ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರನ್ನು ಕಣ್ತುಂಬಿಕೊಳ್ಳಲು ಹೆಲಿಕಾಪ್ಟರ್ ನಲ್ಲಿ ಜಾಲಿ ರೈಡ್ ಮಾಡಿ..

|
Google Oneindia Kannada News

ಮೈಸೂರು, ಅಕ್ಟೋಬರ್. 14: ದಸರಾ ಮಹೋತ್ಸವದ ಸಂದರ್ಭದಲ್ಲಿ ಹೆಲಿಕಾಪ್ಟರ್ ಮೂಲಕ ಮೈಸೂರು ನಗರವನ್ನು ಕಣ್ತುಂಬಿಕೊಳ್ಳಲು ಆಗಸದಿಂದ ಮೈಸೂರು' ಎಂಬ ಹೆಲಿಕಾಪ್ಟರ್ ಜಾಲಿ ರೈಡ್ ಆರಂಭವಾಗಿದೆ.

6 ಆಸನಗಳುಳ್ಳ (ಪೈಲಟ್ ಹೊರತುಪಡಿಸಿ) ಹೆಲಿಕಾಪ್ಟರ್ 8ರಿಂದ 10 ನಿಮಿಷಗಳ ಕಾಲ ಸುಮಾರು 20 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸಲಿದ್ದು, ಚಾಮುಂಡಿ ಬೆಟ್ಟ, ಮೈಸೂರು ಅರಮನೆ, ಬಸ್ ನಿಲ್ದಾಣ, ಲಲಿತಮಹಲ್ ಪ್ಯಾಲೇಸ್, ಕುಕ್ಕರಹಳ್ಳಿ ಕೆರೆ, ಕಾಫರ್ಡ್ ಹಾಲ್, ರೈಲ್ವೆ ನಿಲ್ದಾಣ, ಜಗನ್ಮೋಹನ ಅರಮನೆ, ಕಾರಂಜಿಕೆರೆ, ವಸ್ತು ಪ್ರದರ್ಶನಮೈದಾನ, ಕೆ.ಆರ್.ವೃತ್ತ ಇವುಗಳನ್ನು ಆಗಸದಿಂದ ವೀಕ್ಷಿಸಬಹುದು.

ದಸರಾ ಓಟದ ಸ್ಪರ್ಧೆಯಲ್ಲಿ ಮುಗ್ಗರಿಸಿ ಬಿದ್ದ ಸಚಿವ ಜಿಟಿ ದೇವೇಗೌಡದಸರಾ ಓಟದ ಸ್ಪರ್ಧೆಯಲ್ಲಿ ಮುಗ್ಗರಿಸಿ ಬಿದ್ದ ಸಚಿವ ಜಿಟಿ ದೇವೇಗೌಡ

ದಸರಾ ಮುಕ್ತಾಯದವರೆಗೂ ಹೆಲಿಕಾಪ್ಟರ್ ಜಾಲಿ ರೈಡ್ ನಡೆಯಲಿದ್ದು, ಒಬ್ಬರಿಗೆ 2,400 ರೂ.ದರ ನಿಗದಿಪಡಿಸಲಾಗಿದೆ. ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ನಲ್ಲಿ ಜಾಲಿ ರೈಡ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ಚಾಲನೆ ನೀಡಿದರು.

Helicopter Jolly Ride has begun to see the city of Mysore

ಚಾಲನೆ ನೀಡಿದ ಬಳಿಕ ಸಚಿವ ಜಿ.ಟಿ.ದೇವೇಗೌಡ ಅವರು ಪತ್ನಿ ಲಲಿತ ಜಿ.ಟಿ.ದೇವೇಗೌಡ, ಪುತ್ರ ಹರೀಶ್ ಗೌಡ, ಸೊಸೆ ವರ್ಷ ಹಾಗೂ ಮೊಮ್ಮಕ್ಕಳೊಂದಿಗೆ ಜಾಲಿ ರೈಡ್ ನಲ್ಲಿ ಪಾಲ್ಗೊಂಡರು.

ಮೈಸೂರು ದಸರಾ - ವಿಶೇಷ ಪುರವಣಿ

ನಂತರ ಮಾತನಾಡಿದ ಜಿ.ಟಿ.ದೇವೇಗೌಡ, 'ನಾಗರಿಕರಿಗೆ ಇದು ಒಳ್ಳೆಯ ಅನುಭವ. ಹೆಲಿಕಾಪ್ಟರ್ ನಲ್ಲಿ ಪಯಣಿಸಬೇಕು ಎಂಬ ಕನಸು ಅನೇಕರಿಗೆ ಇರುತ್ತದೆ. ಇದರ ಪ್ರಯೋಜನ ಪಡೆದುಕೊಳ್ಳಲು ಈ ವ್ಯವಸ್ಥೆ ಮಾಡಲಾಗಿದೆ' ಎಂದರು.

ನೋಡ ಬನ್ನಿ ಪಾರಂಪರಿಕ ನಗರಿಯ ಝಗಮಗಿಸುವ ದೀಪಾಲಂಕಾರದ ಸೊಬಗುನೋಡ ಬನ್ನಿ ಪಾರಂಪರಿಕ ನಗರಿಯ ಝಗಮಗಿಸುವ ದೀಪಾಲಂಕಾರದ ಸೊಬಗು

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಬೆಂಗಳೂರು- ಮೈಸೂರು ನಡುವೆ 'ಆಕಾಶ ಅಂಬಾರಿ' ವಿಮಾನಯಾನವನ್ನು 999ರೂ ಕ್ಕೆ ನೀಡಿದ್ದು ಅತ್ಯುತ್ತಮ ಪ್ರತಿಕ್ರಿಯೆ ಬಂದಿದೆ. ಅಂತೆಯೇ, 'ಹೆಲಿರೈಡ್' ದಸರೆಯಲ್ಲಿ ಅತ್ಯುತ್ತಮ ಆಕರ್ಷಣೆಯಾಗಲಿದೆ' ಎಂದು ಹೇಳಿದರು.

Helicopter Jolly Ride has begun to see the city of Mysore

ಮೈಸೂರು ದಸರಾ: ಏರ್ ಶೋ ಪೂರ್ವ ತಾಲೀಮು ನೋಡಿ ಬೆಕ್ಕಸ ಬೆರಗಾದ ಜನಮೈಸೂರು ದಸರಾ: ಏರ್ ಶೋ ಪೂರ್ವ ತಾಲೀಮು ನೋಡಿ ಬೆಕ್ಕಸ ಬೆರಗಾದ ಜನ

ಅ.19ರವರೆಗೂ ಈ ಕಾರ್ಯಕ್ರಮ ನಡೆಯಲಿದೆ. ಪ್ರವಾಸಿಗರ ಬೇಡಿಕೆಯನ್ನು ನೋಡಿಕೊಂಡು 2 ದಿನ ವಿಸ್ತರಿಸುವ ಬಗ್ಗೆ ಯೋಚಿಸಲಾಗುವುದು ಎಂದರು.

English summary
'Helicopter Jolly Ride' has begun to see the city of Mysore. Helicopter Jolly Ride will be held Until Dussehra termination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X