ಮೂವರಿಗೆ ಮರುಜೀವ ನೀಡಿದ ಶ್ರೀಮನ್‌ ನಾರಾಯಣ

Posted By:
Subscribe to Oneindia Kannada

ಮೈಸೂರು, ಫೆಬ್ರವರಿ 13 : ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯೊಬ್ಬರು ಅಂಗಾಂಗಗಳನ್ನು ದಾನ ಮಾಡಿದ್ದು, ಅವುಗಳನ್ನು ಮೈಸೂರಿನಿಂದ ಬೆಂಗಳೂರಿಗೆ ಸಾಗಣೆ ಮಾಡಲು ಸಂಚಾರಿ ಪೊಲೀಸರು ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿದ್ದಾರೆ.

ಶನಿವಾರ ಬೆಳಗ್ಗೆ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಿಂದ ಹೊರಡುವ ಅಂಗಾಂಗಗಳನ್ನು ಹೊತ್ತ ಆಂಬ್ಯುಲೆನ್ಸ್, ಟ್ರಾಫಿಕ್ ಮುಕ್ತ ಗ್ರೀನ್ ಕಾರಿಡಾರ್ ವ್ಯವಸ್ಥೆ ಮೂಲಕ ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆ ತಲುಪಲಿದೆ. [ಜೀವಂತ ಹೃದಯ ಸಾಗುತ್ತಿದೆ ದಾರಿ ಬಿಡಿ]

ambulance

ಮೈಸೂರಿನಲ್ಲಿ 1 ವಾರದ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಳ್ಳಾರಿ ಮೂಲದ ಶ್ರೀಮನ್ ನಾರಾಯಣ (38) ಅವರು ಗಂಭೀರವಾಗಿ ಗಾಯಗೊಂಡಿದ್ದರು. ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಮೆದುಳು ನಿಷ್ಕ್ರಿಯಗೊಂಡ ಹಿನ್ನಲೆಯಲ್ಲಿ ಅಂಗಾಗಳನ್ನು ದಾನ ಮಾಡಲಾಗುತ್ತಿದೆ. [ಸತ್ತ ಕರುವಿಗೆ ನ್ಯಾಯ ಕೇಳುತ್ತಿರುವ 'ಪುಣ್ಯಕೋಟಿ'ಯ ಕಥೆ]

ಮೈಸೂರಿನ ಜಯಪುರ ಬಡಾವಣೆಯ ನಿವಾಸಿ ಶ್ರೀಮನ್ ನಾರಾಯಣ ಅವರು ಒಂದು ವಾರದ ಹಿಂದೆ ಜೀಪ್‌ನಲ್ಲಿ ಹೋಗುತ್ತಿದ್ದಾಗ ಅದು ಕೆಟ್ಟು ನಿಂತಿತ್ತು. ಅದನ್ನು ನೋಡಲು ಕೆಳಗಿಳಿದ ಅವರಿಗೆ ಬೈಕ್ ಸವಾರನೊಬ್ಬ ಡಿಕ್ಕಿ ಹೊಡೆದಿದ್ದ. ಈ ಅಪಘಾತದಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದು, ಜೆಎಸ್‌ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. [ಅಂಗಾಂಗ ದಾನ ಮಾಡಿ ನಾಲ್ವರಿಗೆ ಮರು ಜೀವ ನೀಡಿದರು]

ಶ್ರೀಮನ್‌ ನಾರಾಯಣ ಅವರು ಕಣ್ಣು, ಲಿವರ್‌ಗಳನ್ನು ದಾನಮಾಡಿದ್ದು, ಅವುಗಳನ್ನು ಬೆಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ತರಲಾಗುತ್ತಿದೆ. ಇದಕ್ಕಾಗಿ ಸಂಚಾರಿ ಪೊಲೀಸರ ನೆರವಿನಿಂದ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The green corridors were created between Mysuru and Bengaluru city with the help of the traffic police and district administration to transporting the organs on Saturday, February 13, 2016.
Please Wait while comments are loading...