• search

ಗಮನ ಬೇರೆಡೆ ಸೆಳೆದು 'ಮಲಬಾರ್‌ ಗೋಲ್ಡ್' ನಲ್ಲಿ ಚಿನ್ನ ಲಪಟಾಯಿಸಿದ ಚೋರ

By Yashaswini
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಮೈಸೂರು, ಜುಲೈ 6 : ಚಿನ್ನಾಭರಣ ಖರೀದಿ ನೆಪದಲ್ಲಿ ಮಲಬಾರ್ ಗೋಲ್ಡ್ ಮಾರಾಟ ಮಳಿಗೆಗೆ ಬಂದ ದುಷ್ಕರ್ಮಿಯೊಬ್ಬ ಅಲ್ಲಿನ ಸಿಬ್ಬಂದಿಯ ಗಮನ ಬೇರೆಡೆ ಸೆಳೆಯುವ ಮೂಲಕ 49 ಸಾವಿರ ರೂ. ಮೌಲ್ಯದ 16.264 ಗ್ರಾಂ ತೂಕದ ನೆಕ್‌ಲೆಸ್‌ ಅನ್ನು ಕಳವು ಮಾಡಿರುವ ಘಟನೆ ನಡೆದಿದೆ.

    ಜೂ.27ರಂದು ನಗರದ ಬಿಎನ್ ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಮಾರಾಟ ಮಳಿಗೆಗೆ ಚಿನ್ನಾಭರಣ ಖರೀದಿ ನೆಪದಲ್ಲಿ ವ್ಯಕ್ತಿಯೊಬ್ಬ ಬಂದು ನೆಕ್ಲೇಸ್ ಬೇಕೆಂದು ಹೇಳಿದ್ದಾನೆ. ಇದೇ ವೇಳೆ ಅಲ್ಲಿನ ಸಿಬ್ಬಂದಿ ಬೇರೆಯವರಿಗೆ ಆಭರಣಗಳನ್ನು ತೋರಿಸುತ್ತಿದ್ದರು. ಇದೇ ಸಮಯವನ್ನು ಬಳಸಿಕೊಂಡ ಆತ, ಚಿನ್ನದ ಕೌಂಟರ್ ಒಳಗೆ ಕೈ ಹಾಕಿ ನೆಕ್ಲೇಸ್‍ಅನ್ನು ಕಳ್ಳತನ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

    Gold theft in Mysuru malbar gold

    ಜುಲೈ 3 ರಂದು ಚಿನ್ನದ ಸರಗಳನ್ನ ಲೆಕ್ಕಹಾಕುವಾಗ ವ್ಯತ್ಯಾಸ ಬಂದ ಹಿನ್ನೆಲೆ ಸಿಸಿಟಿವಿಯನ್ನು ಪರಿಶೀಲಿಸಿದಾಗ ಕೃತ್ಯ ಗೊತ್ತಾಗಿದೆ. ಈ ಸಂಬಂಧ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಹಾಯಕ ಮ್ಯಾನೇಜರ್ ಇರ್ಷದ್‌ ಲಷ್ಕರ್​​ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದರು. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    a thief who went to the Malabar Gold store stole 16.264 gram worth gold necklace in Mysuru. the theft scene has been recorded in CCTV camera.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more