ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರಮಹಾಲಕ್ಷ್ಮೀ ಹಬ್ಬ: ಕೇವಲ 4,500ರೂ.ಗೆ ಮೈಸೂರು ಸಿಲ್ಕ್ ಸೀರೆ

By Nayana
|
Google Oneindia Kannada News

ಮೈಸೂರು, ಜೂನ್‌ 30: ವರಮಹಾಲಕ್ಷ್ಮೀ ಹಬ್ಬಕ್ಕಾಗಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಬಂಪರ್‌ ಕೊಡುಗೆಯನ್ನು ನೀಡುತ್ತಿದೆ. ಕೇವಲ 4500 ರೂ.ಗಳಿಗೆ ಮೈಸೂರು ಸಿಲ್ಕ್ ಸೀರೆಯನ್ನು ಪಡೆಯಬಹುದಾಗಿದೆ.

ರೇಷ್ಮೆ ಸಚಿವ ಸಾ.ರಾ. ಮಹೇಶ್‌ ಈ ವಿಚಾರವನ್ನು ತಿಳಿಸಿದ್ದಾರೆ. ನಿಗಮದ ಸೀರೆಗಳು ಈಗ 10 ಸಾವಿರದಿಂದ 3 ಲಕ್ಷದವರೆಗೂ ಲಭ್ಯವಿದೆ. ಮಧ್ಯಮ ವರ್ಗದವರಿಗೆ ಕಡಿಮೆ ಬೆಲೆಯಲ್ಲಿ ಸೀರೆ ನೀಡಬೇಕು ಎನ್ನುವ ಉದ್ದೇಶದಿಂದ ವರಮಹಾಲಕ್ಷ್ಮೀ ಹಬ್ಬದಿಂದ ಈ ಕೊಡುಗೆ ನೀಡಲಾಗುವುದು ಬೇಡಿಕೆ ಇರುವರೆಗೂ ಇದು ಮುಂದುವರೆಯಲಿದೆ ಎಂದರು.

ಮಹಿಳೆಯರಿಗೆ ರೇಷ್ಮೆ ಸೀರೆ ಭಾಗ್ಯ ಯೋಜನೆಗೆ ಸರ್ಕಾರ ಚಿಂತನೆಮಹಿಳೆಯರಿಗೆ ರೇಷ್ಮೆ ಸೀರೆ ಭಾಗ್ಯ ಯೋಜನೆಗೆ ಸರ್ಕಾರ ಚಿಂತನೆ

ಮೈಸೂರಿನ ಹೆಗ್ಗುರುತು ಮೈಸೂರು ಸಿಲ್ಕ್ಸ್‌ಗೆ ಪೇಟೆಂಟ್‌ ಇರುವುದರಿಂದ ಇತರರು ಇದನ್ನು ತಯಾರಿಸಿ ಮಾರಾಟ ಮಾಡುವಂತಿಲ್ಲ, ಸರ್ಕಾರಿ ಸ್ವಾಮ್ಯದ ಮೈಸೂರು ರೇಷ್ಮೆ ನೇಯ್ಗೆ ಕಾರ್ಖಾನೆಯಿಂದ ಮಾತ್ರ ಮೈಸೂರು ಸಿಲ್ಕ್ ಉತ್ಪನ್ನವಾಗುತ್ತಿದ್ದು, ಅನಧಿಕೃತವಾಗಿ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಜಾಗೃತ ದಳ ರಚಿಸಲಾಗಿದೆ. ಎಂದು ಮಹೇಶ್‌ ತಿಳಿಸಿದ್ದಾರೆ.

Good news for women: Silk saree at Rs.4,500 for this Varamahalaxmi festival

ಪ್ರವಾಸಿ ತಾಣಗಳಲ್ಲಿ ಕೆಎಸ್‌ಐಸಿ ಮಳಿಗೆ ತೆರೆದು ಸೀರೆ ಮಾರಾಟ ಮಾಡಲಾಗುವುದು. ಮೈಸೂರು ರೇಷ್ಮೆ ನೇಯ್ಗೆ ಕಾರ್ಖಾನೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು, ಮೈಸೂರಿನಲ್ಲೂ ರೇಷ್ಮೆ ಗೂಡು ಮಾರುಕಟ್ಟೆ ತೆರೆಯಲು ಚಿಂತನೆ ನಡೆಸಲಾಗಿದೆ ಎಂದರು.

English summary
Karnataka Sericulture Industries Corporation has announced a bumper gift offer for women as a silk saree at Rs. 4,500 only on this Varamahalaxmi festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X