ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂಜನಗೂಡಿನ ಹಾರೋಪುರದಲ್ಲಿ ರೈಲ್ವೆ ಬೋಗಿಯಂಥೊಂದು ಸರಕಾರಿ ಶಾಲೆ!

By Yashaswini
|
Google Oneindia Kannada News

ಮೈಸೂರು, ಜುಲೈ 10 : ದೂರದಿಂದ ನೋಡಿದಾಗ ಅಲ್ಲೊಂದೆರಡು ಹೊಚ್ಚ ಹೊಸ ರೈಲು ಬೋಗಿಗಳು ನಿಂತಿರುವಂತೆ ಕಂಡಿತು. ಹಿಂದೆ- ಮುಂದೆ ಕಣ್ಣಾಡಿಸಿದರೆ ಹಳಿಗಳೇನೂ ಕಾಣಲಿಲ್ಲ! ಅರೆ, ಇದೇನಿದು ಹಳಿಯೇ ಇಲ್ಲದೇ ಈ ಕಡು ನೀಲಿ ಬಣ್ಣದ ರೈಲು ಬೋಗಿಗಳು ಇಲ್ಲಿಗೆ ಬಂದು ನಿಂತಿದ್ದಾದರೂ ಹೇಗೆ?

ಅದ್ಯಾರದು, ಬೋಗಿಗಳ ಬಾಗಿಲಂಚಲ್ಲಿ ಇಣುಕಿ ನೋಡುತ್ತಿರುವವರು? ಕುತೂಹಲ ತಡೆಯಲಾರದೆ ಆ ರೈಲು ಬೋಗಿಗಳ ಸಮೀಪಕ್ಕೆ ತೆರಳಿ ನೋಡಿದಾಗ ಅಚ್ಚರಿಯೋ ಅಚ್ಚರಿ!

ವಾಸ್ತವಕ್ಕೆ ಅವು ರೈಲ್ವೆ ಬೋಗಿಗಳೇ ಅಲ್ಲ; ರೈಲ್ವೆ ಬೋಗಿಯಂತೆ ಕಾಣುವ ಸರಕಾರಿ ಶಾಲೆಗಳ ಕೊಠಡಿಗಳು! ಬಾಗಿಲಲ್ಲಿ ಇಣುಕಿ ನೋಡುತ್ತಿದ್ದವರು ಪ್ರಯಾಣಿಕರಲ್ಲ. ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು. ಸರಕಾರಿ ಶಾಲೆಯನ್ನು ಹೀಗೂ ನಿರ್ಮಿಸಿ ಹಳ್ಳಿಗಾಡಿನ ವಿದ್ಯಾರ್ಥಿಗಳನ್ನು ಸಂತಸಪಡಿಸಬಹುದು, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಶಾಲೆ ಸೇರುವಂತೆ ಆಕರ್ಷಿಸಬಹುದು.

ಶಿಕ್ಷಣ ಸಚಿವರ ಜಿಲ್ಲೆಯ ಸರ್ಕಾರಿ ಶಾಲೆಯ ಗೋಳು ಕೇಳಿ...ಶಿಕ್ಷಣ ಸಚಿವರ ಜಿಲ್ಲೆಯ ಸರ್ಕಾರಿ ಶಾಲೆಯ ಗೋಳು ಕೇಳಿ...

ಇಂಥದೊಂದು ಪರಿಕಲ್ಪನೆ ವಿನ್ಯಾಸಗೊಳಿಸಿದವರನ್ನು ಅಭಿನಂದಿಸಲೇಬೇಕು. ಹೌದು, ನಂಜನಗೂಡು ತಾಲೂಕಿನ ಹಾರೋಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಹೀಗೆ ಭಿನ್ನ ರೀತಿಯಲ್ಲಿ ನಿರ್ಮಾಣಗೊಂಡು ಆಕರ್ಷಕ ಎನಿಸಿದೆ.

ಥೇಟ್ ರೈಲು ಬೋಗಿಯಂತಿದೆ

ಥೇಟ್ ರೈಲು ಬೋಗಿಯಂತಿದೆ

ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ನಿರ್ಮಾಣಗೊಳ್ಳುವ ಸರಕಾರಿ ಶಾಲೆಗಳ ಕಟ್ಟಡಗಳು ಯಾವುದೇ ವಿಶೇಷ ವಿನ್ಯಾಸವಿಲ್ಲದೆ, ಗೋದಾಮು ರೀತಿಯಲ್ಲಿಯೇ ಗೋಚರಿಸುತ್ತವೆ. ಆದರೆ ಹಾರೋಪುರದ ಸರಕಾರಿ ಶಾಲೆಯ ಈ ವಿಭಿನ್ನ ಕಟ್ಟಡ, ನಗರದ ಖಾಸಗಿ ಶಾಲೆಗಳಿಗೇ ಸಡ್ಡು ಹೊಡೆಯವಂತಿದೆ. ದೂರದಿಂದಷ್ಟೇ ಅಲ್ಲ, ಹತ್ತಿರ ಹೋದ ಬಳಿಕವೂ ಶಾಲಾ ಕೊಠಡಿಗಳ ನೋಟ ಥೇಟ್ ರೈಲು ಬೋಗಿಯೇ ಎನಿಸುವಂತಿದೆ.

ಶಾಲೆ ಶಿಕ್ಷಕ ದೊರೆಸ್ವಾಮಿ ಅವರ ಆಲೋಚನೆ

ಶಾಲೆ ಶಿಕ್ಷಕ ದೊರೆಸ್ವಾಮಿ ಅವರ ಆಲೋಚನೆ

ಶಾಲೆಗೆ ಇಂಥ ಸುಂದರ ರೂಪ ನೀಡಿದವರು ವಾಸ್ತುಶಿಲ್ಪಿಯೂ ಅಲ್ಲ, ನುರಿತ ಸಿವಿಲ್ ಇಂಜಿನಿಯರ್ ಸಹ ಅಲ್ಲ. ಅವರು ಇದೇ ಶಾಲೆಯ ಶಿಕ್ಷಕ ದೊರೆಸ್ವಾಮಿ. ಅವರಿಗೆ ಸಹಕಾರ ನೀಡಿದವರು ಮುಖ್ಯ ಶಿಕ್ಷಕ ಬಸವನಾಯಕ. ತಮ್ಮ ಶಾಲೆ ಬೇರೆಲ್ಲ ಶಾಲೆಗಿಂತ ಸುಂದರವಾಗಿರಬೇಕು. ಅದರೊಂದಿಗೆ ಹೊಸತನವೂ ಇರಬೇಕು. ಆಕರ್ಷಣೀಯವಾಗಿಯೂ ಇರಬೇಕು ಎಂದು ಈ ರೀತಿಯ ರೂಪ ನೀಡಿದ್ದೇವೆ ಎನ್ನುತ್ತಾರೆ ಅವರು.

ಶಿಕ್ಷಕರು, ಮುಖ್ಯೋಪಾಧ್ಯಾಯರು ಹಣ ಹಾಕಿದ್ದಾರೆ

ಶಿಕ್ಷಕರು, ಮುಖ್ಯೋಪಾಧ್ಯಾಯರು ಹಣ ಹಾಕಿದ್ದಾರೆ

ಇದಕ್ಕಾಗಿ ನಾವೇನೂ ಹೆಚ್ಚು ಖರ್ಚು ಮಾಡಿಲ್ಲ ಎನ್ನುವ ಬಸವನಾಯಕ, ಶಾಲಾ ಅನುದಾನದ ಜೊತೆ ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಾಲ್ವರು ಶಿಕ್ಷಕರಾದ ನಾನು, ದೊರೆಸ್ವಾಮಿ, ತರನಂ ಖಾನ ಹಾಗೂ ನೇತ್ರಾವತಿ ಇನ್ನಷ್ಟು ಹಣ ಹಾಕಿ ಇರುವ ಕೊಠಡಿಗಳನ್ನು ರೈಲು ಬೋಗಿಯಂತಾಗಿಸಿ ಶಾಲೆಗೊಂದು ನೂತನ ವಿಶೇಷ ವಿನ್ಯಾಸ ನೀಡಿದ್ದೇವೆ ಎಂದರು.

ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರಿಗೆ ಹ್ಯಾಟ್ಸ್ ಆಫ್

ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರಿಗೆ ಹ್ಯಾಟ್ಸ್ ಆಫ್

ಸರಕಾರಿ ಶಾಲೆಗಳನ್ನೇ ಮುಚ್ಚಬೇಕೆಂಬ ಸರಕಾರದ ನಿರ್ಧಾರದ ಮಧ್ಯೆ ಶಾಲೆಗೆ ಮಕ್ಕಳನ್ನು ಸೆಳೆಯುವ ಪ್ರಯತ್ನದಲ್ಲಿ ಶಾಲಾ ಶಿಕ್ಷಕರ ಇಂತಹ ನಿರ್ಧಾರ ಮೆಚ್ಚುವಂತಹದ್ದೇ ಸರಿ. ತುತ್ತೋಚಾನ್ ಎಂಬ ಪುಸ್ತಕದಲ್ಲಿ ಜಪಾನ್ ನಲ್ಲಿ ಶಿಕ್ಷಣ ಪದ್ಧತಿ ಹೇಗಿತ್ತು ಎಂದು ತಿಳಿಸುವಾಗ ಇಂಥದ್ದೇ ರೈಲು ಬೋಗಿಯ ಪ್ರಸ್ತಾವ ಬರುತ್ತದೆ. ಈ ಸರಕಾರಿ ಶಾಲೆ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರಿಗೆ ಹ್ಯಾಟ್ಸ್ ಆಫ್.

English summary
Government school in unique design in Nanjangud taluk, Haropura village. School painted like rail compartment to attract students to school.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X