ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್ 1 ಎನ್1: ಮೈಸೂರಿನಲ್ಲಿ 27 ಶಂಕಿತ ಪ್ರಕರಣಗಳು ಪತ್ತೆ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಫೆಬ್ರವರಿ 8 : ಮೈಸೂರಿನಲ್ಲಿ ಹೆಚ್1 ಎನ್1 ಸೋಂಕು ಪ್ರಕರಣ ಪತ್ತೆಯಾಗಿದ್ದು, ಈ ಬಗ್ಗೆ ಜಿಲ್ಲಾ ಸರ್ವೆಕ್ಷಣಾ ಘಟಕ ಪರಿವೀಕ್ಷಣಾ ವರದಿ ನೀಡಿದೆ. ಇದರಲ್ಲಿ 27 ಶಂಕಿತ ಪ್ರಕರಣಗಳು ಪತ್ತೆಯಾಗಿವೆ.

ಮೈಸೂರು ಜಿಲ್ಲೆಯಲ್ಲಿ 2016 ನೇ ಸಾಲಿನಲ್ಲಿ 76 ಶಂಕಿತ ಪ್ರಕರಣಗಳಲ್ಲಿ 5 ಪ್ರಕರಣಗಳು ಸೀಜನಲ್ ಹೆಚ್1ಎನ್1 ಇನ್‍ಫ್ಲೂಯೆಂಜಾ 'ಎ' ಪ್ರಕರಣಗಳು ಧೃಢೀಕೃತವಾಗಿತ್ತು.[191 ಜನರನ್ನು ಬಲಿ ತೆಗೆದುಕೊಂಡ ಎಚ್ 1 ಎನ್ 1]

ಇದೀಗ ರೋಗಿಗಳು ಚಿಕಿತ್ಸೆಗೆ ಸ್ಪಂದಿಸಿ ಗುಣಮುಖರಾಗಿದ್ದಾರೆ. 2017ರ ಆರಂಭದಲ್ಲೇ ಮತ್ತೆ ಕೆಲವು ಕಡೆ ಹೆಚ್ 1 ಎನ್1 ಕಾಣಿಸಿಕೊಂಡಿದ್ದು, ಜನರ ನಿದ್ದೆಗೆಡಿಸಿದೆ. ಜಿಲ್ಲಾ ಸರ್ವೇಕ್ಷಣಾ ಘಟಕ ದಿಂದ ನಡೆಸಿದ ಪರಿವೀಕ್ಷಣೆಯಲ್ಲಿ 27 ಶಂಕಿತ ಪ್ರಕರಣಗಳಿರುವುದು ಪತ್ತೆಯಾಗಿದೆ. ಇದು ಮೈಸೂರು ಮತ್ತು ಮೈಸೂರು ಗ್ರಾಮಾಂತರ ಪ್ರದೇಶದಲ್ಲಿ ನಡೆಸಿದ ಪರಿವೀಕ್ಷಣೆ ಎಂದು ಘಟಕ ತಿಳಿಸಿದೆ.

2017ರ ಪ್ರಾರಂಭದಲ್ಲೇ 27 ಶಂಕಿತ ಪ್ರಕರಣಗಳು

2017ರ ಪ್ರಾರಂಭದಲ್ಲೇ 27 ಶಂಕಿತ ಪ್ರಕರಣಗಳು

2017 ನೇ ಸಾಲಿನ ಜನವರಿ ಮಾಹೆಯಲ್ಲೇ 27 ಶಂಕಿತ ಪ್ರಕರಣಗಳು ಕಂಡು ಬಂದಿವೆ. ಇವುಗಳಲ್ಲಿ 8 ಧೃಢೀಕೃತ ಸೀಜನಲ್ ಹೆಚ್1ಎನ್1 ಇನ್‍ಫ್ಲೂಯೆಂಜಾ 'ಎ' ಪ್ರಕರಣಗಳು ವರದಿಯಾಗಿದೆ. ಈ ಪೈಕಿ 4 ರೋಗಿಗಳು ಚಿಕಿತ್ಸೆಗೆ ಸ್ಪಂದಿಸಿ ಗುಣಮುಖರಾಗಿದ್ದಾರೆ. ಇನ್ನುಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾ ಮುಖ್ಯ ಅಧಿಕಾರಿ ಕುಸುಮ ಒನ್ ಇಂಡಿಯಾ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.

ಮೈಸೂರಿನ ಯಾವ ಪ್ರದೇಶದಲ್ಲಿ ಹೆಚ್ಚು

ಮೈಸೂರಿನ ಯಾವ ಪ್ರದೇಶದಲ್ಲಿ ಹೆಚ್ಚು

ಕೇವಲ 15 ದಿನದಲ್ಲಿ ನಗರ ಪ್ರದೇಶದಲ್ಲಿ 5 ಪ್ರಕರಣ ಹಾಗೂ ಗ್ರಾಮಾಂತರ ಭಾಗದಲ್ಲಿ 3 ಪ್ರಕರಣಗಳು ಕಂಡು ಬಂದಿವೆ. ಅವುಗಳಲ್ಲಿ ಪ್ರಮುಖವಾಗಿ, ಹುಣಸೂರಿನ ಹನಗೂಡು, ಮೈಸೂರಿನ ದಟ್ಟಗಳ್ಳಿ, ಹೆಬ್ಬಾಳು, ಸುಬ್ರಮಣ್ಯನಗರ ಹಾಗೂ ಕುವೆಂಪುನಗರ ಹಾಗೂ ಬೋಗಾದಿ 2ನೇ ಹಂತ, ನಂಜನಗೂಡಿನ ಬೊಕ್ಕಹಳ್ಳಿ, ಟಿವಿಎಸ್ ನಗರದಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿ ತಲಾ ಒಂದೊಂದು ಪ್ರಕರಣಗಳು ಕಂಡು ಬಂದಿದೆ.

ಹೇಗೆ ಹರಡುತ್ತೆ ಈ ರೋಗ ?

ಹೇಗೆ ಹರಡುತ್ತೆ ಈ ರೋಗ ?

ಹವಾಮಾನ ವೈಪರಿತ್ಯದಿಂದ ಹೆಚ್1ಎನ್1 ಇನ್‍ಫ್ಲೂಯೆಂಜಾ ಹೆಚ್,3, ಇನ್‍ಫ್ಲೂಯೆಂಜಾ ಬಿ ವೈರಾಣುಗಳಿಂದ ಈ ರೋಗದ ಲಕ್ಷಣ ಕಂಡು ಬರುತ್ತದೆ. ಪ್ರಮುಖವಾಗಿ ಕೆಮ್ಮುವುದರಿಂದ, ಸೀನುವುದರಿಂದ ಆ ವೇಳೆ ವೈರಾಣು ಕಣಗಳು ಗಾಳಿಯಲ್ಲಿ ಹರಡಿ ಈ ಸೋಂಕು ಕಂಡು ಬರುತ್ತವೆ. ಮಾತ್ರವಲ್ಲ, ಇದು ನಿತ್ಯದ ವಸ್ತುಗಳ ಮೇಲೆ ಕುಳಿತಾಗ ಅದರ ಮೇಲೆ ನಮ್ಮ ಸ್ಪರ್ಶ ಮಾಡಿದಾಗ ನಮ್ಮ ಕೈಗಳಿಂದ ಮುಖ ಹಾಗೂ ಮೂಗಿನ ಮೇಲಿಟ್ಟಾಗ ಈ ಸೋಂಕು ಹರಡುವ ಸಾಧ್ಯತೆ ಇವೆ.

ಎಚ್ಚರಿಕೆ ಕ್ರಮ ಅಗತ್ಯ

ಎಚ್ಚರಿಕೆ ಕ್ರಮ ಅಗತ್ಯ

ನಾವು ಹೊರಗಡೆ ಹೋದ ವೇಳೆ ಸಂಪೂರ್ಣವಾಗಿ ಧೂಳಿನಲ್ಲೇ ಇರುವ ಕಾರಣ, ಮನೆಗೆ ಬಂದ ಕೂಡಲೇ ಸೋಪಿನಿಂದ ಕೈತೊಳೆಯಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಆಲ್ಕೋಹಾಲ್ ಕಟೆಂಟ್‍ವುಳ್ಳ ಹ್ಯಾಂಡ್ ವಾಶನರ್‍ನಿಂದ ಕೈತೊಳೆಯುವುದು ಸೂಕ್ತ. ಜೊತೆಯಲ್ಲಿ ಮಾಸ್ಕ್ ಉಪಯೋಗ ಮಾಡಿದರೆ ಮತ್ತಷ್ಟು ಒಳ್ಳೆಯದು. ದಿನನಿತ್ಯದ ವಸ್ತುಗಳನ್ನು ಚೆನ್ನಾಗಿ ತೊಳೆಯಬೇಕು.

ಯಾರಿಗೆ ಬೇಗ ಹರಡುತ್ತದೆ

ಯಾರಿಗೆ ಬೇಗ ಹರಡುತ್ತದೆ

ಇನ್ನೂ ಸಾಮಾನ್ಯವಾಗಿ ಹೃದಯ ಸಂಬಂಧಿ ಕಾಯಿಲೆ ಅಥವಾ ಶ್ವಾಸಕೋಶದ ಸೋಂಕು ಮಧುಮೇಹದ ರೋಗಿಗಳಿಗೆ ಇದು ಬೇಗನೇ ಹರಡುತ್ತದೆ. ಈ ವೇಳೆ ಅತಿಯಾದ ಜ್ವರ, ನೆಗಡಿ, ಕೆಮ್ಮು ಉಂಟಾಗಿ ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ವೇಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಟ್ಯಾಮಿಫ್ಲೋ ಮಾತ್ರೆಗಳನ್ನು ಸಂಬಂಧಪಟ್ಟ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡುತ್ತಿದ್ದೇವೆ. ಈ ರೋಗದ ಲಕ್ಷಣ ಕಂಡು ಬಂದ ತಕ್ಷಣವೇ ಮಾತ್ರೆಯ ಜೊತೆಗೆ ಚಿಕಿತ್ಸೆ ಅತ್ಯವಶ್ಯಕ ಅಂತಾರೆ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಕುಸುಮ ಅವರು.

English summary
H1 N1, 27 suspected case found in Mysuru. This matter revealed by mysuru district sarvekshan team. In 2016 76 H1N1 suspected cases found in mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X