ಮೈಸೂರಿನಲ್ಲಿ ವರುಣನ ಆರ್ಭಟ ಮಾಡಿದ ಎಡವಟ್ಟು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು , ಮೇ.19: ಮೈಸೂರಿನಲ್ಲಿ ಗುರುವಾರ (ಮೇ.18) ತಡರಾತ್ರಿ ಎಡಬಿಡದೆ ಸುರಿದ ಭಾರೀ ಮಳೆಯಿಂದಾಗಿ ಮನೆಯ ಮೇಲ್ಛಾವಣಿ ಕುಸಿದು ನಿವಾಸಿಗಳು ಪಾರಾದ ಘಟನೆ ನಡೆದಿದೆ.
ಮೈಸೂರಿನ ಅಗ್ರಹಾರ ಬಳಿ ಕಾಶಿ ವಿಶ್ವನಾಥ ದೇಗುಲದ ಎದುರು ಇರುವ ಮಹದೇವಮ್ಮ, ನಿಂಗಮ್ಮ ಎಂಬುವವರ ಬಾಡಿಗೆ ಮನೆಯ ಮೇಲ್ಛಾವಣಿ ಕುಸಿದಿದೆ.

ಇದರಿಂದ ಮಳೆಯ ನೀರೆಲ್ಲಾ ಮನೆಯೊಳಗೆ ನುಗ್ಗಿ ಹಾನಿ ಸಂಭವಿಸಿದೆ. ಮಳೆಯಲ್ಲಿ ತೊಯ್ದು ಕೆಲವು ವಸ್ತುಗಳು ಹಾನಿಗೀಡಾಗಿವೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಮನೆಯ ನಿವಾಸಿಗಳು ಪಾರಾಗಿದ್ದಾರೆ.[ಹೆಣ ಹೂಳುವವರೇ ಕೇಳಿರಿ, ಮೈಸೂರಲ್ಲಿ ಕಟ್ಟಂಗಿಲ್ಲ ಗೋರಿ!]

Heavy rain in Mysuru creates trouble in the district

ಕಾರಿನ ಮೇಲೆ ಮುರಿದು ಬಿದ್ದ ಮರ, ಕಾರು ಜಖಂ
ಭಾರೀ ಗಾಳಿಗೆ ನಗರದ ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿ ಬಳಿ ನಿಲ್ಲಿಸಲಾದ ಕಾರೊಂದರ ಮೇಲೆ ಮರವೊಂದು ಬಿದ್ದ ಪರಿಣಾಮ ಕಾರು ಜಖಂಗೊಂಡಿದೆ. ಈಗಾಗಲೇ ಮಳೆಯ ಆರಂಭದ ದಿನದಿಂದ ಇಲ್ಲಿಯವರೆಗೆ ನಗರದಾದ್ಯಂತ ಸುಮಾರು 50ಕ್ಕೂ ಅಧಿಕ ಮರಗಳು ಉರುಳಿ ಬಿದ್ದಿದ್ದು, 30ಕ್ಕೂ ಅಧಿಕ ವಾಹನಗಳು ಜಖಂಗೊಂಡಿವೆ. ಸುಮಾರು 15ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಶುಕ್ರವಾರ ಬೆಳಿಗ್ಗೆಯೂ ಕೂಡಾ ಸುರಿದ ಭಾರೀ ಮಳೆಗೆ ಮರವೊಂದು ಉರುಳಿ ಬಿದ್ದು ಕಾರಿಗೆ ಹಾನಿಯಾಗಿದೆ. ಪ್ರಾಣಾಪಾಯವೇನೂ ಸಂಭವಿಸಿಲ್ಲ.[ಮೈಸೂರಿನಲ್ಲಿ ಹಣ್ಣುಗಳ ರಾಜನ ಕಾರುಬಾರು ಬಲು ಜೋರು]

Heavy rain in Mysuru creates trouble in the district

ವಿದ್ಯುತ್ ಕಂಬ ಧರೆಗೆ
ಮೈಸೂರು ಹುಣಸೂರು ಮುಖ್ಯರಸ್ತೆಯಲ್ಲಿ ಸೇಂಟ್ ಜೋಸೆಪ್ ಶಾಲೆಯ ವೃತ್ತದ ಬಳಿ ಶುಕ್ರವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಮರವೊಂದು ಉರುಳಿ ಬಿದ್ದ ಘಟನೆ ನಡೆದಿದೆ. ಮರವು ವಿದ್ಯುತ್ ಕಂಬ ಹಾಗೂ ತಂತಿಗಳ ಮೇಲೆ ಬಿದ್ದಿದ್ದು, ಭಾರೀ ಅನಾಹುತವೊಂದು ತಪ್ಪಿದೆ. ಇದನ್ನು ವೀಕ್ಷಿಸಿದವರು ತಕ್ಷಣ ಸಂಬಂಧಪಟ್ಟವರಿಗೆ ಮಾಹಿತಿ ರವಾನಿಸಿದ್ದು, ಆ ಸ್ಥಳದಲ್ಲಿ ವಿದ್ಯುತ್ ನ್ನು ಸ್ಥಗಿತಗೊಳಿಸಲಾಗಿತ್ತು.

ಅದೇ ಮಾರ್ಗವಾಗಿ ಹೆಚ್ಚಿನ ವಾಹನಗಳು ಓಡಾಟ ನಡೆಸುತ್ತಿದ್ದರಿಂದ ವಾಹನ ಸವಾರರಿಗೆ ಕೆಲ ಕಾಲ ತೊಂದರೆಯುಂಟಾಯಿತು. ಮರ ರಸ್ತೆಯಲ್ಲಿ ಬಿದ್ದಿರುವುದರಿಂದ ಸಂಚಾರ ಮಾರ್ಗವನ್ನು ಬದಲಾಯಿಸಲಾಯಿತು. ಪಾಲಿಕೆ ತಂಡಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ತೆರಳಿ ತೆರವು ಕಾರ್ಯಾಚರಣೆಯಲ್ಲಿ ತೊಡಗಿರುವುದು ಕಂಡು ಬಂತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Heavy rain in Mysuru creates trouble in the district yesterday
Please Wait while comments are loading...