ಮಾರಕ ರೋಗಗಳ ತಡೆಗೆ ಸಸ್ಯ ತಂತ್ರಜ್ಞಾನ

By: ಯಶಸ್ವಿನಿ ಎಂ.ಕೆ
Subscribe to Oneindia Kannada
ಮೈಸೂರು, ಫೆಬ್ರವರಿ 17: ಇತ್ತೀಚೆಗೆ ಹೆಚ್ಚು ಜನರನ್ನು ಕಾಡುತ್ತಿರುವ ಹಾಗೂ ಬೇಸಿಗೆ ಸಂದರ್ಭದಲ್ಲಿ ಬರುವ ಮಾರಕ ಕಾಯಿಲೆಗಳಾದ ಡೆಂಘೀ ಮತ್ತು ಚಿಕನ್ ಗುನ್ಯಾ ಹರಡುವ ಸೊಳ್ಳೆಗಳ ನಿಯಂತ್ರಣಕ್ಕೆ ಸೊಳ್ಳೆ ನಿವಾರಕ ಸಸ್ಯಗಳನ್ನು ಬೆಳೆಸಲು ಸರಕಾರ ಮುಂದಾಗಿದೆ.

ಜನರಿಗೆ ಮಾರಣಾಂತಿಕವಾಗಿ ಆತಂಕವನ್ನುಂಟುಮಾಡುತ್ತಿರುವ ಡೆಂಘೀ ಮತ್ತು ಚಿಕನ್ ಗುನ್ಯ ಕಾಯಿಲೆ ತಡೆಗಟ್ಟುವ ಸುಲವಾಗಿ ಸಸ್ಯಗಳನ್ನು ಬೆಳೆಸಲು ಕ್ರಮಕೈಗೊಳ್ಳುವಂತೆ ಈಗಾಗಲೆ ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ಇಲಾಖೆಗಳನ್ನು ಸರಕಾರ ತಿಳಿಸಿದೆ.

ಇತ್ತೀಚೆಗೆ ವಿಧಾನಸಭೆಯಲ್ಲಿ ನಡೆದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವ್ಯಾಪಕ ಚರ್ಚೆ ನಡೆಸಿದೆ.

mosquito

ಈ ಹಿನ್ನೆಲೆ ರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯ ದರ್ಶಿಗಳಾದ ಡಾ.ಶಾಲಿನಿ ರಜನೀಶ್ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸೊಳ್ಳೆ ನಿವಾರಕ ಸಸ್ಯಗಳನ್ನು ಬೆಳೆಸಲು ಕ್ರಮ ಕೈಗೊಳ್ಳುವಂತೆ ಹಾಗು ಜಿಲ್ಲೆಯ ಎಲ್ಲ ಗ್ರಾಮ, ಕುಟುಂಬಗಳಿಗೂ ಸಸ್ಯ ಸರಬರಾಜು ಮಾಡುವಂತೆ ತಿಳಿಸಿದ್ದಾರೆ.

mosquito controled plant

ಸೊಳ್ಳೆ ನಿವಾರಕ ಸಸ್ಯಗಳು
ಲೆಮನ್ ಬ್ಲಾಮ್, ಮಾರಿಗೋಲ್ಡ್, ಕ್ಯಾಟ್ನಿಪ್, ಸಿತ್ರೊನೆಲ್ಲಾ ಗ್ರಾಸ್, ಬಸಿಲ್, ರೋಸಮೇರಿ, ಥೆಮಿ, ಯುಕ್ಲೈಪಿಟಸ್, ಲ್ಯಾವೆಂಡರ್, ಪೆಪ್ಪರ್‌ಮಿಂಟ್‌, ಗಾರ್ಲಿಕ್, ಟೀ ಟ್ರಿ, ಗೆರಾನಿಯಮ್, ಲಂಟಾನ ಹಾಗೂ ಲೆಮನ್ ಗ್ರಾಸ್ ಗಳನ್ನು ಬೆಳೆಯುವುದರಿಂದ ಸೊಳ್ಳೆಗಳನ್ನು ನಿಯಂತ್ರಿಸಬಹುದು ಎಂದು ಹೇಳಲಾಗಿದೆ.

ಈ ಸಸ್ಯಗಳ ಪಟ್ಟಿ ಜೊತೆಗೆ ಸೊಳ್ಳೆ ಮತ್ತು ಹಾರುವ ಕೀಟಗಳ ನಿವಾರಕ ಸಸ್ಯಗಳ ಪಟ್ಟಿಯನ್ನು ಕೊಟ್ಟಿದ್ದಾರೆ. ಡಾ.ಶಾಲಿನಿ ರಜನೀಶ್ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
State government Action to control dengours cases Chikungunya and Dengue to Grown up mosquito controled plant in every village and family.
Please Wait while comments are loading...