ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐದು ವರ್ಷದಲ್ಲಿ ಸರ್ಕಾರ ರಾಜಮನೆತನಕ್ಕೆ ನೀಡಿರುವ ಗೌರವ ಧನ ಎಷ್ಟು?

By Manjunatha
|
Google Oneindia Kannada News

ಮೈಸೂರು, ಸೆಪ್ಟೆಂಬರ್ 08: ಮೈಸೂರು ರಾಜಮನೆತನಕ್ಕೆ ಸರ್ಕಾರ ಗೌರವ ಧನ ನೀಡುತ್ತಾ ಬಂದಿರುವುದು ಹಲವು ವರ್ಷಗಳಿಂದಲೂ ನಡೆದು ಬರುತ್ತಿರುವ ಸಂಗತಿ ಆದರೆ ಇದು ಗೊತ್ತಿರುವುದು ಕೆಲವು ಜನಕ್ಕಷ್ಟೆ.

ಆರ್‌ಟಿಐ ಮಾಹಿತಿಯಿಂದ ಬಹಿರಂಗವಾಗಿರುವ ಹೊಸ ವಿಷಯವೆಂದರೆ ಸರ್ಕಾರವು ಕಳೆದ ಐದು ವರ್ಷದಲ್ಲಿ ಗೌರವ ಧನವಾಗಿ ರಾಜಮನೆತನಕ್ಕೆ ಬರೋಬ್ಬರಿ 1.36 ಕೋಟಿ ರೂ ನೀಡಿದೆ.

ದಸರೆಯಲ್ಲಿ ಭಾಗವಹಿಸುವ ಮೊದಲ ತಂಡದ ಆನೆಗಳ ಸಂಪೂರ್ಣ ವಿವರ ದಸರೆಯಲ್ಲಿ ಭಾಗವಹಿಸುವ ಮೊದಲ ತಂಡದ ಆನೆಗಳ ಸಂಪೂರ್ಣ ವಿವರ

ಫ್ರೊ.ನಂಜರಾಜು ಅವರು ಈ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆಯ ಅಡಿ ಅರ್ಜಿ ಸಲ್ಲಿಸಿ ಮಾಹಿತಿ ಹೊರತೆಗೆದಿದ್ದಾರೆ. ಜೊತೆಗೆ ಸರ್ಕಾರ ನೀಡುತ್ತಿರುವ ಗೌರವ ಧನವನ್ನು ಈಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

Government giving honorable money to Mysuru prince family

ರಾಜ್ಯದ ಅಭಿವೃದ್ಧಿಗೆ ಸ್ವತಂತ್ರ್ಯ ಪೂರ್ವದಲ್ಲೇ ಬುನಾದಿ ಹಾಕಿಕೊಟ್ಟ ಮೈಸೂರು ಅರಸರ ಮನೆತನದ ಬಗ್ಗೆ ರಾಜ್ಯದ ಜನರಿಗೆ ಗೌರವ ಆಧರ ಆದರೆ ಸರ್ಕಾರ ಆ ಮನೆತನಕ್ಕೆ ಗೌರವ ಧನ ಕೊಡುವುದು ಎಷ್ಟು ಸರಿ. ರಾಜಮನೆತನಕ್ಕೆ ಸರ್ಕಾರದ ಗೌರವ ಧನ ಪಡೆದುಕೊಳ್ಳುವ ಅವಶ್ಯಕತೆ ಆದರೂ ಏನು ಎಂಬ ಚರ್ಚೆ ಈಗ ಚಾಲ್ತಿಗೆ ಬಂದಿದೆ.

ಅರಮನೆ ಅಂಗಳಕ್ಕೆ ಹೆಜ್ಜೆ ಹಾಕಿದ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ಅರಮನೆ ಅಂಗಳಕ್ಕೆ ಹೆಜ್ಜೆ ಹಾಕಿದ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ

ದಸರಾ ಆಚರಿಸಲು ಕೋಟ್ಯಂತರ ಅನುದಾನ ನೀಡುವ ಜೊತೆಗೆ ಉಳ್ಳವರಾದ ರಾಜಮನೆತನಕ್ಕೆ ಗೌರವ ಧನ ನೀಡುವ ಅವಶ್ಯಕತೆ ಏನಿದೆ? ಅದೇ ಹಣವನ್ನು ಕೊಡಗಿನ ಸಂತ್ರಸ್ತರಿಗೆ ನೀಡಬೇಕು ಎಂದು ಫ್ರೊ.ನಂಜರಾಜು ಅರಸು ಅವರು ಒತ್ತಾಯಿಸಿದ್ದಾರೆ.

English summary
Karnataka government giving money as honor to Mysuru kings family. It already given 1.36 crore from past 5 years as honorable money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X