ಮೈಸೂರಲ್ಲಿ ಒಂದು ಕೆಜಿ ಅವರೆಕಾಯಿ ಬೆಲೆ ಎಷ್ಟು ಗೊತ್ತಾ?

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ,11: ಈಗ ಅವರೆಕಾಯಿಯ ಕಾಲ.. ಬೆಂಗಳೂರಲ್ಲಿ ಅವರೇ ಮೇಳ ಶುರುವಾಗಿದೆ. ಅವರೆಯ ವಿವಿಧ ಆಹಾರಗಳು ಜನವರಿ 24ರವರೆಗೆ ಇಲ್ಲಿ ಲಭ್ಯವಾಗುತ್ತದೆ. ಮೈಸೂರಲ್ಲಿ ಹಳ್ಳಿಗಳ ಜಮೀನುಗಳಿಂದ ಪ್ರಾರಂಭವಾಗಿ ಸಂತೆ, ರಸ್ತೆಬದಿ.. ಹೀಗೆ ಎಲ್ಲೆಂದರಲ್ಲಿ ಮಾರಾಟದ ಭರಾಟೆ ಜೋರಾಗಿಯೇ ನಡೆಯುತ್ತಿದೆ.

ಈ ಬಾರಿ ಉತ್ತಮ ಹಿಂಗಾರು ಮಳೆ ಸುರಿದಿದ್ದರಿಂದ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಫಸಲು ಬಂದಿರುವುದು ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ಹುಣಸೂರು, ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಅವರೆಕಾಯಿ ಬೆಳೆದಿದ್ದು ಪ್ರತಿದಿನ ಟನ್‍ಗಟ್ಟಲೆ ಅವರೆಕಾಯಿ ಮಾರಾಟಕ್ಕೆ ಬರುತ್ತಿದೆ.[ಅವರೇ: ಅಡುಗೆಗೆ ಬೇಕಿಲ್ಲ, ಕೋತಿನಾಷ್ಟಕ್ಕೆ ಇರದಿರೇ ಆಗಲ್ಲ]

flat val beans

ರೈತರಿಗೆ ಸರಾಸರಿ ಕೆಜಿಗೆ 15 ರೂ.ನಷ್ಟು ಸಿಗುತ್ತದೆ. ಹುಣಸೂರು ವ್ಯಾಪ್ತಿಯಲ್ಲಿ ಬೆಳೆಯುವ ಅವರೆಕಾಯಿಯನ್ನು ವ್ಯಾಪಾರಿಗಳು ಖರೀದಿಸಿ ಬೆಂಗಳೂರು, ದೊಡ್ಡಬಳ್ಳಾಪುರ, ಮಂಗಳೂರು, ಬಾಂಬೆ, ಚೆನ್ನೈ, ತಮಿಳುನಾಡು, ಆಂಧ್ರಪ್ರದೇಶಕ್ಕೆ ಕಳುಹಿಸಲಾಗುತ್ತಿದೆ. ಹುಣಸೂರು ಬಳಿ ಮೈಸೂರು ರಸ್ತೆಯಲ್ಲಿರುವ ಪುಟ್ಟ ಗ್ರಾಮ ಬನ್ನಿಕುಪ್ಪೆಯಲ್ಲಿ ಅವರೆಕಾಯಿ ಮಾರಾಟ ದಿನಿತ್ಯ ಬಲು ಜೋರಾಗಿಯೇ ನಡೆಯುತ್ತಿದೆ.

ಹುಣಸೂರು ತಾಲೂಕಿನಾದ್ಯಂತ ಈ ಬಾರಿ 11,710 ಹೆಕ್ಟೇರ್ ಪ್ರದೇಶದಲ್ಲಿ ಅವರೆಕಾಯಿಯನ್ನು ಬೆಳೆಯಲಾಗಿದೆ. ಕೆಲವೆಡೆ ಮಳೆಗೆ ಗಿಡ ಹುಲುಸಾಗಿ ಬೆಳೆದಿದ್ದರೂ ಹೂಬಿಟ್ಟು ಮಿಡಿಕಚ್ಚದ ಕಾರಣ ರೈತರಿಗೆ ನಷ್ಟವಾಗಿದೆ.[ಅರೆರೆ.. ಅವರೆ ಮೇಳ.. ಕೊಂಚ ದುಬಾರಿ, ಆದ್ರೂ ಬರ್ರಿ!]

ಒಟ್ಟಾರೆ ಅವರೆಕಾಯಿ ಒಂದಷ್ಟು ರೈತರಿಗೆ ಆದಾಯ ತಂದಿದ್ದರೆ, ಮತ್ತೊಂದಷ್ಟು ಮಂದಿಗೆ ಕಹಿಯಾಗಿದೆ. ಇತ್ತ ಗ್ರಾಹಕರು ಬೆಲೆ ಕಡಿಮೆಯಾಗುತ್ತಾ ಎಂದು ಕಾಯುತ್ತಿದ್ದಾರೆ. ಮೈಸೂರಿನಲ್ಲಿ ಕೆಜಿಯೊಂದಕ್ಕೆ 20 ರಿಂದ 30 ರೂ.ವರೆಗೆ ತರಾವರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಅವರೆಕಾಯಿ ಮಾರಾಟ ಆಗುತ್ತಿದೆ?

* ಹುಣಸೂರು ತಾಲೂಕುವೊಂದರಲ್ಲೇ ದಿನಕ್ಕೆ 50 ರಿಂದ 60 ಟನ್ ಅವರೆಕಾಯಿ ಮಾರಾಟವಾಗುತ್ತಿದೆ.
* ಬನ್ನಿಕುಪ್ಪೆ ಮುಖ್ಯರಸ್ತೆಯಲ್ಲಿ ಪ್ರತಿದಿನ 30 ಟನ್ ಮಾರಾಟವಾಗುತ್ತಿದೆ.[ಅಪ್ಪೆಮಿಡಿ ಉಪ್ಪಿನಕಾಯಿ ಬೇಕಾ? ಭಟ್ಟರಿಗೆ ಫೋನ್ ಮಾಡಿ]
* ಎಪಿಎಂಸಿಯಲ್ಲಿ 11 ಟನ್, ಕೋರ್ಟ್ ಸರ್ಕಲ್ ಬಳಿ 10 ಟನ್, ಗ್ರಾಮೀಣ ಪ್ರದೇಶದ ಹೋಬಳಿ ಕೇಂದ್ರಗಳಲ್ಲಿ ಸುಮಾರು 10 ರಿಂದ 15 ಟನ್, ಸರಾಸರಿ ಮಾರಾಟವಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hyacinth Beans (AvareKalu) is called by many names such as Val Bean, Wild Field Bean, Flat Bean and Indian bean. Indian bean is specially used to make variety of dishes and snacks but one shouldn't over consume it suggests health experts. From few days high sale vegetable is flat val beans in Mysuru
Please Wait while comments are loading...