ಮೈಸೂರು, ನನ್ನ ಹೆಂಡತಿಯಿಂದ ನ್ಯಾಯ ದೊರಕಿಸಿ ಕೊಡಿ?

By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಜನವರಿ 6: ತನ್ನ ಹೆಂಡತಿ ಹಾಗೂ ಆಕೆಯ ಪ್ರಿಯಕರ ಬಿಜೆಪಿ ರಾಜ್ಯ ಪರಿಷತ್ ಸದಸ್ಯ ನಿಂದಲೇ ನನಗೆ ಕೊಲೆ ಬೆದರಿಕೆ ಇದೆ. ದಯವಿಟ್ಟು ನನಗೆ ನ್ಯಾಯ ದೊರಕಿಸಿಕೊಡಿ ಎಂದು ನಂಜನಗೂಡಿನ ನಿವಾಸಿ ನೀರಾವರಿ ಇಲಾಖೆಯ ನೌಕರ ಅಂಗಲಾಚಿರುವ ಘಟನೆ ಜರುಗಿದೆ.

ಹೆಂಡತಿ ಹಾಗೂ ಪ್ರಿಯಕರನಿಂದ ಕೊಲೆ ಬೆದರಿಕೆ ಹಾಗೂ ಕಿರುಕುಳಕ್ಕೆ ಒಳಗಾದವ ವ್ಯಕ್ತಿ ರವಿ. 12 ವರ್ಷಗಳ ಹಿಂದೆ ಕಪ್ಪು ಸೊಗೆ ಗ್ರಾಮದ ಮೀನಾಕ್ಷಿ(ಹೆಸರು ಬದಲಾಯಿಸಲಾಗಿದೆ) ಎಂಬುವರೊಂದಿಗೆ ರವಿಗೆ ಮದುವೆಯಾಗಿತ್ತು. 8 ವರ್ಷ ಅನ್ಯೋನ್ಯವಾಗಿ ಸಂಸಾರ ನಡೆಸಿದ್ದು, ಈಗ ಇವರಿಗೆ 11 ವರ್ಷದ ಮಗನಿದ್ದಾನೆ. ಅದರೆ ಏಕೋ ಸಂಸಾರದಲ್ಲಿ ತಾಳ ತಪ್ಪಿದಂತಿದೆ.[ಪತ್ನಿಯನ್ನು ಕಿಡ್ನಾಪ್ ಮಾಡಿದ ಮಾಜಿ ಪ್ರಿಯಕರ!]

Give justice to my wife: requested the employee of Department of Irrigation

ಆದರೆ ಈಕೆ ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಸಿ.ರವೀಂದ್ರ ಎಂಬುದದವರ ಜೊತೆ ಅನ್ಯೋನ್ಯವಾಗಿದ್ದು, ಗಂಡ ರವಿಗೆ ತನ್ನ ಪ್ರಿಯಕರನೊಂದಿಗೆ ಸೇರಿ ಕಿರುಕುಳ ನೀಡುತ್ತಾಳೆಂಬುದು ರವಿ ಆರೋಪ. ಸಿ. ರವೀಂದ್ರ ತನ್ನ ಹೆಂಡತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ. ಅಷ್ಟೇ ಅಲ್ಲದೇ ತನಗೆ ಕಿರುಕುಳ ನೀಡುತ್ತಿದ್ದಾರೆ. ಅವರನ್ನು ಭಾರತೀಯ ಜನತಾ ಪಾರ್ಟಿಯಿಂದ ತಕ್ಷಣ ವಜಾಗೊಳಿಸಿ ಎಂದು ಒತ್ತಾಯಿಸಿದ್ದಾರೆ.[ಉಂಡು ಹೋದ, ಕೊಂಡು ಹೋದ.. ಬಿಟ್ಟೂ ಹೋದ]

ಈ ಬಗ್ಗೆ ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ಮಾಡಿದರೂ ಸಮಸ್ಯೆ ಬಗೆ ಹರಿದಿಲ್ಲ. ಡೈವೋರ್ಸ್ ನೀಡು ಎಂದು ಕೇಳಿದರೆ ಡೈವೋರ್ಸ್ ನೀಡುವುದಿಲ್ಲ ಎನ್ನುತ್ತಾಳೆ. ಜೊತೆಗೆ ಹಲವಾರು ಬಾರಿ ಪ್ರಿಯಕರನ ಜೊತೆ ಸೇರಿ ನನ್ನನ್ನ ಕೊಲೆ ಮಾಡಲು ಯತ್ನಿಸಿದ್ದಾಳೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮನವಿ ಸಲ್ಲಿಸಿದರೂ ದೂರು ದಾಖಲಿಸಿಲ್ಲ ಎಂದು ರವಿ ತಮ್ಮ ಅಸಹಾಯಕತೆ ತೋಡಿಕೊಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Give me access to justice for my wife, The employee requested that the Department of Irrigation in nanganagudu, mysuru.
Please Wait while comments are loading...