ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರವಾಹ ಪೀಡಿತರಿಗೆ ಗಣಪತಿ ಸಚ್ಚಿದಾನಂದ ಆಶ್ರಮದಿಂದ 10 ಲಕ್ಷ ದೇಣಿಗೆ

By Yashaswini
|
Google Oneindia Kannada News

ಮೈಸೂರು, ಆಗಸ್ಟ್ 24 : ಕೊಡಗು ಪ್ರವಾಹ ಪೀಡಿತರ ನೆರವಿಗೆ ಗಣಪತಿ ಸಚ್ಚಿದಾನಂದ ಆಶ್ರಮದಿಂದ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಲಾಯಿತು.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಗಣಪತಿ ಸಚ್ಚಿದಾನಂದ ಅವಧೂತ ದತ್ತ ಪೀಠ ಟ್ರಸ್ಟ್ ನಿಂದ 5 ಲಕ್ಷ ರೂ. ಮತ್ತು ಮಂಗಳಾರತಿ, ಪೂಜೆಗಳಿಂದ ಸಂಗ್ರಹವಾದ 5 ಲಕ್ಷ ರೂ. ಸೇರಿ ಒಟ್ಟು 10 ಲಕ್ಷ ರೂ.ಗಳನ್ನು ನೀಡಲಾಗಿದೆ.

1 ತಿಂಗಳ ಸಂಬಳ ಸಿಎಂ ಪರಿಹಾರ ನಿಧಿಗೆ ಕೊಟ್ಟ ಬಿಜೆಪಿ ಶಾಸಕರು1 ತಿಂಗಳ ಸಂಬಳ ಸಿಎಂ ಪರಿಹಾರ ನಿಧಿಗೆ ಕೊಟ್ಟ ಬಿಜೆಪಿ ಶಾಸಕರು

ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರಿಗೆ ಪರಿಹಾರದ ಚೆಕ್ ನೀಡಿದರು. ಈ ವೇಳೆ ಮಾತನಾಡಿದ ಶ್ರೀಗಳು, ಇತ್ತೀಚಿನ ದಿನಗಳಲ್ಲಿ ಭೂಮಿ ಅಪಾಯದಲ್ಲಿದೆ.

Ganapati Sachidananda Ashram donates Rs.10 lakh to flood victims

ಭೂಕಂಪ, ಸುನಾಮಿ, ಪ್ರವಾಹ, ಅತಿವೃಷ್ಟಿಗಳಿಂದ ಮನುಕುಲ ತತ್ತರಿಸುತ್ತಿದೆ. ಕೊಡಗಿನಲ್ಲಿ ಅತಿವೃಷ್ಟಿಗೆ ಅಪಾರ ಬೆಳೆನಷ್ಟ, ಪ್ರಾಣ ನಷ್ಟವಾಗಿದೆ. ಎಲ್ಲಾ ನಾಗರಿಕರು ಕೊಡಗಿನ ಜನತೆಯ ಪರವಾಗಿ ನಿಲ್ಲುವುದು ಅವಶ್ಯವಾಗಿದೆ ಎಂದರು.

ಕೇರಳಕ್ಕೊಂದು ಕರ್ನಾಟಕಕ್ಕೊಂದು ನೀತಿ: ಕೇಂದ್ರದ ವಿರುದ್ಧ ಪರಂ ಆಕ್ರೋಶಕೇರಳಕ್ಕೊಂದು ಕರ್ನಾಟಕಕ್ಕೊಂದು ನೀತಿ: ಕೇಂದ್ರದ ವಿರುದ್ಧ ಪರಂ ಆಕ್ರೋಶ

ಮುಂದುವರೆದು ಮಾತನಾಡಿದ ಅವರು, ಕೊಡಗು ಜಿಲ್ಲೆ ಮೊದಲಿನಂತೆ ಸಮೃದ್ಧಿಯಾಗಿ ಬೆಳೆಯಲಿ. ಕೊಡಗಿನ ಅಭಿವೃದ್ಧಿಗೆ ಕೈ ಜೋಡಿಸುತ್ತಿರುವುದು ಭಾತೃತ್ವದ ಸಂಕೇತವನ್ನು ಸಾರುತ್ತಿದೆ ಎಂದರು.

English summary
Rs 10 lakh donations were paid to the Chief Ministers' relief fund from Ganapati Sachidananda Ashram to Kodagu flood victims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X