'ಹಣಬಲದಿಂದ ಸಿದ್ದರಾಮಯ್ಯ ಗೆಲುವು ಪಡೆಯುವುದು ಸಾಧ್ಯವಿಲ್ಲ'

Posted By: Gururaj
Subscribe to Oneindia Kannada
   ಸಿದ್ದರಾಮಯ್ಯನವರನ್ನ ತರಾಟೆಗೆ ತೆಗೆದುಕೊಂಡ ಎಚ್ ಡಿ ಕುಮಾರಸ್ವಾಮಿ | Oneindia Kannada

   ಮೈಸೂರು, ನವೆಂಬರ್ 20 : 'ಹಣ ಬಲದಿಂದ ಗೆಲುವು ಪಡೆಯಬಹುದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಂತ್ರ ಮುಂದಿನ ಚುನಾವಣೆಯಲ್ಲಿ ನಡೆಯುವುದಿಲ್ಲ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

   ಚಿತ್ರಗಳು : ಕುಮಾರಪರ್ವ ರಾಜ್ಯ ಪ್ರವಾಸ

   ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ 'ಕುಮಾರಪರ್ವ' ಸಮಾವೇಶ ನಡೆಯಿತು. ಸಮಾವೇಶ ಉದ್ದೇಶಿಸಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸೇರಿದಂತೆ ಹಲವು ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

   'ಸುವರ್ಣಸೌಧ ನಿರ್ಮಾಣದ ಉದ್ದೇಶ ಈಡೇರುತ್ತಿಲ್ಲ'

   ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು, 'ತಮಿಳುನಾಡಿನಲ್ಲಿ ಅಂದು ಅಣ್ಣಾದೊರೈ ಕಾಂಗ್ರೆಸ್ ಪಕ್ಷ ತೆಗೆಯಲು ಮಾಡಿದ ಪ್ರತಿಜ್ಞೆಯಿಂದಾಗಿ ಇದುವರೆಗೂ ಅಲ್ಲಿ ಕಾಂಗ್ರೆಸ್ ಪಕ್ಷ ತಲೆ ಎತ್ತಲಾಗಿಲ್ಲ. ಅಂತಹ ಒಂದು ಪ್ರಾದೇಶಿಕ ಪಕ್ಷ ರಾಜ್ಯಕ್ಕೆ ಬೇಕು' ಎಂದರು.

   ಚಾಮುಂಡಿ ಸನ್ನಿಧಿಯಲ್ಲಿ 'ಕುಮಾರಪರ್ವ'ಕ್ಕೆ ಮುನ್ನುಡಿ ಬರೆದ ಜೆಡಿಎಸ್

   ಸಮಾವೇಶದಲ್ಲಿಯೇ 2018ರ ವಿಧಾನಸಭೆ ಚುನಾವಣೆಗೆ ಚಾಮರಾಜ ಕ್ಷೇತ್ರದ ಅಭ್ಯರ್ಥಿ ಪ್ರೊ.ಕೆ.ಎಸ್.ರಂಗಪ್ಪ ಎಂದು ಎಚ್.ವಿಶ್ವನಾಥ್ ಘೋಷಣೆ ಮಾಡಿದರು. ನಂತರ ಕುಮಾರಸ್ವಾಮಿ ಅವರು ಇದನ್ನು ಅನುಮೋದನೆ ಮಾಡಿದರು.

   'ದುರಂಹಕಾರದಿಂದ ಮೆರೆಯುತ್ತಿದ್ದಾರೆ'

   'ದುರಂಹಕಾರದಿಂದ ಮೆರೆಯುತ್ತಿದ್ದಾರೆ'

   'ದುಡ್ಡಿನ ಮದದಿಂದ ಸಿದ್ದರಾಮಯ್ಯ ಮೆರೆಯುತ್ತಿದ್ದಾರೆ. ಅವರ ದುರಂಹಕಾರಕ್ಕೆ ಕುಮಾರಪರ್ವ ಸಮಾವೇಶಗಳೇ ಉತ್ತರ ನೀಡಿವೆ. ಜಿ.ಟಿ.ದೇವೇಗೌಡ ಅವರನ್ನು ಅಷ್ಟು ಸುಲಭವಾಗಿ ಮನೆಗೆ ಕಳುಹಿಸಲು ಸಾಧ್ಯವಿಲ್ಲ' ಎಂದು ಕುಮಾರಸ್ವಾಮಿ ಹೇಳಿದರು.

   'ಅಹಿಂದ ಶಬ್ದದ ಅರ್ಥವೇ ಗೊತ್ತಿಲ್ಲ'

   'ಅಹಿಂದ ಶಬ್ದದ ಅರ್ಥವೇ ಗೊತ್ತಿಲ್ಲ'

   ಸಮಾವೇಶದಲ್ಲಿ ಮಾತನಾಡಿದ ಎಚ್.ಡಿ.ದೇವೇಗೌಡರು, 'ನನಗೆ ಅಹಿಂದ ಶಬ್ದದ ಅರ್ಥವೇ ಗೊತ್ತಿಲ್ಲ. ಆದರೆ, ನನ್ನ ಸಂಪುಟದಲ್ಲಿ 7 ಜನ ಹಿಂದುಳಿದವರು. 8 ಜನ ಲಿಂಗಾಯತರು ಸಚಿವರಾಗಿದ್ದರು. ಕೊನೆಗೆ ಒಕ್ಕಲಿಗರಿಗೆ ಮಾತ್ರ ಮಣೆ ಹಾಕಿದ ದೇವೇಗೌಡ ಎಂಬ ಮಾತು ನನಗೆ ಅಂಟಿಸಲಾಯಿತು' ಎಂದು ಬೇಸರ ವ್ಯಕ್ತಪಡಿಸಿದರು.

   ಸವಾಲು ಹಾಕಿದ ಜಿ.ಟಿ.ದೇವೇಗೌಡ

   ಸವಾಲು ಹಾಕಿದ ಜಿ.ಟಿ.ದೇವೇಗೌಡ

   'ಮೊದಲು ಶಾಸಕ ಹೇಗಾದೆ ಎಂದು ಪುಸ್ತಕ ಬರೆಯಿರಿ. ಆಗ ಸೂಟು ಬೂಟು ಇತ್ತಾ?, ಹರಕಲು ಚಾಪೆ ಮೇಲೆ ಸಿದ್ದರಾಮಯ್ಯ ಮಲಗುತ್ತಿದ್ದರು. ಕೆಂಪೀರಯ್ಯ ಬೆಂಬಲ ನೀಡದಿದ್ದರೆ ಏನಾಗುತ್ತಿತ್ತು?' ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸಿದ್ದರಾಮಯ್ಯಗೆ ಸವಾಲು ಹಾಕಿದರು.

   ರಮೇಶ್ ಕುಮಾರ್‌ಗೆ ತರಾಟೆ

   ರಮೇಶ್ ಕುಮಾರ್‌ಗೆ ತರಾಟೆ

   ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ, 'ಆರೋಗ್ಯ ಸಚಿವ ರಮೇಶ್ ಕುಮಾರ್ ಅವರಿಗೆ ಸರ್ಕಾರಿ ಆಸ್ಪತ್ರೆಗೆ ವೈದ್ಯರನ್ನು ನೇಮಕ ಮಾಡುವ ಯೋಗ್ಯತೆ ಇಲ್ಲ' ಎಂದು ವಾಗ್ದಾಳಿ ನಡೆಸಿದರು.

   ಚಾಮರಾಜ ಕ್ಷೇತ್ರದಲ್ಲಿ ರೋಡ್ ಶೋ

   ಚಾಮರಾಜ ಕ್ಷೇತ್ರದಲ್ಲಿ ರೋಡ್ ಶೋ

   ಸಮಾವೇಶಕ್ಕೂ ಮೊದಲು ಎಚ್.ಡಿ.ಕುಮಾರಸ್ವಾಮಿ ಅವರು 'ಕರ್ನಾಟಕ ವಿಕಾಸ ವಾಹಿನಿ' ಬಸ್ ಮೂಲಕ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   JDS state president H.D.Kumaraswamy on November 19, 2017 addressed Kumara Parva yatra in Chamaraja assembly constituency Mysuru. Party also announced Prof K.S.Rangappa as assembly elections 2018 candidate.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ