ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಪಿಲೆಯ ರೌದ್ರತೆಗೆ ಮುಳುಗಿದ ಸುತ್ತೂರು ಸೇತುವೆ , ಸಂಪರ್ಕ ಕಡಿತ

By ಬಿ.ಎಂ.ಲವಕುಮಾರ್‌
|
Google Oneindia Kannada News

Recommended Video

ಸುತ್ತೂರು-ಮೈಸೂರು ಸಂಪರ್ಕ ಕಡಿತ | Oneindia kannada

ಮೈಸೂರು, ಆಗಸ್ಟ್ 11: ಕೇರಳದ ವೈನಾಡಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಕಾರಣ ಕಬಿನಿ ಜಲಾಶಯ ಭರ್ತಿಯಾಗಿ ಕಪಿಲಾ ನದಿಗೆ ಸುಮಾರು 80ಸಾವಿರ ಕ್ಯೂಸೆಕ್ ನೀರನ್ನು ಹರಿಯ ಬಿಡಲಾಗಿದೆ.

ಇದರ ಪರಿಣಾಮ ಹೆಚ್.ಡಿ.ಕೋಟೆ ತಾಲೂಕು ಸೇರಿದಂತೆ ನಂಜನಗೂಡಿನ ಬಹುಭಾಗ ಮುಳುಗಡೆಯಾಗಿದ್ದು ಸುತ್ತೂರು ಸೇತುವೆ ಮುಳುಗಡೆಯಾಗಿರುವ ಕಾರಣ ಸುತ್ತೂರು ಕ್ಷೇತ್ರಕ್ಕೆ ಸಂಪರ್ಕ ಕಡಿತಗೊಂಡಿದೆ.

ಪ್ರವಾಹ ಉಕ್ಕುತ್ತಿದ್ದರೆ ಪುಂಡರಿಗೆ ಸೆಲ್ಫಿ ಚಿಂತೆ! ಅವ್ರಿಗೆಂತ ಮರ್ಲ್ ಅಂಬ್ರ..!ಪ್ರವಾಹ ಉಕ್ಕುತ್ತಿದ್ದರೆ ಪುಂಡರಿಗೆ ಸೆಲ್ಫಿ ಚಿಂತೆ! ಅವ್ರಿಗೆಂತ ಮರ್ಲ್ ಅಂಬ್ರ..!

ಇದುವರೆಗೆ ಸೇತುವೆ ಮುಳುಗಡೆಯಾಗುವಷ್ಟರ ಮಟ್ಟಿಗೆ ನೀರು ಕಪಿಲ ನದಿಯಲ್ಲಿ ಹರಿದಿರಲಿಲ್ಲ. ಆದರೆ ಕಳೆದೊಂದು ತಿಂಗಳ ಹಿಂದೆ ನೀರು ತುಂಬಿ ಹರಿದಾಗ ಸೇತುವೆ ಮುಳುಗುವ ಭೀತಿ ಉಂಟಾಗಿತ್ತು. ಆದರೆ ಬಳಿಕ ಪ್ರವಾಹ ತಗ್ಗಿದ ಹಿನ್ನಲೆಯಲ್ಲಿ ಸೇತುವೆ ಮುಳುಗಡೆಯಾಗಿರಲಿಲ್ಲ.

80 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

80 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಆದರೆ ಶುಕ್ರವಾರ ಕಬಿನಿ ಜಲಾಶಯದಿಂದ ಸುಮಾರು 80ಸಾವಿರ ಕ್ಯೂಸೆಕ್ ನೀರನ್ನು ಬಿಟ್ಟ ಪರಿಣಾಮ ಅಪಾರ ಪ್ರಮಾಣದ ನೀರು ಹರಿದು ಬಂದು ಸೇತುವೆ ಮುಳುಗಡೆಯಾಗಿದೆ. ಇದರಿಂದ ಐತಿಹಾಸಿಕ ಸುತ್ತೂರು ಕ್ಷೇತ್ರ ಮತ್ತು ಮೈಸೂರು ನಡುವೆ ಸಂಪರ್ಕ ಕಡಿತಗೊಂಡಿದೆ.

ಕೇರಳದಲ್ಲಿ ವರುಣನ ರುದ್ರನರ್ತನ: ಮೃತರ ಸಂಖ್ಯೆ 29 ಕ್ಕೇರಿಕೆ ಕೇರಳದಲ್ಲಿ ವರುಣನ ರುದ್ರನರ್ತನ: ಮೃತರ ಸಂಖ್ಯೆ 29 ಕ್ಕೇರಿಕೆ

ಕೋಟ್ಯಂತರ ಬೆಳೆ ನಷ್ಟ

ಕೋಟ್ಯಂತರ ಬೆಳೆ ನಷ್ಟ

ಇನ್ನು ಹಲವು ಜಮೀನುಗಳಿಗೆ ನೀರು ನುಗ್ಗಿದ್ದು ಕೋಟ್ಯಂತರ ರೂ. ಬೆಳೆ ನಷ್ಟ ಸಂಭವಿಸಿದೆ. ಕೇರಳದಲ್ಲಿ ಮಳೆ ಕಡಿಮೆಯಾಗಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾದರೆ ಮಾತ್ರ ಪ್ರವಾಹ ತಗ್ಗುತ್ತದೆ. ಇದೇ ರೀತಿ ಮುಂದುವರೆದರೆ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಹೆಚ್ಚಿದೆ.

ದ.ಕನ್ನಡ ಭಾರಿ ಮಳೆ: ಆಗಸ್ಟ್‌ 11ರಂದು ಶಾಲಾ-ಕಾಲೇಜು ರಜೆ ದ.ಕನ್ನಡ ಭಾರಿ ಮಳೆ: ಆಗಸ್ಟ್‌ 11ರಂದು ಶಾಲಾ-ಕಾಲೇಜು ರಜೆ

ನಾಟಿ ಮಾಡಿದ್ದ ಭತ್ತ ನೀರು ಪಾಲು

ನಾಟಿ ಮಾಡಿದ್ದ ಭತ್ತ ನೀರು ಪಾಲು

ಸುತ್ತೂರು ವ್ಯಾಪ್ತಿಯಲ್ಲಿ ಜನ ಹೆಚ್ಚಾಗಿ ಭತ್ತದ ಕೃಷಿಯನ್ನೇ ನಂಬಿದ್ದು ವಿಶಾಲ ಭತ್ತದ ಬಯಲುಗಳಿವೆ. ಈಗಾಗಲೇ ಪೈರು ಹಾಕಿ ನಾಟಿಗೆ ಬಂದಿದ್ದರೆ ಕೆಲವೆಡೆ ರೈತರು ನಾಟಿಯನ್ನು ಆರಂಭಿಸಿದ್ದರು. ಆದರೆ ಅದು ನೀರು ಪಾಲಾಗಿದ್ದು, ರೈತರು ಕೈಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರವಾಹ ಇನ್ನಷ್ಟು ಹೆಚ್ಚಾಗುವ ಭೀತಿ

ಪ್ರವಾಹ ಇನ್ನಷ್ಟು ಹೆಚ್ಚಾಗುವ ಭೀತಿ

ಈಗಾಗಲೇ ಪ್ರವಾಹದಿಂದಾಗಿ ಸೇತುವೆ ಮುಳುಗಿದ್ದು ಪ್ರವಾಹ ಇನ್ನೂ ಹೆಚ್ಚಾಗುವ ಭೀತಿ ವ್ಯಕ್ತಪಡಿಸಲಾಗಿದೆ. ಕೇರಳದಲ್ಲಿ ಮಳೆ ಬಿಡುವು ಕೊಡುವ ಮುನ್ಸೂಚನೆ ತೋರುತ್ತಿಲ್ಲ ಹಾಗಾಗಿ ನೀರಿನ ಹರಿವು ಇನ್ನೂ ಹೆಚ್ಚಾಗಲಿದೆ. ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸದ್ಯಕ್ಕೆ ಪ್ರವಾಹ ಇಳಿದರೆ ಸಾಕಪ್ಪಾ ಎಂದು ದೇವರಲ್ಲಿ ಪ್ರಾರ್ಥಿಸುವಂತಾಗಿದೆ.

English summary
Due to heavy flood and rain Suthoor brige sinked. famous Suthoor Mutt lost contact with Mysuru city due to sinking of suthoor bridge. This is first time in many years suthoor bridge was sinked due to rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X