ಮೈಸೂರಿನ ಮೃಗಾಲಯದ ವನ್ಯಜೀವಿ ಉಳಿವಿಗೆ ಮೃತ್ಯುಂಜಯ ಹೋಮ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ 6: ಮೈಸೂರು ಮೃಗಾಲಯದಲ್ಲಿ ಪ್ರಾಣಿ ಪಕ್ಷಿಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯದ ಎದಿರು ವಿಶ್ವಕ್ಷೇಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಮಹಾಮೃತ್ಯುಂಜಯ ಹೋಮವನ್ನು ಜರುಗಿಸಲಾಯಿತು.[ನಂಜನಗೂಡಲ್ಲಿ ಅಷ್ಟಮಂಗಲ ಪರಿಹಾರ ಪೂಜೆ]

ಮೃಗಾಲಯದ ಮುಂಭಾಗ ಪುರೋಹಿತರಾದ ಪ್ರಹ್ಲಾದ್ ಮತ್ತು ಮಂಜುನಾಥ ಅವರ ನೇತೃತ್ವದಲ್ಲಿ ಮಹಾಮೃತ್ಯುಂಜಯ ಹೋಮ ಜರುಗಿತು. ಬಿಜೆಪಿ ಮುಖಂಡ ಜೋಗಿ ಮಂಜು ಮಾತನಾಡಿ ಮೃಗಾಲಯದ ಅಧಿಕಾರಿಗಳು ಪ್ರಾಣಿ ಪಕ್ಷಿಗಳನ್ನು ಜಾಗರೂಕತೆಯಿಂದ ನೋಡಿಕೊಳ್ಳುತ್ತಿದ್ದವರೂ ಪಕ್ಷಿಗಳು ಸೋಂಕಿನಿಂದ ಸಾವಿಗೀಡಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪ್ರಾಣಿ-ಪಕ್ಷಿಗಳ ಸಂಕುಲ ಉಳಿಯಬೇಕು. ಅವುಗಳ ಆರೋಗ್ಯವೃದ್ಧಿಗಾಗಿ ಈ ಹೋಮವನ್ನು ಆಯೋಜಿಸಲಾಗಿದೆ ಎಂದರು.[ಭೀಮರತಿ ಶಾಂತಿ ಕಾರ್ಯಕ್ರಮದಲ್ಲಿ ಡಾ.ಜಿ. ಪರಮೇಶ್ವರ]

held MahaMrityunjaya homa in front of zoo in mysore

ವಿಕ್ರಂ ಮಾತನಾಡಿ ಮನುಷ್ಯರಾದರೆ ಏನಾದರೂ ಹೇಳಿಕೊಳ್ಳುತ್ತೇವೆ. ಆದರೆ ಪ್ರಾಣಿ-ಪಕ್ಷಿಗಳಿಗೆ ಹೇಳಿಕೊಳ್ಳಲು ಹೇಗೆ ಸಾಧ್ಯ, ವಯೋಸಹಜ ಹಾಗೂ ಅಕಾಲಿಕ ಮರಣದಿಂದ ಪಕ್ಷಿಸಂಕುಲಗಳು ನಾಶವಾಗಬಾರದು ಎಂಬ ಉದ್ದೇಶದಿಂದ ಹೋಮ ಹವನವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಅಜಯಶಾಸ್ತ್ರಿ, ನೀಲಕಂಠ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Visvaksema Charitable Trust was held MahaMruthunjaya homa in front of zoo on friday. The reason of homa is survival of fauna in Mysore zoo.
Please Wait while comments are loading...