯ ಎರಡು ಹೆಲಿಕಾಪ್ಟರ್ ಗಳು ಆಗಮಿಸಿದ್ದವು. ತಲಾ 6 ಆಸನಗಳ ಪವನ್ ಹನ್ಸ್ ನಲ್ಲಿ 1700ಕ್ಕೂ ಹೆಚ್ಚು ಮಂದಿ ಹಾಗೂ ಚಿಪ್ಸನ್ ಏವಿಯೇಷನ್ ಹೆಲಿಕಾಪ್ಟರ್ ನಲ್ಲಿ 1250 ಮಂದಿ ಪಯಾಣಿಸಿದ್ದು ಒಟ್ಟು 75 ಲಕ್ಷ ರೂ. ಆದಾಯ ಬಂದಿತ್ತು. ಲಲಿತ ಮಹಲ್ ಹೆಲಿಪ್ಯಾಡ್ ನಿಂದ ಹೆಲಿಕಾಪ್ಟರ್ ಗಳ ಹಾರಾಟ ನಡೆಯಲಿದ್ದು, ಲಲಿತಮಹಲ್, ಚಾಮುಂಡಿಬೆಟ್ಟ, ಅರಮನೆ, ಮೃಗಾಲಯ ಸೇರಿದಂತೆ ಮೈಸೂರು ನಗರವನ್ನು ಮೇಲಿನಿಂದ ವೀಕ್ಷಿಸುವ ಅಪೂರ್ವ ಅವಕಾಶ ದೊರೆಯಲಿದೆ.

Helicopter jolly ride will be available during Mysuru Dasara

6 ವರ್ಷಗಳ ಹಿಂದೆ ಆರಂಭವಾದ ಹಾರಾಟ
ಆರು ವರ್ಷಗಳ ಹಿಂದೆ ಆರಂಭವಾದ ಮೋಜಿನ ವಿಮಾನ ಹಾರಾಟ ಸತತವಾಗಿ ಮೂರು ವರ್ಷಗಳ ಕಾಲ ನಡೆದು ಪವಾಸಿಗರನ್ನು ಹಾಗೂ ಸ್ಥಳೀಯ ಆಸಕ್ತ ಜನರನ್ನು ಆಕರ್ಷಿಸಿತ್ತು. ಮೊದಲಬಾರಿಗೆ 2012 ರಲ್ಲಿ 2 ಸೀಟ್‍ನ ಸೀಸ್ನಾ 152 ಸಂಖ್ಯೆಯ ಮಹಾರಾಜ ಹಾಗೂ 4 ಸೀಟ್‍ನ ಸೀಸ್ನಾ 172 ಸಂಖ್ಯೆಯ ಯುವರಾಜ ಲಘು ವಿಮಾನಗಳು ಹಾರಾಟ ನಡೆಸಿದ್ದವು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ 2013ರಲ್ಲಿ ಎರಡು ಯುವರಾಜ ವಿಮಾನವನ್ನು ಹಾರಾಟಕ್ಕೆ ಬಳಸಲಾಯಿತು. ಇದರಿಂದ ಹೆಚ್ಚಿನ ಜನರಿಗೆ ಅವಕಾಶ ಲಭ್ಯವಾಯಿತು.

ಲಲಿತಮಹಲ್, ಚಾಮುಂಡಿಬೆಟ್ಟ, ಅರಮನೆ, ಮೃಗಾಲಯವನ್ನು ಮೇಲಿನಿಂದ ವೀಕ್ಷಿಸುವ ಅವಕಾಶ ದೊರೆತಿತ್ತು. ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ 10 ದಿನ ಐದು ಅವಧಿಯಲ್ಲಿ ತಲಾ 15 ನಿಮಿಷ ಹಾರಾಟ ಇರಲಿದೆ.

ನಾಳೆಯಿಂದ ಅರಮನೆಗೆ ಆಂತರಿಕ ಭದ್ರತೆ :
ವಿಶ್ವವಿಖ್ಯಾತ ಮೈಸೂರು ಅರಮನೆ ಭದ್ರತೆ ಮತ್ತು ವಿದೇಶಿಯರೂ ಸೇರಿದಂತೆ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಆಂತರಿಕ ಭದ್ರತಾ ವ್ಯವಸ್ಥೆಗೆ ಮೈಸೂರು ಅರಮನೆ ಮಂಡಳಿ ಸಜ್ಜಾಗಿದೆ. ಮೈಸೂರು ಅರಮನೆ ಆಡಳಿತ ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಿ. ರಂದೀಪ್, ಅರಮನೆ ಭದ್ರತೆ ಹಾಗೂ ಪ್ರವಾಸಿಗರ ದೃಷ್ಟಿಯಿಂದ ಆರಂಭಿಕವಾಗಿ 30 ಭದ್ರತಾ ಸಿಬ್ಬಂದಿಯನ್ನು ಅರಮನೆಯ ಸುತ್ತಮುತ್ತ ಯೋಜಿಸಲು ತೀರ್ಮಾನಿಸಿದ್ದಾರೆ. ಇವರೆಲ್ಲರೂ ತಮ್ಮ ಕರ್ತವ್ಯವನ್ನು ಆ.10ರ ನಾಳೆಯಿಂದಲೇ ನಿರ್ವಹಿಸಲಿದ್ದಾರೆ.

Siddaramaiah Says, Mysuru Dasara Jamboo Savari Will Be Held On Sep 30th | Oneindia Kananda

ಭದ್ರತಾ ಸಿಬ್ಬಂದಿ ಪ್ರಥಮ ಹಂತವಾಗಿ ಮೈಸೂರು ಅರಮನೆಯ ವರಹಾ ದ್ವಾರದ ಹೊರ ಭಾಗ ಮತ್ತು ಪಾರ್ಕಿಂಗ್ ಸ್ಥಳದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಇವರ ನಿರ್ವಹಣೆಗಾಗಿ ಮೈಸೂರು ಅರಮನೆ ಆಡಳಿತ ಮಂಡಳಿ ಕಚೇರಿಯಲ್ಲೇ 2 ಕೌಂಟರ್ ಗಳನ್ನು ತೆರೆಯಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮೈಸೂರು ಅರಮನೆ ವರಾಹ ದ್ವಾರದ ಹೊರ ಭಾಗದಲ್ಲಿ ರಸ್ತೆ ಬದಿ ವ್ಯಾಪಾರಿಗಳು ವಿವಿಧ ಪದಾರ್ಥಗಳ ವ್ಯಾಪಾರ - ವಹಿವಾಟು ನಡೆಸುವುದರ ಜೊತೆಗೆ ಅರಮನೆಗೆ ಬರುವ ಪ್ರವಾಸಿಗರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಅಲ್ಲದೆ ಅವರಿಗೆ ಒಂದು ರೀತಿ ಕಿರುಕುಳ ನೀಡುತ್ತಿದ್ದಾರೆ. ಮೈಸೂರು ಅರಮನೆ ಸೌಂದರ್ಯಕ್ಕೂ ಇದರಿಂದ ಧಕ್ಕೆಯುಂಟಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The helicopter jolly ride will be available during Mysuru Dasara, to view the beauty of Mysore. Tourists can use this opportunity, Mysuru DC Randeep told.
Please Wait while comments are loading...