ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಹೆಚ್ಚಾಗುತ್ತಿದೆ ಮಹಿಳೆಯರ ರೌಡಿಸಂ ದರ್ಪ

By Yashaswini
|
Google Oneindia Kannada News

ಮೈಸೂರು, ನವೆಂಬರ್ 29 : ಪ್ರಶಾಂತ ನಗರಿ ಮೈಸೂರಿನಲ್ಲಿ ಮಹಿಳಾ ರೌಡಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಾಡು ಹಗಲೆ ಮನೆಗಳಿಗೆ ನುಗ್ಗುವ ಈ ಮಹಿಳಾ ರೌಡಿಗಳು ಸಿಕ್ಕದ್ದನ್ನು ದೋಚುತ್ತಿದ್ದಾರೆ.

ಇತ್ತಿಚೆಗೆ ನಗರದ ಪೆನ್ಷನರ್ ಪ್ಯಾರಡೈಸ್ ಹಗಲಿನಲ್ಲೇ ಬೀಗ ಒಡೆದು ಕಳ್ಳರು ಮನೆ ಪ್ರವೇಶಿಸಿ ಮನೆ ದೋಚಿದ್ದರು. ಸಾಲ ಕೊಡೋದಾಗಿ ನಂಬಿಸಿ, ಸಾಲದ ಪತ್ರಕ್ಕೆ ಬಲವಂತ ಸಹಿ ಹಾಕಿಸಿ ಮೋಸ ಮಾಡಿದ್ದಾರೆ.ಇದು ಮಹಿಳೆಯೊಬ್ಬಾಕೆ ನಾಯಕಿಯಾಗಿರುವ ಕಳ್ಳರ ಗುಂಪಿನ ಕೃತ್ಯ. ಅಮಾಯಕರು ಸಿಕ್ಕರೆ ಅವರ ಆಸ್ತಿ ಲಪಟಾಯಿಸಲು ಹೊಂಚು ಹಾಕೋ ಗ್ಯಾಂಗ್ ಇದು. ಕೆಂಪಮ್ಮಣ್ಣಿಯೇ ಎಂಬ ಮಹಿಳೆಯೇ ಈ ಗ್ಯಾಂಗ್'ನ ಲೀಡರ್.

Gang of thieves finds new way of cheating people

ಮೈಸೂರಿನ ಬೆಮೆಲ್ ನಗರದಲ್ಲಿ ಮಹಿಳಾ ರೌಡಿಸಂ ತಲೆ ಎತ್ತಿದ್ದು ಕೆಂಪಮ್ಮಣ್ಣಿ ಎಂಬಾಕೆ ಈ ಗ್ಯಾಂಗ್ ನ ಲೀಡರ್ ಆಗಿದ್ದಾಳೆ. ಅಮಾಯಕರು ಸಿಕ್ಕರೆ ಸಾಕು ಅವರ ಆಸ್ತಿ ಲಪಟಾಯಿಸಲು ಈ ಗ್ಯಾಂಗ್ ಹೊಂಚು ಹಾಕುತ್ತಿದೆ. ಗುರುಮಲ್ಲೇಶ್ ಮತ್ತು ಜ್ಯೋತಿ ದಂಪತಿಗೂ ಇದೇ ರೀತಿ ಮೋಸ ಮಾಡಿದ್ದಾರೆನ್ನಲಾಗಿದೆ. ಸಾಲ ಕೊಡೋದಾಗಿ ನಂಬಿಸಿ, ಸಾಲದ ಪತ್ರಕ್ಕೆ ಬಲವಂತ ಸಹಿ ಹಾಕಿಸಿದ ಗ್ಯಾಂಗ್, ದಂಪತಿ ಮನೆಯಲ್ಲಿ ಇಲ್ಲದಿದ್ದಾಗ 8 ಮಂದಿ ಬಂದು ಮನೆ ಅತಿಕ್ರಮಣ ಮಾಡಿದ್ದಾರೆನ್ನಲಾಗಿದೆ. ಮನೆಯ ಬೀಗ ಒಡೆಯುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

Gang of thieves finds new way of cheating people

ಅದನ್ನು ಪ್ರಶ್ನಿಸಿದ ಜ್ಯೋತಿ ಗಂಡ ಗುರುಮಲ್ಲೇಶ್ ಮೇಲೆ ಕೆಂಪಮಣ್ಣಿ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ.
ಕುವೆಂಪುನಗರ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲವೆನ್ನಲಾಗಿದೆ. ಒಂದೆಡೆ ಜ್ಯೋತಿ, ಗುರುಮಲ್ಲೇಶ್ ದಂಪತಿ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರಾದರೆ, ಇನ್ನೊಂದೆಡೆ ಕೆಂಪಮ್ಮಣಿ ಗ್ಯಾಂಗ್'ಗೆ ಪೊಲೀಸರದ್ದೇ ರಕ್ಷಣೆ ಇದೆ ಎಂಬ ಆರೋಪವೂ ಕೇಳಿ ಬಂದಿದೆ.

English summary
Thieves are entering houses here in the city even during day time on some pretext or the other. They are meeting people on the pretext of getting them bank loans. The gang is active in BEML Nagar. One Kempammanni leads the women’s team.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X