ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತ: ಮೂವರ ದುರ್ಮರಣ

Posted By:
Subscribe to Oneindia Kannada

ಮೈಸೂರು, ಜನವರಿ 31: ಟ್ಯಾಂಕರ್ ಮತ್ತು ದ್ವಿಚಕ್ರವಾಹನ ಮುಖಾಮುಖಿ ಡಿಕ್ಕಿಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತರಾದ ಘಟನೆ ಎಚ್.ಡಿ.ಕೋಟೆ ಬಳಿ ಹುಣಸೂರು ರಸ್ತೆಯ ಬೋಚಿಕಟ್ಟೆ ಬಳಿ ಜರುಗಿದೆ.

ಶ್ರೀನಿವಾಸ್(35), ಉಮಾ(30), ಚೈತ್ರ(9) ಮೃತ ದುರ್ದೈವಿಗಳು. ಎಚ್.ಡಿ.ಕೋಟೆ ತಾಲೂಕಿನ ನಂಜನಾಯಕನಹಳ್ಳಿಯ ಈ ದಂಪತಿಗಳು ಮತ್ತು ಮಗು ಊರಿಗೆ ಹೋಗಲೆಂದು ಹುಣಸೂರು ರಸ್ತೆಯ ಬೋಚಿಕಟ್ಟೆ ರಸ್ತೆಯಲ್ಲಿ ತಮ್ಮ ದ್ವಿಚಕ್ರವಾಹನದಲ್ಲಿ ಬರುತ್ತಿದ್ದಾಗ ಎದುರಿನಿಂದ ಬಂದ ಟ್ಯಾಂಕರ್ ಪರಸ್ಪರ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಬೈಕಿನಲ್ಲಿದ್ದ ಕುಟುಂಬ ಸ್ಥಳದಲ್ಲಿಯೇ ಮೃತವಾಗಿದೆ.[ಕೋಲಾರದಲ್ಲಿ ಕಾರು-ಬೈಕ್ ಡಿಕ್ಕಿ: ಮೂವರ ದುರ್ಮರಣ]

HD Kote near Tanker-Bike collision three died

ಇನ್ನು ಟ್ಯಾಂಕರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಅಲ್ಲದೆ ಎಚ್.ಡಿ.ಕೋಟೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಶವಗಳನ್ನು ಎಚ್ ಡಿ ಕೋಟೆ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಪರಿವಾರಕ್ಕೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
HD kote near Tanker-Bike collision three died. Traveling by bike 3 person family were died in Mysuru.
Please Wait while comments are loading...