ಗಣಪತಿ ತಾಯಿ ಗೌರಿ ಅಲ್ಲ, ದಾಕ್ಷಾಯಿಣಿ: ನಿಡುಮಾಮಿಡಿ ಶ್ರೀ ವ್ಯಾಖ್ಯಾನ

Posted By:
Subscribe to Oneindia Kannada

ಮೈಸೂರು, ಅಕ್ಟೋಬರ್ 21 : ವಿಘ್ನ ನಿವಾರಕ ಗಣಪತಿಯು ಪಾರ್ವತಿ ದೇವಿಯ ಮಗನೇ ಅಲ್ಲ. ಗಣಪತಿ ಶಿವನ ಮೊದಲನೇ ಪತ್ನಿ ದಾಕ್ಷಾಯಿಣಿಯ ಮಗ ಎಂದು ನಿಡುಮಾಮಿಡಿ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ.

ಮೈಸೂರಿನ ಪುರಭವನದಲ್ಲಿ ಮೂಲ ಸಂಸ್ಕೃತಿ ಗಳ ಸಂಘಟನೆಗಳಿಂದ ಬಲಿಚಕ್ರವರ್ತಿ ಸ್ಮರಣೋತ್ಸವ ನಡೆಯಿತು. ಈ ವೇಳೆ ಮಾತನಾಡಿದ ಅವರು, ಆರ್ಯ ಮತ್ತು ದ್ರಾವಿಡರ ನಡುವಿನ ಸಂಘರ್ಷ ತಪ್ಪಿಸಲು ಶಿವನು ಆರ್ಯರ ರಾಜ ದಕ್ಷಬ್ರಹ್ಮನ ಮಗಳು ದಾಕ್ಷಾಯಿಣಿಯನ್ನು ಮದುವೆ ಆಗಿದ್ದ. ಆ ದಂಪತಿ ಮಗನೇ ಗಣಪತಿ ಅಂತ ಹೇಳಿದರು.

ಮಡೆಸ್ನಾನ ವಿರೋಧಿಸಿ ನಿಡುಮಾಮಿಡಿ ಶ್ರೀ ಉಪವಾಸ

ವೈದಿಕರು ಇದನ್ನೆಲ್ಲಾ ತಮ್ಮ ಮನಸ್ಸಿಗೆ ಬಂದಂತೆ ತಿರುಚಿದ್ದಾರೆ. ಶಿವ ಅವೈದಿಕ ಸಂಸ್ಕೃತಿಯ ಮೂಲ ನಾಯಕ. ರಾವಣ, ಮಹಿಷಾಸುರ, ಬಲಿ ಚಕ್ರವರ್ತಿ ದುಷ್ಟರಲ್ಲ. ಖಳನಾಯಕರಲ್ಲ. ಅವರು ಮಹಾನುಭಾವರು. ವೈದಿಕ ಸಂಸ್ಕೃತಿಗೆ ಅವರು ವಿರುದ್ಧ ಇದ್ದರು ಎಂಬ ಕಾರಣಕ್ಕೆ ಅವರಿಗೆ ರಾಕ್ಷಸ ಪಟ್ಟ ಕಟ್ಟಲಾಗಿದೆ ಎಂದು ಹರಿಹಾಯ್ದರು.

Nidumamidi Sri

ಇದೇ ವೇಳೆ ಶಿವನ ಭಕ್ತರೆಲ್ಲಾ ಹಿಂದೂಗಳು ಎಂಬ ಪೇಜಾವರ ಸ್ವಾಮೀಜಿ ಹೇಳಿಕೆಗೆ ನಿಡುಮಾಮಿಡಿ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದು, ಶಿವಭಕ್ತರೆಲ್ಲಾ ಹಿಂದೂಗಳು. ಅವರೆಲ್ಲಾ ಅವೈದಿಕರು. ಶಿವಭಕ್ತರಲ್ಲಿ 18 ಪಂಥ ಇವೆ. ಇದರಲ್ಲಿ ಒಂದೆರೆಡು ಪಂಥ ಹಿಂದೂಗಳು. ಉಳಿದ ಎಲ್ಲರು ಅವೈದಿಕರು. ಅವರು ಹಿಂದೂಗಳಲ್ಲ ಎಂದು ಪ್ರತಿಪಾದಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ganapati is not son of Parvati. He is son of Dakshayini, said Nidumamidi Sri in Mysuru on Friday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ