ಪೌರ ಕಾರ್ಮಿಕರ ಸಮಸ್ಯೆ ಅವಲೋಕನ ಮಾಡಿದ ಜಿ.ಟಿ. ದೇವೇಗೌಡ

Posted By:
Subscribe to Oneindia Kannada

ಮೈಸೂರು, ಜೂನ್ 14 : ನಗರದ ಭಾರತ್ ನಗರದ ಪೌರ ಕಾರ್ಮಿಕರ ಕಾಲೋನಿಗೆ ಬೆಳ್ಳಂಬೆಳ್ಳಗೆ ಶಾಸಕ ಜಿ ಟಿ. ದೇವೇಗೌಡ ಹಾಗೂ ಜಿಲ್ಲಾಧಿಕಾರಿ ರಂದೀಪ್ ನೇತೃತ್ವದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಕಾಲೋನಿ ನಿವಾಸಿಗಳು ಕಾಲೋನಿಯಲ್ಲಿ ಮೂಲಭೂತ ಸೌಕರ್ಯಗಳ ಸೌಕರ್ಯಗಳೇ ಇಲ್ಕ ಒಳಚರಂಡಿ, ಟಾರ್ ರಸ್ತೆ ಹಾಗೂ ಯುಜಿಡಿ ಕಲ್ಪಿಸಿಕೊಡಿ ಎಂದು ಮನವಿ ಮಾಡಿಕೊಂಡರು.

ಮೋರಿ ಸ್ವಚ್ಛಗೊಳಿಸಿ, ರಸ್ತೆ ಡಾಂಬಾರ್ ಹಾಕಿಸಿ, ಯುಜಿಡಿ ಪೈಪ್ ಲೈನ್ ಇಲ್ಲ, ಕಂಬಗಳಿಗೆ ವಿದ್ಯುತ್ ದೀಪವಿಲ್ಲ ಇಡೀ ಕಾಲೋನಿಯಲ್ಲೇ ಅಸ್ವಚ್ಛತೆಯ ತಾಂಡವವಾಡುತ್ತಿದ್ದು ಹಲವರಿಗೆ ಡೆಂಗ್ಯೂ ಸಹ ಕಾಣಿಸಿಕೊಂಡಿದೆ ಹೀಗೆ ಹಲವಾರು ಸಮಸ್ಯೆಗಳನ್ನು ಪೌರ ಕಾರ್ಮಿಕರ ಕಾಲೋನಿಯ ಜನರು ಶಾಸಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಹೇಳಿಕೊಂಡರು.

ಜೆಡಿಎಸ್ ನಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿದೆ: ಜಿ.ಟಿ ದೇವೇಗೌಡ ಅಳಲು

GT Devegowda visits civic workers colony in Mysuru

ಅಲ್ಲದೆ ಕಾಲೋನಿಯಲ್ಲಿ ಎಲ್ಲಿಯೂ ಕಸ ವಿಲೇವಾರಿ ಮಾಡಲು ಕಂಟೇನರ್ ಇಲ್ಲ, ಕಸದ ತೊಟ್ಟಿಗಳಿಲ್ಲ, ಸ್ವಚ್ಚತೆಗೂ ಪೌರ ಕಾರ್ಮಿಕರಿಲ್ಲವೆಂದು ದೂರಿದರು. ಅಲ್ಲದೆ ಕಾಲೋನಿ ಅಭಿವೃದ್ಧಿ ಗೆ ಸಂಬಂಧಿಸಿದಂತೆ ನಗರಪಾಲಿಕೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆನ್ನುತ್ತದೆ. ಗ್ರಾಮ ಪಂಚಾಯತಿ ಸಹ ನಮಗೆ ವಹಿಸಿಲ್ಲವೆನ್ನುತ್ತದೆ ಹೀಗಾಗಿ ಕಾಲೋನಿಯಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲವೆಂದು ಅಳಲು ಹೇಳಿಕೊಂಡರು.

ಎಲ್ಲರ ಸಮಸ್ಯೆ ಆಲಿಸಿದ ಶಾಸಕ ಜಿಟಿ ದೇವೇಗೌಡ ಮಾತನಾಡ, ಹೆಚ್ಚಾಗಿ ಹಿಂದುಳಿದ ವರ್ಗ ಹಾಗೂ ಪೌರ ಕಾರ್ಮಿಕರೇ ವಾಸಿಸುವ‌ ಕಾಲೋನಿ ಇದಾಗಿದೆ. ಸದ್ಯಕ್ಕೆ ರಸ್ತೆ ಡಾಂಬರೀಕರಣಕ್ಕೆ ನಾನು ಅನುದಾನ ನೀಡುತ್ತೇನೆ. ಒಳಚರಂಡಿ ಗೆ ಜಿಲ್ಲಾಡಳಿತ ಅನುದಾನ ನೀಡಬೇಕಿದೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು.

ಈ ಸಂoರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಕಾಲೋನಿ ಅಭಿವೃದ್ಧಿ ಗೆ ಯಾರು ಹಣ ಬಿಡುಗಡೆ ಮಾಡಬೇಕು. ಕಾಲೋನಿ ಸ್ವಚ್ಛತೆ ಕಾಪಾಡವುದು ಯಾರ ಹೊಣೆ ಎಂಬ ವಿಚಾರ ಚರ್ಚಿಸಲಾಗುವುದು. ಒಂದು ವಾರದಲ್ಲಿ ಮುಡಾ, ನಗರಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹಾಗೂ ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ಸಭೆ ಕರೆದು ಕಾಲೋನಿ ಅಭಿವೃದ್ಧಿ ಪಡಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.

ಶೀಘ್ರವಾಗಿ ಡೆಂಗ್ಯೂ ಹರಡದಂತೆ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mysuru MLA GT Devegowda visits civic workers colonies to see thier problems on June 14, 2017.
Please Wait while comments are loading...