ಶಿವರಾತ್ರಿ ಪ್ರಯುಕ್ತ 11 ಕೆ.ಜಿ ತೂಕದ ಚಿನ್ನದ ಮುಖವಾಡ ಸಮರ್ಪಣೆ

By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಫೆಬ್ರವರಿ 12 : ಸಾಂಸ್ಕೃತಿಕ ನಗರಿ ಮೈಸೂರು ಜನ ಶಿವರಾತ್ರಿಯ ಆಗಮನಕ್ಕೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ನಾಳೆ ನಡೆಯುವ ಶಿವನ ಆರಾಧನಾ ಕೈಂಕರ್ಯಕ್ಕೆ ಹಾಗೂ ವಿಶೇಷ ಪೂಜೆಗೆ ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಾಲಯಕ್ಕೆ ಜಿಲ್ಲಾಡಳಿತದ ವತಿಯಿಂದ ಚಿನ್ನದ ಕೊಳಗವನ್ನು ಹಸ್ತಾಂತರಿಸಲಾಯಿತು.

ಮೈಸೂರು ಜಿಲ್ಲಾಡಳಿತ ತನ್ನ ಸುಪರ್ದಿಯಲ್ಲಿದ್ದ 11 ಕೆಜಿ ತೂಕದ ಚಿನ್ನದ ಮುಖವಾಡವನ್ನು ಇಂದು ದೇವಾಲಯದ ಅರ್ಚಕರಿಗೆ ನೀಡಿದೆ. ನಾಳೆ ವೈಭವೋಪೇತ ಮಹಾಶಿವರಾತ್ರಿ ನಡೆಯಲಿದ್ದು, ಈ ಪ್ರಯುಕ್ತ ತ್ರಿನೇಶ್ವರ ದೇವಸ್ಥಾನದಲ್ಲಿ ಬರೆದ ಸಿದ್ಧತೆಗೆ ಅಣಿಯಾಗುತ್ತಿದೆ.

Grand celebration of Shivarathri in Mysuru

ಶಿವಲಿಂಗಕ್ಕೆ ವರ್ಷಕ್ಕೆ ಒಂದೇ ಬಾರಿ ಚಿನ್ನದ ಲೇಪಿತ ಕೊಳಗವನ್ನು ತೋಡಿಸಲಾಗುತ್ತಿದ್ದು, ಸೋಮವಾರ ಬೆಳಗ್ಗೆ ತ್ರಿನೇಶ್ವರ ದೇವಸ್ಥಾನದ ಅರ್ಚಕರಿಗೆ ಚಿನ್ನದ ಲೇಪಿತ ಕೊಳಗವನ್ನು ಕೊಂಡೊಯ್ದು ನೀಡಿದೆ. ಮಂಗಳವಾರ ಬೆಳಗ್ಗೆ ಅದಕ್ಕೆ ಧಾರ್ಮಿಕ ವಿಧಿವಿಧಾನಗಳು ನಡೆಯಲಿದ್ದು, ಜಿಲ್ಲಾಡಳಿತ ದೇವಾಲಯಕ್ಕೆ ಭೇಟಿ ನೀಡಿ ದೇವರ ಕೊಳಗವನ್ನು ದೇವಾಲಯದ ಅರ್ಚಕರಿಗೆ ಹಸ್ತಾಂತರಿಸಿದೆ.

Grand celebration of Shivarathri in Mysuru

ಕೊಳಗದ ಹಿನ್ನೆಲೆ
ಶಿವನ ಮುಖವಾಡವನ್ನು ಹೋಲುವ ಈ ಕೊಳಗ ಜಯಚಾಮರಾಜೇಂದ್ರ ಒಡೆಯರ್ ಅವರು ತಮ್ಮ ಪುತ್ರ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಹುಟ್ಟಿದ ಸಂದರ್ಭದಲ್ಲಿ ದೇವಾಲಯಕ್ಕೆ ಉಡುಗೊರೆಯಾಗಿ ನೀಡಿದ್ದರು. ಅಂದಿನಿಂದ ಪ್ರತಿ ಶಿವರಾತ್ರಿಯಂದು ಈ ಕೊಳಗವನ್ನು ಶಿವನ ಮೂರ್ತಿಗೆ ತೊಡಿಸಿ ಪೂಜೆಗೈಯಲಾಗುತ್ತದೆ.

Grand celebration of Shivarathri in Mysuru

ಇತ್ತ 101 ಶಿವ ಮೂರ್ತಿಗೂ ಪೂಜೆ
ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದ 4ನೇ ವಾರ್ಡ್ ನ ರಾಮಾನುಜ ರಸ್ತೆಯಲ್ಲಿರುವ ಗುರುಕುಲ ಟ್ರಸ್ಟ್ ನ 101 ಶಿವಲಿಂಗಗಳನ್ನು ಶಿವರಾತ್ರಿ ಪ್ರಯುಕ್ತ ಶುಚಿಗೊಳಿಸಲಾಯಿತು. ಶಿವರಾತ್ರಿ ಪ್ರಯುಕ್ತ ಎಲ್ಲೆಲ್ಲೂ ಸಡಗರ ಸಂಭ್ರಮಗಳು ಮನೆ ಮಾಡಿದ್ದು, ಶಿವ ದೇವಾಲಯ ಮತ್ತು ಶಿವನ ಪ್ರತಿಮೆಗಳಿರುವ ಕಡೆ ವಿಶೇಷ ಗಮನ ವಹಿಸಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ 101 ಶಿವಲಿಂಗಗಳ ಮೇಲೆ ನೀರು ಹರಿಸಿ ಅವುಗಳ ಮೇಲಿದ್ದ ಧೂಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Grand celebration of Maha shivarathri in all over Mysuru. District administration handed over golden mask to Lord Shiva at Thrineshwaraswamy temple at Mysuru palace.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ