ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ರಿಣ್ –ಟ್ರಿಣ್ : ಇನ್ಮುಂದೆ ಪ್ರತಿನಿತ್ಯ 30 ನಿಮಿಷ ಫ್ರೀ ರೈಡ್

By Yashaswini
|
Google Oneindia Kannada News

ಮೈಸೂರು, ಜನವರಿ 30 : ಈಗಾಗಲೇ ಎಲ್ಲೆಡೆ ಮನೆಮಾತಾಗಿರುವ ಟ್ರಿಣ್ ಟ್ರಿಣ್ ಸೈಕಲ್ ಯೋಜನೆ ಮೈಸೂರಿಗರಿಗೆ ಮತ್ತಷ್ಟು ಅಗ್ಗವಾಗಲಿದೆ. ಟ್ರಿಣ್ ಟ್ರಿಣ್ ಬಳಕೆ ಹೆಚ್ಚಿಸಲು ಜಿಲ್ಲಾಡಳಿತ ಮುಂದಾಗಿದ್ದು, ಇನ್ಮುಂದೆ ಟ್ರಿಣ್ ಟ್ರಿಣ್ ಬಳಕೆಗೆ ಅರ್ಧಗಂಟೆ ಉಚಿತವಾಗಲಿದೆ. ಅರ್ಧಗಂಟೆ ಬಳಿಕ ಸೈಕಲ್ ಡಾಕ್ ಲೆಸ್ ಸೆಂಟರ್ ಗೆ ಹಾಕಿ ಮತ್ತೆ ಬಳಕೆ ಮಾಡಬಹುದು.

ಟ್ರಿಣ್ ಟ್ರಿಣ್ ಬೈಸಿಕಲ್ ಬಳಕೆ ಹೆಚ್ಚಿಸಿಲು ಈ ವಿನೂತನ ಯೋಜನೆ ಜಾರಿ ಮಾಡಲಾಗಿದೆ,
ಜಿಲ್ಲಾಡಳಿತ ಹಾಗೂ ಪಾಲಿಕೆಯು 'ಟ್ರಿಣ್ ಟ್ರಿಣ್' ಬೈಸಿಕಲ್‌ ಬಳಕೆದಾರರು ಮೊದಲ 30 ನಿಮಿಷ ಬಳಕೆಗೆ ನೀಡಬೇಕಿದ್ದ 5 ರೂ. ದರವನ್ನು ರದ್ದುಗೊಳಿಸಿ ಉಚಿತವಾಗಿ ಸೈಕಲ್‌ ಬಳಕೆಗೆ ಅವಕಾಶ ಮಾಡಿಕೊಟ್ಟಿದೆ. ಅಲ್ಲದೆ, ತಿಂಗಳು, ಆರು ತಿಂಗಳು ಹಾಗೂ ವರ್ಷದ ಯೋಜನೆಗಳನ್ನು ನೂತನವಾಗಿ ನೀಡಿದೆ.

ಮೈಸೂರಿನ ಟ್ರಿಣ್ ಟ್ರಿಣ್ ಗೆ ಮತ್ತೊಂದು ಪ್ರಶಸ್ತಿಯ ಮುಕುಟಮೈಸೂರಿನ ಟ್ರಿಣ್ ಟ್ರಿಣ್ ಗೆ ಮತ್ತೊಂದು ಪ್ರಶಸ್ತಿಯ ಮುಕುಟ

ಏನಿದು ಹೊಸ ಪ್ಲಾನ್ ?
ಸೈಕಲ್‌ ಬಳಕೆಗೆ ಕಳೆದ ಡಿಸೆಂಬರ್‌ 1ರಿಂದ ಮೊದಲ 30 ನಿಮಿಷದ ಅವಧಿಗೆ 5 ರೂ. ದರ ನಿಗದಿಗೊಳಿಸಲಾಯಿತು. ಇದರಿಂದ ಬೈಸಿಕಲ್‌ ಬಳಕೆ ಮಾಡುವವರ ಸಂಖ್ಯೆ ಶೇ.50ರಷ್ಟು ಕುಸಿಯಿತು. ಬೆಲೆ ಏರಿಕೆಯಿಂದ ಯೋಜನೆಯ ನೈಜ ಉದ್ದೇಶಕ್ಕೆ ಧಕ್ಕೆಯಾಗಲಿದೆ ಎಂಬ ಕಾರಣಕ್ಕೆ ಜಿಲ್ಲಾಡಳಿತ ಹಾಗೂ ಪಾಲಿಕೆ ಫೆ.1ರಿಂದ ಮೊದಲ 30 ನಿಮಿಷಗಳ ವರೆಗೆ ಬೈಸಿಕಲ್‌ಅನ್ನು ಉಚಿತವಾಗಿ ಬಳಕೆ ಮಾಡಲು ಅವಕಾಶ ನೀಡಿದೆ.
ರಾತ್ರಿ ವೇಳೆಯಲ್ಲಿ ಸೈಕಲ್‌ ಬಳಕೆ ಮಾಡುವವರ ಅನುಕೂಲಕ್ಕಾಗಿ ರಾತ್ರಿ 8 ಗಂಟೆಯಿಂದ ರಾತ್ರಿ 10ರ ವರೆಗೆ ಸೇವೆ ವಿಸ್ತರಣೆ ಮಾಡಲಾಗಿದೆ. ಇದರಿಂದ ರಾತ್ರಿ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ತೆರಳುವವರಿಗೆ ಸೈಕಲ್‌ ಬಳಕೆ ಮಾಡಲು ಅನುಕೂಲವಾಗಿದೆ.

Half an hour free ride to Trin Trin bicycle users in Mysuru

ಇನ್ಮುಂದೆ ರಿಮೋಟ್ ಕಂಟ್ರೋಲ್ ಮೂಲಕ ಸೈಕಲ್ ಲಾಕ್
ನಗರದಲ್ಲಿ ಸದ್ಯ 52 ಸೈಕಲ್‌ ನಿಲ್ದಾಣಗಳಿದ್ದು, 500 ಬೈಸಿಕಲ್‌ ಅನ್ನು ಬಳಕೆ ಮಾಡಲಾಗುತ್ತಿದೆ. ಒಟ್ಟು 8250 ಮಂದಿ ಸೈಕಲ್‌ ಬಳಕೆಗೆ ಚಂದಾದಾರರಾಗಿದ್ದಾರೆ. ನಗರ ಪ್ರದೇಶಗಳಲ್ಲಿ ಮಾನವ ನಿರ್ಮಿತ ಡಾಕಿಂಗ್‌ ಸೆಂಟರ್‌ ನಿರ್ಮಿಸಲು ಹಣ ಖರ್ಚಾಗುತ್ತದೆ. ಮಾತ್ರವಲ್ಲದೆ ಅದಕ್ಕಾಗಿ ಸೂಕ್ತ ಸ್ಥಳಾವಕಾಶವೂ ಬೇಕಿದೆ. ಹಾಗಾಗಿ ಈ ಸಮಸ್ಯೆ ಬಗೆಹರಿಸಲು ಮುಂದಿನ ದಿನಗಳಲ್ಲಿ ಮೊಬೈಲ್‌ ಜಿಪಿಎಸ್ ಬಳಕೆ ಮಾಡಿಕೊಂಡು ಸೈಕಲ್‌ ಅನ್ನು ಲಾಕ್‌ ಮಾಡಬಹುದಾದ ವ್ಯವಸ್ಥೆ ಜಾರಿಗೊಳಿಸಲು ಅನುಮತಿಗಾಗಿ ಪ್ರಸ್ತಾವ ಸಲ್ಲಿಸಲಾಗಿದೆ.
ಈ ವ್ಯವಸ್ಥೆಗೆ ಅನುಮತಿ ದೊರೆತಲ್ಲಿ ನಿಲ್ದಾಣಕ್ಕಾಗಿ ಗುರುತಿಸಿದ ಸ್ಥಳಗಳಲ್ಲಿ ಬಳಕೆದಾರರು ಜಿಪಿಎಸ್ ಲಾಕ್‌ ಅನ್ನು ಬಳಕೆ ಮಾಡಿ ಸೈಕಲ್‌ ಅನ್ನು ಬಂದ್‌ ಮಾಡಿ ಹೋಗಬಹುದು. ಒಂದು ವೇಳೆ ಆ ಬೈಸಿಕಲ್‌ ಅನ್ನು ಯಾರೆ ಆ ಸ್ಥಳದಿಂದ ತೆಗೆದುಕೊಂಡು ಹೋದರೂ ಜಿಪಿಎಸ್ ಮೂಲಕ ಸೈಕಲ್‌ ಇರುವ ಸ್ಥಳ ಗೊತ್ತಾಗಲಿದೆ.
Half an hour free ride to Trin Trin bicycle users in Mysuru

ಬ್ಯಾಟರಿ ಸೈಕಲ್‌ ಬಳಕೆ
ಮುಂಬರುವ ದಿನಗಳಲ್ಲಿ 'ಟ್ರಿಣ್ ಟ್ರಿಣ್' ಯೋಜನೆಯಲ್ಲಿ ಬ್ಯಾಟರಿ ಸೈಕಲ್‌ಗಳನ್ನು ಬಳಕೆ ಮಾಡಲು ಆಲೋಚಿಸಲಾಗುತ್ತಿದೆ. ಇದರಿಂದ ಹಿರಿಯರು ಹಾಗೂ ಹೆಚ್ಚು ಬಲ ಪ್ರಯೋಗಿಸಿ ಪೆಡಲ್‌ ಮಾಡಲು ಸಾಧ್ಯವಾಗದವರು ಬ್ಯಾಟರಿ ಸೈಕಲ್‌ಗಳನ್ನು ಸರಾಗವಾಗಿ ಬಳಕೆ ಮಾಡಬಹುದಾಗಿದೆ.

ಟ್ರಿಣ್ ಟ್ರಿಣ್ ನೋಂದಣಿಗೆ ಕಾಲಾವಕಾಶ ವಿಸ್ತರಣೆ ಮಾಡಲಾಗಿದ್ದು, 30 ದಿನಕ್ಕೆ 60. ರೂ, 3 ತಿಂಗಳಿಗೆ 180, 6 ತಿಂಗಳಿಗೆ 300 ಒಂದು ವರ್ಷಕ್ಕೆ 600 ರೂ ಶುಲ್ಕ ನಿಗದಿ ಮಾಡಲಾಗಿದೆ. ನಗರದಲ್ಲಿ ಮಾಲಿನ್ಯ ನಿಯಂತ್ರಣ ಮಾಡಿ ಟ್ರಿಣ್ ಟ್ರಿಣ್ ಬಳಕೆ ಹಚ್ಚಿಸಲು ವಿನೂತನ ಯೋಜನೆ ಜಾರಿಗೆ ತರಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದ್ದಾರೆ.

English summary
Mysuru district administration has decided to provide half an hour free ride facility per day for Tri Trin bicycle users in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X