ಮೈಸೂರು: ಮತ್ತೊಮ್ಮೆ ಗಜಪಯಣದ ದಿನಾಂಕ ಬದಲು!

Posted By:
Subscribe to Oneindia Kannada

ಮೈಸೂರು, ಆಗಸ್ಟ್ 8: ಸತತ 2 ನೇ ಬಾರಿ ಗಜಪಯಣದ ದಿನಾಂಕ ಬದಲಾಗಿದ್ದು, ಆಗಸ್ಟ್ 14ರಂದು ಬೆಂಗಳೂರಿನಲ್ಲಿ ಸರ್ವಪಕ್ಷಗಳ ಸಭೆ ಹಿನ್ನೆಲೆ ಗಜಪಯಣ ಸಮಾರಂಭದ ದಿನಾಂಕವನ್ನು ಆ.12ಕ್ಕೆ ಬದಲಾಯಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಸ್ಪಷ್ಟಪಡಿಸಿದ್ದಾರೆ.

ವಿದೇಶದಲ್ಲೂ ರಾರಾಜಿಸಲಿದೆ ಮೈಸೂರು ದಸರೆಯ ಜಾಹೀರಾತು ಫಲಕ!

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ವಪಕ್ಷಗಳ ಸಭೆಯಲ್ಲಿ ಮೈಸೂರು ಭಾಗದ ಸಚಿವರು, ಶಾಸಕರು ಭಾಗಿಯಾಗುತ್ತಿರುವ ಕಾರಣದಿಂದ ಗಜಪಯಣ ಸಮಾರಂಭದ ದಿನಾಂಕವನ್ನು ಬದಲಾಯಿಸುವುದು ಅನಿವಾರ್ಯವಾಯಿತು ಎಂದಿದ್ದಾರೆ.

ಸಾಂಪ್ರದಾಯಿಕ ಮೈಸೂರು ದಸರಾಕ್ಕೆ ಲೋಗೋ, ಭಿತ್ತಿಚಿತ್ರ ಸಿದ್ಧ!

Gajapayana will begin from Nagapura Hadi in Hunsur taluk on August 12
Siddaramaiah Says, Mysuru Dasara Jamboo Savari Will Be Held On Sep 30th | Oneindia Kananda

ಇದೀಗ ಆಗಸ್ಟ್ 12ಕ್ಕೆ ಗಜಪಯಣ ಸಮಾರಂಭ ನಿಗದಿ ಮಾಡಲಾಗಿದ್ದು, ಆಗಸ್ಟ್ 12ರಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವೀರನಹೊಸಳ್ಳಿ ಸಮೀಪವಿರುವ ನಾಗಪುರ ಗಿರಿಜನ ಹಾಡಿ ಬಳಿ ಗಜಪಯಣ ಸಮಾರಂಭ ನಡೆಯಲಿದೆ. ಮೊದಲ ತಂಡದಲ್ಲಿ ಗಜಪಡೆಯ ನಾಯಕ ಅರ್ಜುನನ ಜೊತೆಗೆ ಬಲರಾಮ, ಅಭಿಮನ್ಯು, ಗಜೇಂದ್ರ, ವಿಜಯ, ಕಾವೇರಿ ಸೇರಿದಂತೆ ಇತರ ಆನೆಗಳು ಮೈಸೂರಿಗೆ ಆಗಮಿಸಲಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Gajapayana will begin from Nagapura Hadi in Hunsur taluk on August 12. District in charge Dr H C Mahadevappa will inaugurate Gajapayana at 11 am.
Please Wait while comments are loading...