ರಾತ್ರೋರಾತ್ರಿ ಹುಣಸೂರಿನ ಹನುಮಮೂರ್ತಿ ಸ್ಥಳಾಂತರವಾಗಿದ್ದೇಕೆ ?

Posted By:
Subscribe to Oneindia Kannada

ಮೈಸೂರು, ಡಿಸೆಂಬರ್ 4: ಹನುಮ ಜಯಂತಿ ಆಚರಣೆ ವೇಳೆ ಹುಣಸೂರಿನಲ್ಲಿ ನಿನ್ನೆ(ಡಿ.04) ನಡೆದ ಘರ್ಷಣೆ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಮುನೇಶ್ವರ ಕಾವಲ್ ಮೈದಾನದಲ್ಲಿ ಇರಿಸಲಾಗಿದ್ದ ಹನುಮನ ಮೂರ್ತಿಯನ್ನ ತೆರವುಗೊಳಿಸಲಾಗಿದೆ.

ಪ್ರತಾಪ್ ಸಿಂಹ ವರ್ತನೆ ಬಗ್ಗೆ ಸಿದ್ದರಾಮಯ್ಯ ನುಡಿಮುತ್ತುಗಳು!

ಬ್ರಾಹ್ಮಣ ಬೀದಿಯಲ್ಲಿರುವ ರಂಗನಾಥ ದೇವಾಲಯಕ್ಕೆ ಹನುಮನ ಬೃಹತ್ ಮೂರ್ತಿಯನ್ನ ಸ್ಥಳಾಂತರ ಮಾಡಲಾಗಿದೆ. ಹನುಮ ಮೂರ್ತಿ ಮುಟ್ಟಿದ್ರೆ ಪರಿಸ್ಥಿತಿ ಸರಿ ಇರಲ್ಲ ಎಂಬ ಪ್ರತಾಪ್ ಸಿಂಹ ಎಚ್ಚರಿಕೆ ನಡುವೆಯೂ ಮೂರ್ತಿ ತೆರವುಗೊಳಿಸಲಾಗಿದೆ. ಹನುಮನ ಬೃಹತ್ ಮೂರ್ತಿಯನ್ನು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಟ್ರ್ಯಾಕ್ಟರ್ ಗಳ ಮೂಲಕ ಸ್ಥಳಾಂತರ ಮಾಡಲಾಗಿದೆ.

Hanuma Jayanti dispute in Mysuru: Hanuman statue shifted

ನಿನ್ನೆ ನಡೆದ ಘರ್ಷಣೆಯ ಕಾರಣ ಹುಣಸೂರು ಪಟ್ಟಣದಲ್ಲಿ ಇಂದು ಬಂದ್ ಗೆ ಕರೆ ನೀಡಲಾಗಿತ್ತು. ಬಿಜೆಪಿಯ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಹುಣಸೂರಿಗೆ ಭೇಟಿ ನೀಡಿ ಬಂದ್ ಗೆ ಕರೆ ನೀಡಿದ್ದರು. ತದನಂತರದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಕಾರಣ ನೀಡಿರುವ ಬಿಜೆಪಿ, ಬಂದ್‍ ಕರೆಯನ್ನು ವಾಪಸ್ ಪಡೆದಿದೆ.

ಖಡಕ್ ಅಧಿಕಾರಿಗಳೆಂಬ ಸೋಗು ಬಿಡಿ: ಚನ್ನಣ್ಣನವರ್ ಗೆ ಸಿಂಹ ಟಾಂಗ್

Hanuma Jayanti dispute in Mysuru: Hanuman statue shifted

ಆದರೆ ನಿನ್ನೆ ಬಂದ್ ಗೆ ಕರೆ ನೀಡಿದ್ದರಿಂದ ಬೆಳಗ್ಗೆಯಿಂದಲೇ ಹುಣಸೂರು ಪಟ್ಟಣದ ಬೀದಿಗಳು ಬಿಕೋ ಎನ್ನುತ್ತಿದ್ದು, ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಸರ್ಕಾರಿ ಬಸ್ ಗಳು ರಸ್ತೆಗೆ ಇಳಿದಿರಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಹುಣಸೂರಿನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಏನೇ ಆದರೂ ಬಂದ್‍ ಕರೆಯಿಂದ ಸಾಮಾನ್ಯ ಜನಜೀವನಕ್ಕೆ ಧಕ್ಕೆಯಾಗಿದ್ದು ಕಂಡುಬಂತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After some controversies took place in Hunsuru regarding Hanuma Jayanthi, the statue of Lord Hanuman has shifted to somewhere else.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ