ಚಿತ್ರನಗರಿಯಾಗಿ ಮೈಸೂರು: ಸಂತಸ ವ್ಯಕ್ತಪಡಿಸಿದ ನಟ ಉಪೇಂದ್ರ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಮಾರ್ಚ್ 15 : ರಾಜ್ಯ ಬಜೆಟ್ ಕುರಿತಂತೆ ಮೈಸೂರಿನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದು, ಮೈಸೂರು ಚಿತ್ರನಗರಿ ಆಗುತ್ತಿರುವುದು ಸಂತಸದ ವಿಚಾರ ಎಂದಿದ್ದಾರೆ.[ಆರಿಹೋದ 'ಓಂ' ಚಿತ್ರದ ಸ್ಫೂರ್ತಿ, ಗದ್ಗದಿತ ರಿಯಲ್ ಸ್ಟಾರ್ ಉಪ್ಪಿ]

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮೈಸೂರೇ ಒಂದು ಚಿತ್ರನಗರಿ ಇದ್ದಂತೆ. ಇಲ್ಲಿ ಸಿಗುವ ಲೊಕೇಷನ್ ಬೇರೆ ಎಲ್ಲೂ ಸಿಗಲ್ಲ. ಬಹುತೇಕ ಚಿತ್ರಗಳು ಮೈಸೂರಿನಲ್ಲಿ ಚಿತ್ರಿಕರಣವಾಗುತ್ತಿವೆ.ಬೆಂಗಳೂರು ಟ್ರಾಫಿಕ್ ನಿಂದ ಶೂಟಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಮೈಸೂರಿನಲ್ಲಿ ನಿರ್ಮಾಣವಾಗುತ್ತಿರೋ ಚಿತ್ರರಂಗದ ಕಾಮಗಾರಿಗೆ ಚಿತ್ರರಂಗದ ಗಣ್ಯರು ಕೈ ಜೋಡಿಸಬೇಕು. ಚಿತ್ರೀಕರಣ ನಡೆಯದೆ ಇದ್ದ ಸಂದರ್ಭದಲ್ಲಿಯೂ ವರಮಾನ ಬರುವ ರೀತಿ ಚಿತ್ರನಗರಿ ನಿರ್ಮಾಣವಾಗಬೇಕು ಎಂದರು.[ನೀರು ಹಂಚಿಕೆ ವಿವಾದಕ್ಕೆ ರಿಯಲ್ ಸ್ಟಾರ್ ಉಪ್ಪಿಯಿಂದ ಪರಿಹಾರ]

Great pleasure for having film city in Mysore- Actor Upendra said to media

ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರಪ್ರದರ್ಶನಕ್ಕೆ ಸರ್ಕಾರ ಹೆಚ್ಚು ಒತ್ತು ಕೊಟ್ಟಿರುವುದು ಸಂತಸದ ವಿಚಾರ. ಸಿನಿಮಾ ಟಿಕೆಟ್ ದರ ಇನ್ನೂರು ರೂ ಇಳಿಕೆಯೂ ಕೂಡ ಒಳ್ಳೆಯದೆ. ಪರಭಾಷೆ ಚಿತ್ರಗಳಿಗೆ ಮುನ್ನೂರು ನಾನೂರು ಕೊಡೋವುದಾದರೂ ತಪ್ಪುತ್ತದೆ. ಈ ವ್ಯವಸ್ಥೆ ಪಕ್ಕದ ರಾಜ್ಯಗಳಲ್ಲಿ ಈಗಾಗಲೇ ಇದೆ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Great pleasure for having film city in Mysore- Actor Upendra said to media. He was talking in mysuru today about state budget 2017-18.
Please Wait while comments are loading...