ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂಜನಗೂಡಿನ ಉಪಚುನಾವಣೆಗೆ ಸಿದ್ದವಾಗ್ತಿದೆ ಅಖಾಡ..

By ಎಂ.ಕೆ.ಯಶಸ್ವಿನಿ, ಮೈಸೂರು
|
Google Oneindia Kannada News

ಮೈಸೂರು, ಡಿಸೆಂಬರ್ 10 : ನಂಜನಗೂಡು ಉಪಚುನಾವಣಾ ಕಣ ರಂಗೇರುತ್ತಿದೆ ಎನ್ನುವುದಕ್ಕೆ ಈ ಸ್ಟೋರಿ ಬೆಸ್ಟ್ ಎಕ್ಸಾಂಪಲ್ . ತಮ್ಮ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಅಥವಾ ಸಚಿವರು ಚಾಲನೆ ನೀಡುವುದು ಸಹಜ. ಆದರೆ ಸರ್ಕಾರಿ ಅಧಿಕಾರಿಗಳೇ ಶಾಸಕರ ಪುತ್ರನಿಂದ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿಸಿ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಟಿ.ನರಸೀಪುರ ಕ್ಷೇತ್ರದಲ್ಲಿ ನಡೆದಿದೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಅವರ ಸ್ವಕ್ಷೇತ್ರ ಟಿ.ನರಸೀಪುರ ತಾಲೂಕಿನ ಹಿರಿಯೂರು ಗ್ರಾಮದಲ್ಲಿ ಎಸ್ಸಿಪಿ, ಟಿಎಸ್ ಪಿ ಯೋಜನೆಯಡಿ ರು 1.20 ಕೋಟಿ ವೆಚ್ಚದ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಸಚಿವರ ಪುತ್ರ ಸುನೀಲ್ ಬೋಸ್ ರಿಂದ ಸರ್ಕಾರಿ ಅಧಿಕಾರಿಗಳು ಗುದ್ದಲಿ ಪೂಜೆ ನೆರವೇರಿಸಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ದೂರಲಾಗಿದೆ.[ಸಿದ್ದರಾಮಯ್ಯಗೆ ಪ್ರತ್ಯುತ್ತರ ನೀಡಲು ಶ್ರೀನಿವಾಸ ಪ್ರಸಾದ್ ಸಜ್ಜು]

Government officials defied the rule of legislators who worship the son of a construction sunil bose. Minister H.C. Mahadevappa preparing to Nanjangud By-election behind the some reaction over there.

ಯಾವುದೇ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವುದು ಶಾಸಕರಿಗೆ ಮಾತ್ರ ಅವಕಾಶವಿರುತ್ತದೆ. ಅದರಲ್ಲೂ ಸರ್ಕಾರಿ ಕಾಮಗಾರಿಯನ್ನ ಈ ರೀತಿ ಶಾಸಕನ ಪುತ್ರ ಚಾಲನೆ ನೀಡುವುದು ತಪ್ಪು. ಈ ಬಗ್ಗೆ ದೂರು ನೀಡಲು ಜೆಡಿಎಸ್ ಮುಖಂಡರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

Government officials defied the rule of legislators who worship the son of a construction sunil bose. Minister H.C. Mahadevappa preparing to Nanjangud By-election behind the some reaction over there.

ಬೋಸ್ ವರಸೆಯೇ ಬೇರೆ...
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿದ ನಂತರ ತಿ.ನರಸೀಪುರ ಕ್ಷೇತ್ರದಾದ್ಯಂತ ಧೂಳುಮಯವಾಗಿದ್ದ ರಸ್ತೆಗಳನ್ನು ಕಾಂಕ್ರಿಟ್ ರಸ್ತೆಯನ್ನಾಗಿ ಮಾರ್ಪಾಡು ಮಾಡಲಾಗಿದೆ. ರಾಜ್ಯದಲ್ಲಿ ತಿ.ನರಸೀಪುರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕಂಬ ಉದ್ದೇಶದೊಂದಿಗೆ ನಮ್ಮ ತಂದೆಯವರು ಕಳೆದು ಮೂರು ವರ್ಷಗಳ ಅವಧಿಯಲ್ಲಿ ಕ್ಷೇತ್ರಕ್ಕೆ ಬೇಕಾದ ಅಗತ್ಯ ಮೂಲ ಸೌಕರ್ಯವನ್ನು ಕಲ್ಪಿಸಿದ್ದಾರೆ. ಅದರಂತೆ ಉಳಿದಿರುವ ಒಂದುವರೆ ವರ್ಷದ ಅವಧಿಯಲ್ಲಿ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಿದ್ದಾರೆಂದು ಸುನೀಲ್ ಬೋಸ್ ಹೇಳಿದರು.

Government officials defied the rule of legislators who worship the son of a construction sunil bose. Minister H.C. Mahadevappa preparing to Nanjangud By-election behind the some reaction over there.

ಇನ್ನು ಮತದಾರರನ್ನು ಓಲೈಸಲು ಕೈ ಪಡೆ ಸಜ್ಜಾಗಿದ್ದು ಪ್ರತಿ ಮತದಾರನಿಗೂ 15 ಸಾವಿರ ಹಣದ ಆಮಿಷವೊಡ್ಡಲಾಗಿದೆ ಅನ್ನೋ ಮಾಹಿತಿ ಕೂಡ ಹರಿದಾಡುತ್ತಿದೆ. ಒಟ್ಟಾರೆ ಅಪ್ಪ ಮಹದೇವಪ್ಪ ಹೇಗಾದರೂ ಮಾಡಿ ಶ್ರೀನಿವಾಸ್ ಪ್ರಸಾದ್ ರನ್ನು ಸೆಣಸಲು ಮಗ ಸುನೀಲ್ ಬೋಸ್ ರನ್ನು ಹಿಂದೆ ಬಿಟ್ಟು ಈ ರೀತಿ ಪ್ಲಾನ್ ಮಾಡಿರೋದರಲ್ಲಂತೂ ನೋ ಡೌಟ್.

Government officials defied the rule of legislators who worship the son of a construction sunil bose. Minister H.C. Mahadevappa preparing to Nanjangud By-election behind the some reaction over there.
English summary
Government officials defied the rule of legislators who worship the son of a construction sunil bose. Minister H.C. Mahadevappa preparing to Nanjangud By-election behind the some reaction over there.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X