ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಆರ್ ಎಸ್, ಹಾರಂಗಿ, ಕಬಿನಿ ಜಲಾಶಯಗಳಿಗೆ ಬಾಗಿನ ಅರ್ಪಿಸಲಿರುವ ಸಿಎಂ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 18 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜು.19 ಮತ್ತು 20ರಂದು ಮೈಸೂರು, ಕೊಡಗು, ಮಂಡ್ಯ ಜಿಲ್ಲೆಗಳ ಪ್ರವಾಸ ಕೈಗೊಳ್ಳಲಿದ್ದು, ಭರ್ತಿಯಾಗಿರುವ ಕೆಆರ್ ಎಸ್, ಹಾರಂಗಿ, ಕಬಿನಿ ಜಲಾಶಯಗಳಿಗೆ ಬಾಗಿನ ಅರ್ಪಿಸಲಿದ್ದಾರೆ.

ಜು.19ರಂದು ಮಧ್ಯಾಹ್ನ ಹಾರಂಗಿ ಜಲಾಶಯಕ್ಕೆ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಲಿದ್ದಾರೆ. ನಂತರ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊಡಗು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಅಂದು ಮಡಿಕೇರಿಯಲ್ಲೇ ವಾಸ್ತವ್ಯ ಹೂಡಿ, ಜುಲೈ.20ರ ಮುಂಜಾನೆ ಭಾಗಮಂಡಲದಲ್ಲಿ ಭಂಗಡೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ಕಾವೇರಿಯ ಉಗಮಸ್ಥಾನ ತಲಕಾವೇರಿಯಲ್ಲಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಮೈಸೂರಿಗೆ ಆಗಮಿಸುವರು.

HD Kumaraswamy will dedicate Bagina to KRS, Harangi and Kabini

ತುಂಬೈತೆ ಕೆಆರ್ ಎಸ್: ರುದ್ರರಮಣೀಯ ವಿಡಿಯೋ ಐತೆ ನೋಡಿ!ತುಂಬೈತೆ ಕೆಆರ್ ಎಸ್: ರುದ್ರರಮಣೀಯ ವಿಡಿಯೋ ಐತೆ ನೋಡಿ!

ಆ ನಂತರ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವರು. ಮಧ್ಯಾಹ್ನ ಕಬಿನಿ ಜಲಾಶಯಕ್ಕೆ, ನಂತರ ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸುವರು. ಸಂಜೆ ಮಂಡ್ಯ ಜಿಲ್ಲಾ ಜಾ.ದಳ ವತಿಯಿಂದ ಆಯೋಜಿಸಿರುವ ಕೃತಜ್ಞತಾ ಸಮಾವೇಶದಲ್ಲಿ ಪಾಲ್ಗೊಂಡು ಬಳಿಕ ಬೆಂಗಳೂರಿಗೆ ಮರಳುವರು ಎಂದು ಉನ್ನತ ಮೂಲಗಳು ತಿಳಿಸಿವೆ.

English summary
Chief Minister HD Kumaraswamy will be touring Mysore, Kodagu and Mandya districts on July 19th and will dedicate Bagina to KRS, Harangi and Kabini reservoirs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X