ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರಮನೆಯ ಸೌಂದರ್ಯಕ್ಕೆ ಮಾರುಹೋದ ರಾಜ್ಯಪಾಲ ವಜುಭಾಯಿ ವಾಲಾ

By ಯಶಸ್ವಿನಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್.6: ದೇಶದ ಅದ್ಭುತಗಳಲ್ಲಿ ಒಂದಾಗಿರುವ ದೇಶ-ವಿದೇಶಗಳ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ಸಾಂಸ್ಕೃತಿಕ ನಗರಿಯ ಹಿರಿಮೆ ಐತಿಹಾಸಿಕ ಮೈಸೂರು ಅರಮನೆಗೆ ರಾಜ್ಯಪಾಲ ವಜುಭಾಯಿ ರುಢಾಬಾಯಿ ವಾಲಾ ಅವರು ಕುಟುಂಬ ಸಮೇತರಾಗಿ ಭೇಟಿ ನೀಡಿದರು.

ಇಂಡೋ ಸಾರ್ಸ್ ನಿಕ್ ಶೈಲಿಯಲ್ಲಿ ನಿರ್ಮಿಸಿರುವ ಶತಮಾನ ಪೂರೈಸಿರುವ ಅಂಬಾವಿಲಾಸ ಅರಮನೆಯ ವಿನ್ಯಾಸ, ಸೌಂದರ್ಯವನ್ನು ವೀಕ್ಷಿಸಿದ ಅವರು, ಅರಮನೆಯೊಳಗಿನ ಕಲ್ಯಾಣ ಮಂಟಪ, ದರ್ಬಾರ, ಸಭಾಂಗಣದಲ್ಲಿನ ಕಲಾತ್ಮಕತೆ, ವಾಸ್ತುಶಿಲ್ಪ, ಪೇಂಟಿಂಗ್ಸ್ ನೋಡಿ ಮನಸೋತರು.

ದಸರಾ ಪ್ರವಾಸಿಗರಿಗಾಗಿ ಪ್ಯಾಲೆಸ್ ಆನ್ ವೀಲ್ಸ್ ಎಂಬ ಹೊಸ ಪ್ಲಾನ್!ದಸರಾ ಪ್ರವಾಸಿಗರಿಗಾಗಿ ಪ್ಯಾಲೆಸ್ ಆನ್ ವೀಲ್ಸ್ ಎಂಬ ಹೊಸ ಪ್ಲಾನ್!

ಕರ್ನಾಟಕದ ರಾಜ್ಯಪಾಲರಾಗಿ ಸುಮಾರು 4 ವರ್ಷಗಳ ಹಿಂದೆ ನೇಮಕಗೊಂಡಿರುವ ಅವರು ಮೈಸೂರು ನಗರಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದರೂ ಅರಮನೆಯನ್ನು ವೀಕ್ಷಿಸಿರಲಿಲ್ಲವಂತೆ.

Governor Vajubhai Vala visited the palace of Mysore with family

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪಂಜಿನ ಕವಾಯಿತು ಮೆರವಣಿಗೆಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಗೌರವ ರಕ್ಷೆ ಸ್ವೀಕರಿಸುತ್ತಿದ್ದರೂ ಒಮ್ಮೆಯೂ ಅರಮನೆ ನೋಡಿರಲಿಲ್ಲವಂತೆ.

 ದಸರಾ ದರ್ಶಿನಿ, ಪ್ಯಾಲೆಸ್ ಆನ್ ವೀಲ್ ಗೆ ಚಾಲನೆ ದಸರಾ ದರ್ಶಿನಿ, ಪ್ಯಾಲೆಸ್ ಆನ್ ವೀಲ್ ಗೆ ಚಾಲನೆ

ಅರಮನೆಗೆ ಆಗಮಿಸಿದ ರಾಜ್ಯಪಾಲ ವಾಜುಬಾಯಿ ರುಢಾಬಾಯಿ ವಾಲಾ ಅವರನ್ನು ಅರಮನೆ ಮಂಡಳಿ ಪರವಾಗಿ ಉಪನಿರ್ದೇಶಕ ಟಿ.ಎಸ್. ಸುಬ್ರಮಣ್ಯ ಅವರು ಸ್ವಾಗತಿಸಿದರು. ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಮೈಸೂರು ಮಲ್ಲಿಗೆ ಹಾರ ಹಾಕಿ ಗೌರವಿಸಿದರು.

 ಪ್ರವಾಸಿಗರನ್ನು ಕೈಬೀಸಿ ಕರೆಯಲಿವೆ ಮಡಿಕೇರಿ ಕೋಟೆ-ಅರಮನೆ ಪ್ರವಾಸಿಗರನ್ನು ಕೈಬೀಸಿ ಕರೆಯಲಿವೆ ಮಡಿಕೇರಿ ಕೋಟೆ-ಅರಮನೆ

ಅರಮನೆಯ ಸೌಂದರ್ಯಕ್ಕೆ ಮನಸೋತ ರಾಜ್ಯಪಾಲರು ದಸರಾ ಆರಂಭವಾದ ಮೇಲೆ ಒಂದು ದಿನ ಅರಮನೆಗೆ ಆಗಮಿಸಿ ಚಿನ್ನದ ಸಿಂಹಾಸನ ವೀಕ್ಷಿಸುವ ಇಚ್ಛೆಯನ್ನೂ ವ್ಯಕ್ತಪಡಿಸಿದರು. ಈ ಸಂಬಂಧ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರ ಗಮನಕ್ಕೂ ತರುವಂತೆ ಸೂಚಿಸಿದರು .

ಇದೇ ವೇಳೆ ರಾಜ್ಯಪಾಲರಿಗೆ ಅರಮನೆಯ ಇತಿಹಾಸ, ದಸರಾ ಹಿನ್ನೆಲೆ, ಕಾರ್ಯಕ್ರಮಗಳ ಮಾಹಿತಿಯನ್ನು ನೀಡಿದ್ದಾಗಿ ಸುಬ್ರಮಣ್ಯ ತಿಳಿಸಿದರು.

English summary
Governor Vajubhai Vala visited the palace of Mysore with family. They liked Kalyana Mantapa, Darbar, Artistry in the Palace, Architecture, Paintings in the Palace very much.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X