ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ವಿಕ್ರಂ ಆಸ್ಪತ್ರೆಗೆ ಬೀಳಲಿದೆಯೇ ಬೀಗಮುದ್ರೆ?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 15 : ನಗರದ ಯಾದವಗಿರಿಯಲ್ಲಿರುವ ಪ್ರತಿಷ್ಠಿತ ವಿಕ್ರಂ ಆಸ್ಪತ್ರೆಗೆ ಬೀಗ ಜಡಿಯುವ ಎಚ್ಚರಿಕೆ ಸಂದೇಶವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರವಾನಿಸಿದೆ. ಆಸ್ಪತ್ರೆಯ ಅವ್ಯವಹಾರ ಹಾಗೂ ಅವ್ಯವಸ್ಥೆ ಬಗ್ಗೆ ದೂರು ಬಂದಿದ್ದ ಹಿನ್ನೆಲೆ ಇಲಾಖೆ ಷೋಕಾಸ್ ನೋಟಿಸ್ ನೀಡಿದೆ.

ಆರೋಗ್ಯ ಇಲಾಖೆ ಆಸ್ಪತ್ರೆಯ ಆಡಳಿತಾಧಿಕಾರಿಗೆ ನೋಟಿಸ್ ನೀಡಿದ್ದು, ನೋಂದಣಿ ರದ್ದುಪಡಿಸುವ ಎಚ್ಚರಿಕೆ ನೀಡಿದೆ. ನೋಟಿಸ್ ನಲ್ಲಿ ಈಗಾಗಲೇ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಪತ್ರ ದೊರೆತ 15 ದಿನಗಳೊಳಗೆ ಬೇರೆಡೆ ಸ್ಥಳಾಂತರಿಸುವಂತೆ ಸೂಚಿಸಲಾಗಿದೆ. ಡಿ. 02 ರಂದು ಆಸ್ಪತ್ರೆಗೆ ಷೋಕಾಸ್ ನೀಡಿರುವ ಹಿನ್ನೆಲೆ ಡಿ.17 ರಂದು ವಿಕ್ರಂ ಆಸ್ಪತ್ರೆ ನೊಂದಣಿ ರದ್ದಾಗಲಿದೆ.[ಬೆಂಗಳೂರಿನ ಅಪೋಲೊ ಆಸ್ಪತ್ರೆ ಸರ್ಕಾರದ ವಶಕ್ಕೆ]

Health department sent the show cause notice for mysore vikram hospital

ಏನಿದು ಪ್ರಕರಣ :
ನಗರದ ನಿವಾಸಿ ರವೀಂದ್ರ ಎಂಬುವವರು ವಿಕ್ರಂ ಆಸ್ಪತ್ರೆಯ ಅವ್ಯವಸ್ಥೆ ಹಾಗೂ ಹಣ ಸುಲಿಗೆಯ ಬಗ್ಗೆ ದೂರು ದಾಖಲಿಸಿದ್ದರು. ಕಾನೂನು ಹೋರಾಟ ಆರಂಭಿಸಿದ್ದರು. ಮೂರು ವರ್ಷಗಳ ಈ ಸತತ ಹೋರಾಟದ ಫಲವಾಗಿ ಇದೀಗ ವಿಕ್ರಂ ಆಸ್ಪತ್ರೆಯ ನೊಂದಣಿ ರದ್ದಾಗುವ ಸ್ಥಿತಿ ನಿರ್ಮಾಣವಾಗಿದೆ.

Health department sent the show cause notice for mysore vikram hospital

ಯಾಕೆ ಹೋರಾಟ :
ಮೂಲತಃ ಕೊಳ್ಳೇಗಾಲದ ರವೀಂದ್ರ ಮೈಸೂರಿನಲ್ಲಿ ವಾಸವಿದ್ದರು. ಕೆಲ ವರ್ಷಗಳ ಹಿಂದೆ ತಂದೆ ಮಹಾದೇವಯ್ಯ ಅನಾರೋಗ್ಯದ ಕಾರಣ ವಿಕ್ರಂ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆಗಾಗಿ ಲಕ್ಷಾಂತರ ಹಣ ವ್ಯವಯಿಸಿದರು. ಆದರೂ ಚಿಕಿತ್ಸೆ ಫಲಕಾರಿಯಾಗದೆ ತಂದೆ ಮೃತಪಟ್ಟಿದ್ದರು.[ಸಾವಿನ ಮನೆಯಾಗುತ್ತಿದೆಯಾ ಮೈಸೂರಿನ ಕೆ.ಆರ್ ಆಸ್ಪತ್ರೆ?]

Health department sent the show cause notice for mysore vikram hospital

ಈ ಘಟನೆ ಬಳಿಕ ರವೀಂದ್ರ ಆಸ್ಪತ್ರೆಯ ನಿರ್ಲಕ್ಷ ಹಾಗೂ ಬೇಜಾವ್ದಾರಿಯಿಂದಲೇ ನನ್ನ ತಂದೆ ಪ್ರಾಣ ಕಳೆದುಕೊಳ್ಳುವಂತಾಯಿತು ಎಂದು ಆರೋಪಿಸಿ ಆಸ್ಪತ್ರೆ ವಿರುದ್ಧ ಹೋರಾಟಕ್ಕೆ ನಿಂತರು. ವೈಧ್ಯಕೀಯ ಇಲಾಖೆಯ ವಿವಿಧ ವಿಭಾಗಗಳ ಅಧಿಕಾರಿಗಳಿಗೆ ವಿಕ್ರಂ ಆಸ್ಪತ್ರೆಯ ಅವ್ಯವಸ್ಥೆ ಹಾಗೂ ಅವ್ಯವಹಾರದ ಬಗ್ಗೆ ದೂರು ದಾಖಲಿಸುವ ಮೂಲಕ ಹೋರಾಟ ಪ್ರಾರಂಭಿಸಿದರು.[1.25ಲಕ್ಷ ಸಂಬಳಕ್ಕೂ ವಿಶೇಷ ವೈದ್ಯರು ಸೇವೆಗೆ ಸಿಗುತ್ತಿಲ್ಲ]

Health department sent the show cause notice for mysore vikram hospital

ಈ ಸಂಬಂಧ ಒನ್ ಇಂಡಿಯಾದೊಂದಿಗೆ ಮಾತನಾಡಿದ ರವೀಂದ್ರ, ಕರ್ನಾಟಕ ಪ್ರೈವೆಟ್ ಮೆಡಿಕಲ್ ಕಾಯ್ದೆಯನ್ವಯ ನೋಂದಣಿಯಾಗಿರುವ ವಿಕ್ರಂ ಆಸ್ಪತ್ರೆ, ಕಾಯ್ದೆ ನಿಯಮ ಪಾಲಿಸುವಲ್ಲಿ ವಿಫಲವಾಗಿದೆ. ಅಕ್ರಮವಾಗಿ ರೋಗಿಗಳಿಂದ ಹಣ ವಸೂಲಿ ಮಾಡುವ ಮೂಲಕ ಸುಲಿಗೆ ಮಾಡುತ್ತಿದೆ ಎಂಬುದು ತಿಳಿದದ್ಸು ನಮ್ಮ ತಂದೆ ಆಸ್ಪತ್ರೆಗೆ ಸೇರಿಸಿದ ನಂತರ ಹೀಗಾಗಿ ಹೋರಾಟ ಅನಿವಾರ್ಯ ವಾಯಿತು. ಇದೀಗ ಆಸ್ಪತ್ರೆಗೆ ಬೀಗ ಮುದ್ರೆ ಬೀಳುಸ ಸಾಧ್ಯತೆಯಿದ್ದು ನೊಂದವರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದರು.

Health department sent the show cause notice for mysore vikram hospital
English summary
Department of Health and Family Welfare has given the notice of warning to Vikram hostpital in yadavagiri to be locked to the hospital. Who came to the hospital complaining of irregularities in the background of the show cause notice to the chaos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X