ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುತ್ತೂರು ಶ್ರೀಗಳ ಆಶಿರ್ವಾದ ಪಡೆದ ಗಂಗಾಂಬಿಕೆ ಬೆಂಗಳೂರಿಗರ ಬಗ್ಗೆ ಹೇಳಿದ್ದು ಹೀಗೆ..

|
Google Oneindia Kannada News

ಮೈಸೂರು, ಸೆಪ್ಟೆಂಬರ್.30:ಸ್ವಚ್ಛ ಬೆಂಗಳೂರಿಗೆ ನಾನು ಮೊದಲ ಆದ್ಯತೆ ನೀಡುತ್ತೇನೆ ಎಂದು ಬಿಬಿಎಂಪಿ ನೂತನ ಮೇಯರ್ ಗಂಗಾಂಬಿಕೆ ಹೇಳಿದರು.

ಮೇಯರ್ ಆದ ಬಳಿಕ ಮೊದಲ ಬಾರಿಗೆ ಸುತ್ತೂರು ಶ್ರೀಗಳ ಆಶಿರ್ವಾದ ಪಡೆದ ಗಂಗಾಂಬಿಕೆ ನಂತರ ಮಾಧ್ಯಮಗಳ ಜೊತೆ ಮಾತನಾಡಿ, ಬೆಂಗಳೂರಿಗರಿಗೆ ಮೂಲಭೂತ ಸೌಕರ್ಯಗಳನ್ನ ಕೊಟ್ಟರೆ ಸಾಕು. ಹೆಚ್ಚೇನು ನಮ್ಮ ಕಡೆಯಿಂದ ಅಪೇಕ್ಷೆ ಪಡೋದಿಲ್ಲ.

ಬಿಬಿಎಂಪಿ ನೂತನ ಮೇಯರ್ ಗಂಗಾಂಬಿಕೆ ಸಂಕ್ಷಿಪ್ತ ವ್ಯಕ್ತಿ ಚಿತ್ರಣಬಿಬಿಎಂಪಿ ನೂತನ ಮೇಯರ್ ಗಂಗಾಂಬಿಕೆ ಸಂಕ್ಷಿಪ್ತ ವ್ಯಕ್ತಿ ಚಿತ್ರಣ

ಮಳೆಗಾಲದಲ್ಲಿ ಬೆಂಗಳೂರಿನಲ್ಲಾಗುವ ಸಮಸ್ಯೆಗಳ ಕುರಿತು ಸೂಕ್ತ ಕ್ರಮಕೈಗೊಳ್ಳುತ್ತೇನೆ. ಕಾಲುವೆಗಳಲ್ಲಿ ಹೂಳು ತುಂಬಿಕೊಳ್ಳುವುದರಿಂದ ಸಮಸ್ಯೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಗಳಾಗದಂತೆ ಮುಂಚಿತವಾಗಿಯೇ ಗಮನ ಹರಿಸುತ್ತೇವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Gangambike Mallikarjun said My first preference is swachh bangalore

ನಾನು ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಿದ್ದು, ಒಂದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತೇನೆ. ಮೈಸೂರು ಮೇಯರ್ ಆಯ್ಕೆ ವಿಚಾರದ ಬಗ್ಗೆ ನನಗೇನೂ ಗೊತ್ತಿಲ್ಲ.
ಪಕ್ಷದ ವರಿಷ್ಠರು ಆ ಬಗ್ಗೆ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ನೂತನ ಮೇಯರ್ ಗಂಗಾಂಬಿಕೆ ಎದುರಿಸಬೇಕಾದ ಸವಾಲುಗಳಿವು!ನೂತನ ಮೇಯರ್ ಗಂಗಾಂಬಿಕೆ ಎದುರಿಸಬೇಕಾದ ಸವಾಲುಗಳಿವು!

ಬಿಬಿಎಂಪಿ ಮೇಯರ್, ಉಪಮೇಯರ್ ಪಟ್ಟವನ್ನು ಮತ್ತೆ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, 130 ಮತಗಳನ್ನು ಪಡೆಯುವ ಮೂಲಕ ಮೇಯರ್ ಆಗಿ ಕಾಂಗ್ರೆಸ್ಸಿನ ಗಂಗಾಬಿಕಾ ಶುಕ್ರವಾರ ಆಯ್ಕೆಯಾದರು. ಉಪಮೇಯರ್ ಆಗಿ ಜೆಡಿಎಸ್ ನ ರಮೀಳಾ ಆಯ್ಕೆಯಾಗಿದ್ದಾರೆ.

English summary
New Bengaluru Mayor Congress's Gangambike Mallikarjun said My first preference is swachh bangalore. Basic facilities should be given to Bangaloreans. Most of us do not expect from our side.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X