ಅಕ್ರಮ ಮರಳು ಸಾಗಿಸುತ್ತಿದ್ದ ಗ್ರಾಪಂ ಮಾಜಿ ಅಧ್ಯಕ್ಷ ಬಂಧನ

Posted By:
Subscribe to Oneindia Kannada

ಮೈಸೂರು, ಜುಲೈ 28 : ಮರಳು ಅಕ್ರಮ ಸಾಗಾಣಿಕೆಯಲ್ಲಿ ರಾಜಕೀಯ ಪಕ್ಷಗಳಿಗೆ ಸೇರಿದ ಜನಪ್ರತಿನಿಧಿಗಳು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸೇರಿದಂತೆ ಇಬ್ಬರನ್ನು ಅಕ್ರಮ ಮರಳು ಸಾಗಿಸುವಾಗ ಪೊಲೀಸರು ಬಂಧಿಸಿದ್ದಾರೆ.[ಅಕ್ರಮ ಮರಳು ಸಾಗಾಟಕ್ಕೆ ಹೊಸ ತಂತ್ರ!]

ನಂಜನಗೂಡು ತಾಲೂಕಿನ ಹೆಡತಲೆ ಗ್ರಾಮದ ನಿವಾಸಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರವಿ ಹಾಗೂ ರಂಗಸ್ವಾಮಿ ಅಕ್ರಮ ಮರಳು ಸಾಗಿಸುವಾಗ ಸಿಕ್ಕಿಬಿದ್ದವರು. ಗ್ರಾಮದ ಪಕ್ಕದಲ್ಲಿ ಹರಿಯುತ್ತಿರುವ ಕಿರು ಕಾಲುವೆಯಲ್ಲಿ ಶೇಖರಣೆಯಾಗಿದ್ದ ಮರಳನ್ನು ತೆಗೆದು ಅಕ್ರಮವಾಗಿ 3 ಟ್ರಾಕ್ಟರ್‌ಗಳ ಮೂಲಕ ಸಾಗಿಸಲಾಗುತ್ತಿತ್ತು.[ಗ್ರಾಮ ಪಂಚಾಯಿತಿಯಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ]

GP former president held on charge of illegal sand transportation

ಮರಳು ಸಾಗಣೆ ಬಗ್ಗೆ ಖಚಿತ ಮಾಹಿತಿ ಪಡೆದ ಕವಲಂದೆ ಪೊಲೀಸ್ ಠಾಣೆಯ ಎಸ್‍ಐ ಶಿವಮಾದಯ್ಯ, ಸಿಬ್ಬಂದಿ ಶಿವಕುಮಾರ್, ಮಹೇಶ್, ಕೆಂಪರಾಜು ಅವರು ದಾಳಿ ಮಾಡಿ, ಇಬ್ಬರನ್ನು ಬಂಧಿಸಿದ್ದಾರೆ. ಟ್ರಾಕ್ಟರ್ ಚಾಲಕ ಮಣಿ ಮತ್ತು ನಂಜುಂಡಸ್ವಾಮಿ ಪರಾರಿಯಾಗಿದ್ದು, ಹುಡುಕಾಟ ಮುಂದುವರೆದಿದೆ.[ದಕ್ಷಿಣ ಕನ್ನಡದಿಂದ ಹೊರ ಜಿಲ್ಲೆಗೆ ಮರಳು ಸಾಗಿಸುವಂತಿಲ್ಲ]

ಈ ಸಂಬಂಧ ಕವಲಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರವಿ ಮತ್ತು ರಂಗಸ್ವಾಮಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nanjangud taluk Kavalande police have arrested Former gram panchayat president who allegedly involved in transporting sand illegally.
Please Wait while comments are loading...