ಕೇಶವಿನ್ಯಾಸದಲ್ಲಿ ಎಕ್ಸ್‌ಪರ್ಟ್ ನಂಜನಗೂಡಿನ ತ್ರಿನೇತ್ರ!

By: ಬಿಎಂ ಲವಕುಮಾರ್, ಮೈಸೂರು
Subscribe to Oneindia Kannada

ಮೈಸೂರು, ಏಪ್ರಿಲ್ 13 : ಈಗ ಫ್ಯಾಷನ್ ಯುಗ.. ಇವತ್ತು ಮಾಡಿದ್ದು ನಾಳೆಗೆ ಹಳತಾಗುತ್ತದೆ. ಏನಾದರೊಂದು ಹೊಸತನ ಮಾಡದೆ ಹೋದರೆ ಔಟ್ ಡೇಟೆಡ್ ಆಗಿಬಿಡುತ್ತೇವೆ. ಟೈಲರ್ ಮತ್ತು ಕ್ಷೌರಿಕರಂತೂ ಹೊಸತನಕ್ಕೆ ಒಗ್ಗಿಕೊಳ್ಳದೆ ಹೋದರೆ ತಮ್ಮ ವೃತ್ತಿಯಲ್ಲಿ ಮುಂದುವರೆಯುವುದು ಅಸಾಧ್ಯ ಎಂಬ ಸ್ಥಿತಿಗೆ ಬಂದು ನಿಂತಿದೆ.

ಇನ್ನು ಸೆಲೆಬ್ರಿಟಿಗಳನ್ನು ಅನುಕರಿಸುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದಾಗಿ ಅವರು ಮಾಡಿದ್ದನ್ನೇ ಇವರು ಮಾಡುತ್ತಾರೆ. ತಾವು ತೊಡುವ ಬಟ್ಟೆಗಳದ್ದು ಒಂದು ರೀತಿಯದ್ದಾದರೆ, ಕಟಿಂಗ್ ಸ್ಟೈಲ್ ಅಂತೂ ದಿನದಿಂದ ದಿನಕ್ಕೆ ಬದಲಾಗುತ್ತಲೇ ಇರುತ್ತದೆ. ಅಮೀರ್ ಖಾನ್, ರಣವೀರ್, ವಿರಾಟ್ ಕೊಹ್ಲಿಗಳೇ ಇಂದಿನ ಯುವಕರಿಗೆ ರೋಲ್ ಮಾಡೆಲ್ಲುಗಳು. [ಎಡವಟ್ಟಾಯ್ತು ತಲೆಕೆಟ್ಟೋಯ್ತು, ಎಡವಟ್ ತಲೆಕಟ್!]

Hair style as per changing lifestyle for youth

ಕ್ರಿಕೆಟ್ ಆಟಗಾರರು, ಸಿನಿಮಾ ನಟರು ಯಾವ ರೀತಿಯ ಕೇಶವಿನ್ಯಾಸ ಮಾಡಿಸಿಕೊಳ್ಳುತ್ತಾರೋ ಅದೇ ರೀತಿ ನಮಗೂ ಮಾಡಿಕೊಡಿ ಎನ್ನುವವರು ಜಾಸ್ತಿಯಾಗಿರುವುದರಿಂದ ಅದರಂತೆ ವಿನ್ಯಾಸ ಮಾಡುವ ನೈಪುಣ್ಯತೆಯನ್ನು ಕೆಲವರು ಬೆಳೆಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ವಿಭಿನ್ನ ರೀತಿಯಲ್ಲಿ ಕಟಿಂಗ್ ಮಾಡಿ ಎಲ್ಲರನ್ನು ತಮ್ಮ ಸೆಲೂನ್‌ನತ್ತ ಸೆಳೆಯುತ್ತಿದ್ದಾರೆ.

ಶ್ರೀರಂಗಪಟ್ಟಣದ ಬಾಬುರಾಯಕೊಪ್ಪಲು ಗ್ರಾಮದಲ್ಲಿ ಅಂಜಲಿ ಮೆನ್ಸ್ ಬ್ಯೂಟಿ ಪಾರ್ಲರ್ ಎಂಬ ಸೆಲೂನ್ ತೆರೆದಿರುವ ತ್ರಿನೇತ್ರ ಎಂಬ ಯುವಕ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರಿಗೆ ಹೇಗೆ ಬೇಕೋ ಹಾಗೆ ವಿವಿಧ ನಮೂನೆಯ ಕಟಿಂಗ್ ಮಾಡುವ ಮೂಲಕ ಗಮನಸೆಳೆದಿದ್ದಾನೆ. [ವಿಚಿತ್ರಾನ್ನ ಸ್ಪೆಷಲ್ : ಹಜಾಮತ್‌ ಸೆ ಹಜಾಮತ್‌ ತಕ್‌]

ತಲೆಯ ಕೂದಲು, ಗಡ್ಡಗಳಲ್ಲಿ ತನ್ನ ಕೈಚಳಕ ತೋರಿಸುವ ಈತ ಕೂದಲಲ್ಲೇ ಲವ್ ಸಿಂಬಲ್, ಬಾತುಕೋಳಿ ಹೀಗೆ ಹಲವು ಬಗೆಯ ಚಿತ್ತಾರಗಳನ್ನು ಮೂಡಿಸಿ ಯುವಕರನ್ನು ಸೆಳೆಯುತ್ತಿದ್ದಾನೆ. ಈತನ ಕಟಿಂಗ್‌ಗೆ ಫಿದಾ ಆಗಿರುವ ಯುವಕರು, ವಿದ್ಯಾರ್ಥಿಗಳು ಸೆಲೂನ್‌ಗೆ ಮುಗಿ ಬೀಳುತ್ತಿದ್ದಾರೆ. ಸುಮಾರು 20 ರೀತಿಯ ಕಟಿಂಗ್ ಮಾಡುವುದರಲ್ಲಿ ಈತ ನಿಸ್ಸೀಮ. [ಅಮೇರಿಕಾದ ಸ್ವಾರಸ್ಯಗಳು - ಹೇರ್ ಕಟಿಂಗ್]

ಬೆಂಗಳೂರಿನಲ್ಲಿ ಕೆಲಸ ಕಲಿತು ಬಂದಿರುವ ತ್ರಿನೇತ್ರ ಅದರ ಪ್ರಯೋಗವನ್ನು ಮೊದಲಿಗೆ ತಮ್ಮೂರಿನಲ್ಲಿ ಮಾಡಿದಾಗ ಕೆಲವರು ವ್ಯಂಗ್ಯವಾಡಿದರು. ಆದರೆ ಸೆಲೆಬ್ರಿಟಿಗಳು ಅಂಥ ಕಟಿಂಗ್‌ನಲ್ಲಿ ಮಿಂಚುವುದನ್ನು ನೋಡಿದ ಹುಡುಗರು ನಮಗೂ ಅದೇ ರೀತಿ ಮಾಡಿಕೊಡುವಂತೆ ಸೆಲೂನ್‌ನತ್ತ ಬರತೊಡಗಿದರು. ಅವರ ಇಚ್ಛೆಯನುಸಾರ ಕಟಿಂಗ್ ಮಾಡುತ್ತಾ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದರಿಂದ ಈಗ ಯಶಸ್ವಿಯಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. [ಮೋದಿ ಹೇರ್ ಸ್ಟೈಲಿಗೂ 'ಕೈ'ಹಾಕಿದ ಕಾಂಗ್ರೆಸ್]

-
-
-
-
-
-
-
-
-
-
-
-
-
-
-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Trinetra owner of hair cutting saloon from Nanjangud, has become favourite among youths in the city. College students have been coming to him, emulating different hair styles by film stars, cricketers. Trinetra has learnt the trick in Bengaluru and experimenting in Nanjangud. ಕೇಶವಿನ್ಯಾಸದಲ್ಲಿ ಎಕ್ಸ್‌ಪರ್ಟ್ ನಂಜನಗೂಡಿನ ತ್ರಿನೇತ್ರ!
Please Wait while comments are loading...