ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಎಸ್‌ಓಯು ಅಂಕಪಟ್ಟಿಗೆ ಮಾನ್ಯತೆ ನೀಡಿದ ಸರ್ಕಾರ

By Manjunatha
|
Google Oneindia Kannada News

ಮೈಸೂರು, ಮಾರ್ಚ್‌ 06: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ನೆಮ್ಮದಿ ನೀಡಿದೆ. ಮುಕ್ತವಿವಿಯ ಯುಜಿಸಿ ಮಾನ್ಯತೆ ರದ್ದಾಗುವ ಮುಂಚೆ ತಾಂತ್ರಿಕೇತರ ಕೋರ್ಸ್‌ನ ಅಂಕಪಟ್ಟಿಗೆ ಸರ್ಕಾರ ಮಾನ್ಯತೆ ನೀಡಲಿದೆ.

2013-14, 2014-15ನೇ ಸಾಲಿನಲ್ಲಿ ಪ್ರವೇಶಾತಿ ಪಡೆದು ತೇರ್ಗಡೆಯಾದವರಿಗೂ ಇದು ಅನ್ವಯಿಸುತ್ತದೆ. ಆದರೆ ಈ ಆದೇಶ ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಯಾಗುತ್ತದೆ. 2013-14,2014-15 ನೇ ಸಾಲಿನಲ್ಲಿ ಪ್ರವೇಶ ಪಡೆದವರು ಹಾಗೂ ಅದಕ್ಕೂ ಮುಂಚೆ ಪ್ರವೇಶ ಪಡೆದವರ ಅಂಕಪಟ್ಟಿಯನ್ನು ವ್ಯಾಸಾಂಗ, ನೇಮಕಾತಿ, ಬಡ್ತಿಗಾಗಿ ಪರಿಗಣಿಸುವಂತೆ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

90 ಸಾವಿರ ಮುಕ್ತ ವಿವಿ ಪದವೀಧರರು ನಿರಾಳ!90 ಸಾವಿರ ಮುಕ್ತ ವಿವಿ ಪದವೀಧರರು ನಿರಾಳ!

2013 ಕ್ಕೂ ಮುಂಚೆ ಉತ್ತೀರ್ಣರಾಗಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರಗಳನ್ನು ಡೆಯದೇ ಇರುವ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ, ಅಂಕಪಟ್ಟಿ ವಿತರಿಸಬೇಕು ಎಂದು ಕರ್ನಾಟಕ ಮುಕ್ತ ವಿವಿಗೆ ಉನ್ನತ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

Government gives accredited to KSOU marks cards

ತಾಂತ್ರಿಕೇತರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿದ್ದ, ಅಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೂ ವ್ಯಾಸಂಗ ಮುಂದುವರಿಸಲು ಹಾಗೂ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಹೇಳಿದೆ.

English summary
State Government gives accredited to 2013-14, 2014-15 and KSOU students non technical course marks cards. It said it can be used to higher studies, Jobs, promotions etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X